ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ಸಲಹೆ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ದೇಶದಲ್ಲಿ ಕೋಮು ಭಿನ್ನತೆಯ ಭಾವನೆ ದೂರವಾಗಲು ಹಿಂದೂ-ಮುಸ್ಲಿಮರ ನಡುವೆ ಸಾಮರಸ್ಯ ಮೂಡಬೇಕು~ ಎಂದು ಎಂದು ರಾಜ್ಯಸಭಾ ಸದಸ್ಯ ಎಂ.ರಾಮಾಜೋಯಿಸ್ ಹೇಳಿದರು.

ಸಾಧನಾ ಪ್ರಕಾಶನವು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಲೇಖಕ ಮುಜಫರ್ ಹುಸೇನ್ ಅವರ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಹಿಂದೂಗಳ ಭಾವನೆಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ಮುಸ್ಲಿಮರು ಬಿಡಬೇಕು. ಹಿಂದೂಗಳ ಭಾವನೆಗಳಿಗೂ ಬೆಲೆಕೊಡುವುದನ್ನು ಮುಸ್ಲಿಮರು ರೂಢಿಸಿಕೊಳ್ಳಬೇಕು. ಕೋಮು ಸಾಮರಸ್ಯ ಮೂಡಲು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ಬರಬೇಕು~ ಎಂದು ಅವರು ನುಡಿದರು.

`ಮುಸ್ಲಿಮರು ಬಹುಸಂಖ್ಯಾತ ಹಿಂದೂಗಳ ಭಾವನೆಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದರಿಂದ ತಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಚುನಾವಣೆಗಳಲ್ಲಿ ಆಯ್ಕೆಯಾಗುತ್ತಿಲ್ಲ. ಗೋಹತ್ಯೆ ಮಸೂದೆಗೆ ವಿರೋಧ ಹಾಗೂ ರಾಮ ಮಂದಿರ ನಿರ್ಮಾಣಕ್ಕೆ ತಡೆಯನ್ನೊಡ್ಡುತ್ತಿರುವುದು ಮುಸ್ಲಿಮರು ಚುನಾವಣೆಗಳಲ್ಲಿ ಸೋಲಲು ಪ್ರಮುಖ ಕಾರಣಗಳಾಗಿವೆ~ ಎಂದು ಅವರು ಹೇಳಿದರು.

`ಗೋಹತ್ಯೆ ನಿಷೇಧ ಕಾಯ್ದೆ ಸಂಪೂರ್ಣವಾಗಿ ಜಾರಿಯಾಗಬೇಕು. ಅಯೋಧ್ಯ, ಮಥುರ, ಕಾಶಿ ಸೇರಿದಂತೆ ವಿವಿಧೆಡೆ ಮುಸ್ಲಿಮರು ಆಕ್ರಮಿಸಿಕೊಂಡಿರುವ ದೇವಸ್ಥಾನಗಳನ್ನು ಹಿಂದೂಗಳಿಗೆ ಒಪ್ಪಿಸಬೇಕು~ ಎಂದರು.
`ಮುಸ್ಲಿಂ ನಾಯಕರು ತಮ್ಮ ಜನತೆಗೆ ಈ ವಿಷಯಗಳನ್ನು ಮನದಟ್ಟು ಮಾಡಿಸಿದರೆ, ಅವರು ಹಿಂದೂಗಳ ಮತವನ್ನು ಪಡೆಯಲು ಸಫಲರಾಗುತ್ತಾರೆ. ಆಗ ಅವರು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಕ್ಕೆ ಬರಬಹುದು~ ಎಂದು ಹೇಳಿದರು.

ಶ್ರೀರಾಮ ಸೇನೆ ಮುಖ್ಯಸ್ಥ  ಪ್ರಮೋದ್ ಮುತಾಲಿಕ್ ಮಾತನಾಡಿ, `ದೇಶದಲ್ಲಿ ಹಿಂದುಗಳ ಸ್ಥಿತಿ ಚಿಂತಾಜನಕವಾಗಿದೆ. ನಮ್ಮ ದೇಶದ ವಿರುದ್ಧ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವ ಪಾಕಿಸ್ತಾನದ ವಿರುದ್ಧ ಮತ್ತೆ ಸ್ನೇಹ ಸಂಬಂಧವನ್ನು ಬೆಳೆಸಲು ಕೇಂದ್ರ ಸರ್ಕಾರ ಯತ್ನಿಸುತ್ತಿರುವುದು ಅಕ್ಷಮ್ಯವಾಗಿದೆ~ ಎಂದರು.

`ನಮ್ಮ ಧರ್ಮ ರಕ್ಷಣೆಗೆ ಇನ್ನು ಗಾಂಧಿ ಮಾದರಿಯನ್ನು ಬಿಟ್ಟು, ಭಗತ್ ಸಿಂಗ್ ಮಾದರಿಯಲ್ಲಿ ಹೋರಾಟ ನಡೆಸಬೇಕಿದೆ. ಆದ್ದರಿಂದ ನಾವು ಉಪದೇಶ ಕೇಳುವುದನ್ನು ಬಿಟ್ಟು ಧರ್ಮ ರಕ್ಷಣೆಗಾಗಿ ಉಗ್ರ ಹೋರಾಟವನ್ನು ಕೈಗೊಳ್ಳಬೇಕಾಗಿದೆ~ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ.ಚಿದಾನಂದ ಮೂರ್ತಿ ಮಾತನಾಡಿ, `ಹಂಪಿಯ ಸುತ್ತಮುತ್ತಲಿರುವ ದೇವಾಲಯಗಳನ್ನು ಮಸೀದಿಗಳಾಗಿ ಪರಿವರ್ತಿಸಲಾಗುತ್ತಿದೆ. ಇದು ತಪ್ಪಬೇಕು~ ಎಂದು ಆಗ್ರಹಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT