ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಏಕದೇವ ಆರಾಧನೆಯಿಂದ ಸ್ವರ್ಗ ಪ್ರಾಪ್ತಿ'

Last Updated 6 ಫೆಬ್ರುವರಿ 2013, 10:07 IST
ಅಕ್ಷರ ಗಾತ್ರ

ಸಿಂಧನೂರು: ಮನುಷ್ಯನ ಉನ್ನತಿ ಧರ್ಮದ ಉದ್ದೇಶವಾಗಿದ್ದು ಏಕದೇವ ಆರಾಧನೆಯಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಬೆಂಗಳೂರಿನ ಎಸ್‌ಕೆಎಸ್‌ಎಂ ಸಂಸ್ಥೆಯ ಇಬ್ರಾಹಿಂ ಕಲೀಲ್ ಅಭಿಪ್ರಾಯಪಟ್ಟರು.

ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಪೀಸ್ ಫಾರ್ ಹ್ಯುಮ್ಯಾನಿಟಿ ಚಾರಿಟೇಬಲ್ ಟ್ರಸ್ಟ್‌ನಿಂದ ಭಾನುವಾರ ಏರ್ಪಡಿಸಿದ್ದ ವಿಶ್ವಕ್ಕೆ ಶಾಂತಿಯ ಸಂದೇಶ ಸಾರ್ವಜನಿಕ ಪ್ರವಚನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಎಲ್ಲ ಧರ್ಮಗಳು ಒಂದೇ ದೇವರನ್ನು ಪೂಜಿಸಬೇಕೆಂದು ಬೋಧಿಸಿದ್ದರೂ ಹಲವು ಧರ್ಮಗಳನ್ನು ಮಾಡಿಕೊಂಡು ಪ್ರತ್ಯೇಕಗೊಂಡಿದ್ದೇವೆ.

ಮಹ್ಮದ್ ಪೈಗಂಬರ್, ಏಸು ಕ್ರಿಸ್ತ, ರಾಮ-ಕೃಷ್ಣರು ದೇವರಲ್ಲ. ಇವರೆಲ್ಲರೂ ದೇವರ ಆರಾಧನೆ ಮಾಡಬೇಕೆಂದು ಹೇಳಿದ್ದಾರೆ. ಆದರೆ ನಾವು ಅವರನ್ನೇ ದೇವರೆಂದು ಪ್ರಾರ್ಥಿಸುವ ಮೂಲಕ ನರಕದ ಹಾದಿ ಹಿಡಿದಿದ್ದೇವೆ.

ಎಲ್ಲ ಧರ್ಮಗಳು ಮನುಷ್ಯನನ್ನು ಕುರಿತು ಹೇಳಿವೆ. ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್, ಸಿಖ್ಖ್ ಮತ್ತಿತರ ಧರ್ಮ ಪ್ರವಾದಿಗಳು ಎಲ್ಲ ಮನುಷ್ಯರ ಉನ್ನತಿಯನ್ನೇ ಬಯಸಿದ್ದಾರೆ. ದೇವರಿಗೆ ಹುಟ್ಟು-ಸಾವು ಇಲ್ಲ ಎಂದು ವಿವರಿಸಿದರು.

ದಾವಣಗೆರೆಯ ಮುರುಘಾಮಠ ಬಸವಕೇಂದ್ರ ಮಹಾಸ್ವಾಮೀಜಿ, ಬಳ್ಳಾರಿ, ಧರ್ಮಕ್ಷೇತ್ರದ ಪಿ.ಆಂಥೋನಿರಾಜ್ ಮಾತನಾಡಿದರು. ಶೇಖ್ ಬಷೀರ್‌ಅಹ್ಮದ್ ಉಮ್ರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಬಾದರ್ಲಿ ಹಂಪನಗೌಡ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವನಗೌಡ ಗೊರೇಬಾಳ, ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಕೆ.ಕರಿಯಪ್ಪ, ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, ಟ್ರಸ್ಟ್ ಅಧ್ಯಕ್ಷ ಡಾ.ಹಫೀಜ್, ಕಾರ್ಯದರ್ಶಿ ಫಾರುಕ್‌ಸಾಬ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT