ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಏಡ್ಸ್ ಪೀಡಿತರತ್ತ ಕರುಣೆ ಇರಲಿ'

Last Updated 18 ಡಿಸೆಂಬರ್ 2012, 8:34 IST
ಅಕ್ಷರ ಗಾತ್ರ

ಕಂಪ್ಲಿ: ಏಡ್ಸ್ ಮತ್ತು ಎಚ್‌ಐವಿ ಪೀಡಿತ ರನ್ನು ಭೇದ-ಭಾವದಿಂದ ಕಾಣದೆ ಪ್ರೀತಿಯಿಂದ ನೋಡುವಂತೆ  ಬಳ್ಳಾರಿ ನ್ಯಾಕೋ ಹಿಂದೂಸ್ತಾನ್ ಲೆಟೆಕ್ಸ್ ಲಿಮಿಟೆಡ್ ಸಂಸ್ಥೆ ಕಾರ್ಯಕ್ರಮ ಅಧಿಕಾರಿ ವಿನೋದ್‌ಕುಮಾರ್ ಮನವಿ ಮಾಡಿದರು.

ಷಾಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಸೋಮವಾರ ಪ್ರೌಢಶಾಲೆ ಮತ್ತು ಕಾಲೇಜ್ ವಿಭಾಗದ  ವಿದ್ಯಾರ್ಥಿಗಳಿಗೆ ಏಡ್ಸ್ ಮತ್ತು ಎಚ್‌ಐವಿ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಸಮಾರಂಭದಲ್ಲಿ ಮಾತನಾಡಿದರು.
ಏಡ್ಸ್ ಮತ್ತು ಎಚ್‌ಐವಿ  ರೋಗ ಗಳು ಶಾಪ ಮತ್ತು ಪೂರ್ವ ಜನ್ಮಗಳ ಫಲವಲ್ಲ. ಲೈಂಗಿಕ ಅಸುರಕ್ಷತೆಯಿಂದ ಹರಡುವ ರೋಗಗಳಾಗಿದ್ದು ಜಾಗೃತಿ ಅವಶ್ಯ ಎಂದರು.

ಏಡ್ಸ್ ಮತ್ತು ಎಚ್‌ಐವಿ ರೋಗಗಳ ಹರಡುವಿಕೆಗೆ ಕಾರಣಗಳು, ಹರಡುವ ಮಾರ್ಗಗಳು, ನಿಯಂತ್ರಣ ಮತ್ತು ಹತೋಟಿ, ತಪ್ಪು ತಿಳೀವಳಿಕೆಗಳು, ಲಕ್ಷಣಗಳು, ಚಿಕಿತ್ಸೆ ಮತ್ತು ಸುರಕ್ಷಿತ ಮಾರ್ಗಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಏಡ್ಸ್ ಮತ್ತು ಎಚ್‌ಐವಿ ರೋಗಗಳ ಜಾಗೃತಿ ಕುರಿತು ಗದಗ ಎಸ್.ವೈ. ಗಿಡ್ನಾಯಕನವರ ಕಲಾ ತಂಡದ ಕಲಾವಿದರು ಹಾಗೂ ಪ್ರವರ್ತಕ ಚಾಂದ್ ಭಾಷ್ ಮತ್ತು ಎ. ಬಸವರಾಜ್ ಜನಪದ ಹಾಡು, ನೃತ್ಯ, ನಾಟಕಗಳ ಪ್ರದರ್ಶನ ನಡೆಸಿದರು. ನಂತರ ಈ ಕುರಿತು ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಯಿತು.

ಪ್ರಾಚಾರ್ಯ ಬಿ. ಓಬಳೇಶ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಶೇಖರ್ ಹೊರಪೇಟೆ, ಉಪನ್ಯಾಸಕ ಕೆ. ಆನಂದಮೂರ್ತಿ, ಶಿಕ್ಷಕ ಪಂಪಾಪತಿ ಹಾಜರಿದ್ದರು. ಪಟ್ಟಣದ ವಿವಿಧ ಕಾಲೇಜು ಮತ್ತು ಪ್ರೌಢಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ 15 ರಿಂದ 45 ವರ್ಷ ವಯೋಮಾನದವರಿಗೆ ಈ ಕುರಿತು ಇದೇ ತಂಡ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT