ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನು ಮಾಡ್ಲಿ ಸ್ವಾಮಿ ನಾನೀಗ ನಾಯಿ ಪ್ರೇಮಿ

Last Updated 30 ಜುಲೈ 2012, 19:30 IST
ಅಕ್ಷರ ಗಾತ್ರ

ಮನೆಯಲ್ಲಿ ಸಾಕಿದ ಪ್ರಾಣಿಯ ಚಲನವಲನ ನೋಡಿ ಖುಷಿ ಪಡುವ ಪ್ರಾಣಿ ಪ್ರಿಯರಿಗೆ ಭಾನುವಾರ ಜಗದಗಲ ಹರುಷ. ಅದರಲ್ಲೂ ಮಾತು ಕೇಳುವ ತಮ್ಮ ನಾಯಿಯ ಸಾಮರ್ಥ್ಯ ಪ್ರದರ್ಶಿಸುವ ಆಟಗಳು, ಉತ್ಸಾಹ ಕಂಡು ಎಲ್ಲರೂ ಬೆರಗಾದವರೇ.

ಮನೆಮಗಳ ಸ್ಥಾನದಲ್ಲಿದ್ದ ನಾಯಿಗಳು ಫ್ಯಾಷನ್ ಶೋಗಾಗಿ ಭರ್ಜರಿ ತಯಾರಿ ನಡೆಸಿದ್ದವು. ಶರ್ಟ್, ಟೈ ಸೇರಿದಂತೆ ವಿಧವಿಧದ ಡ್ರೆಸ್ ತೊಟ್ಟು ಕಂಗೊಳಿಸುತ್ತಿದ್ದವು. ಸ್ಪರ್ಧೆಗೆ ಬಂದ ಓರಗೆಯವರ ಸ್ನೇಹ ಬೆಳೆಸಲು ನಾಯಿಗಳು ಮುಂದಾಗುತ್ತಿದ್ದರೂ ಅಲ್ಲಿ ಜಮಾಯಿಸಿದ್ದ ಹುಡುಗಿಯರು ನಾಯಿಗಳಿಗೆ ಪ್ರೀತಿಯ ಮಳೆ ಸುರಿಸುವುದರಲ್ಲಿ ತಲ್ಲೆನರಾಗಿದ್ದರು.
 
ಮುದ್ದು ನಾಯಿಗಳ ಪುಂಡಾಟ ನೋಡಿ ಬೆರಗಾಗಿದ್ದ ಮಕ್ಕಳು ಅವುಗಳಿಗೆ ನೀರು ಕುಡಿಸುವುದು, ಬಿಸ್ಕಿಟ್ ತಿನ್ನಿಸುವುದರಲ್ಲಿ ಬ್ಯುಸಿಯಾಗಿದ್ದರು. ಇನ್ನೊಂದು ಪುಟಾಣಿ ನಾಯಿ ತನಗ್ಯಾರ ಉಸಾಬರಿಯೂ ಬೇಡ ಎಂಬಂತೆ ತನ್ನೊಡತಿಯ ಭುಜಕ್ಕೆ ಬೆಚ್ಚಗೆ ಒರಗಿಕೊಂಡಿತ್ತು.

ನಾಯಿಗಳ ತುಂಟಾಟ, ಅವು ತೋರುವ ಪ್ರೀತಿ, ಹೇಳಿದಂತೆ ಮಾಡುವ ಅವುಗಳ ವಿಧೇಯತೆ ಕಂಡಾಗ ನಾಯಿ ಕಂಡರಾಗದವರೂ ಒಮ್ಮೆ `ಏನು ಮಾಡ್ಲಿ ಸ್ವಾಮಿ ನಾನೀಗ ನಾಯಿ ಪ್ರೇಮಿ~ ಎಂದು ಉಲ್ಲಾಸಭರಿತರಾಗಿ ಹೇಳೇ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT