ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್ ಇಂಡಿಯಾ: ಅಗ್ಗದ ವಿಮಾನ ಯಾನ ಸೌಲಭ್ಯ

Last Updated 17 ಫೆಬ್ರುವರಿ 2011, 17:25 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾದ (ಎಐ), ಏಳು ದೇಶಿ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಏಪ್ರಿಲ್ 30ರವರೆಗೆ ಅಗ್ಗದ ಪ್ರಯಾಣ ದರದ ವಿಶೇಷ ಕೊಡುಗೆ ಪ್ರಕಟಿಸಿದೆ.

ಪ್ರಯಾಣಿಕರ ಸೇವಾ ತೆರಿಗೆ ಮತ್ತು  ಬಳಕೆದಾರರ ಅಭಿವೃದ್ಧಿ ಶುಲ್ಕ ಹೊರತುಪಡಿಸಿ ಕೇವಲ ್ಙ 999ಗಳನ್ನು ಪಾವತಿಸಿ ಸಂಸ್ಥೆ ನಿಗದಿಪಡಿಸಿದ ಏಳು ಮಾರ್ಗಗಳಲ್ಲಿನ ಆಯ್ದ ವಿಮಾನಗಳ ಎಕಾನಮಿ ಕ್ಲಾಸ್‌ನಲ್ಲಿ ಒಮ್ಮುಖ ಪ್ರಯಾಣ ಕೈಗೊಳ್ಳಬಹುದು.

ತಿರುವನಂತಪುರಂ, ಕೊಚ್ಚಿ, ಕೋಯಿಕ್ಕೋಡ್, ಮುಂಬೈ, ಹೈದರಾಬಾದ್ ಮತ್ತು  ಅಹ್ಮದಾಬಾದ್‌ನಿಂದ ಹೊರಡುವ ಆಯ್ದ ವಿಮಾನಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯ ಇದೆ. ಮುಂಬೈ ಹೈದರಾಬಾದ್‌ನ ಮೂಲ ಪ್ರಯಾಣ ದರ  ್ಙ 999 ಆಗಿದ್ದು, ಪ್ರಯಾಣಿಕರ ಸೇವಾ  ಶುಲ್ಕ  ್ಙ 229 ಮತ್ತು ಬಳಕೆದಾರರ ಅಭಿವೃದ್ಧಿ ಶುಲ್ಕ ಸೇರಿದಂತೆ ಒಟ್ಟಾರೆ ಪ್ರಯಾಣ ದರ   ್ಙ1328 ಆಗಿರುತ್ತದೆ. ಸೇವಾ ತೆರಿಗೆಯನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.  ಈ ಏಳೂ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳಲ್ಲಿ ಪ್ರಯಾಣಿಕರು  ಈ ವಿಶೇಷ ಕೊಡುಗೆ ಅನ್ವಯ ಕನಿಷ್ಠ  ್ಙ 1220 ರಿಂದ ಗರಿಷ್ಠ  ್ಙ 1695ಗಳನ್ನು ಪಾವತಿಸಬೇಕಾಗುತ್ತದೆ. ಆಸಕ್ತರು 1800 180 1407 ಸಂಖ್ಯೆಗೆ ಉಚಿತ ಕರೆ ಮಾಡಿ ಇಲ್ಲವೇ www.airindia.in ಅಂತರ್‌ಜಾಲ ತಾಣಕ್ಕೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT