ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋ ಇಂಡಿಯಾ 2011 ಆರಂಭ

Last Updated 9 ಫೆಬ್ರುವರಿ 2011, 7:20 IST
ಅಕ್ಷರ ಗಾತ್ರ

ಬೆಂಗಳೂರು (ಐಎಎನ್‍ಎಸ್): ಭಾರತೀಯ ವಾಯು ಸೇನೆಯ ವಿಮಾನ ಮತ್ತು ಹೆಲಿಕಾಪ್ಟರ್‍ಗಳ ರೋಮಾಂಚಕಾರಿ ಕಸರತ್ತುಗಳ ಜೊತೆಗೆ ದಕ್ಷಿಣ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2011 ಆರಂಭವಾಯಿತು.

ಏರೋ ಇಂಡಿಯಾದ ಎಂಟನೇ ದ್ವೈವಾರ್ಷಿಕ ಪ್ರದರ್ಶನವನ್ನು ಯಲಹಂಕದಲ್ಲಿರುವ ವಾಯು ಸೇನಾ ನೆಲೆಯಲ್ಲಿ ರಕ್ಷಣಾ ಸಚಿವ ಎ.ಕೆ. ಆಂಟನಿ ಉದ್ಘಾಟಿಸಿದರು. ನಲವತ್ತು ವಿದೇಶಿ ಪ್ರತಿನಿಧಿಗಳು, ಜಾಗತಿಕ ವೈಮಾನಿಕೋದ್ಯಮದ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಪ್ರದರ್ಶನವನ್ನು ರಕ್ಷಣಾ ಸಚಿವಾಲಯ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಜೊತೆಗೂಡಿ ಸಂಘಟಿಸಿದೆ. ಐದು ದಿನಗಳ ಈ ಪ್ರದರ್ಶನಕ್ಕೆ ದಕ್ಷಿಣ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನವೆಂಬ ಹೆಗ್ಗಳಿಕೆ ಇದೆ. ಇದರಲ್ಲಿ 29 ದೇಶಗಳ 380 ಸಂಸ್ಥೆಗಳು ಮತ್ತು 295 ಭಾರತೀಯ ಸಂಸ್ಥೆಗಳು ಭಾವಗಹಿಸುತ್ತಿದ್ದು ಅವರು ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ನೂತನ ತಂತ್ರಜ್ಞಾನವನ್ನು ಮತ್ತು ಉತ್ಪನ್ನಗಳನ್ನು ಪ್ರದರ್ಶಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT