ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್ ಇಂಡಿಯಾ: ಆಹಾರ ಪೂರೈಕೆಗೆ ನಿರ್ಬಂಧ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತೀವ್ರ ಸ್ವರೂಪದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ, ಅಲ್ಪಾವಧಿ ದೂರದ ಪ್ರಯಾಣ ಸಂದರ್ಭದಲ್ಲಿ ಪ್ರಯಾಣಿಕರಿಗೆ ಬಿಸಿ, ಬಿಸಿ ಆಹಾರ ಪೂರೈಸುವುದನ್ನು ಸ್ಥಗಿತಗೊಳಿಸಿದೆ.

ಈ ನಿರ್ಬಂಧವು ಫೆಬ್ರುವರಿ 1ರಿಂದಲೇ ಜಾರಿಗೆ ಬಂದಿದೆ.
ಒಂದು ಗಂಟೆಯಿಂದ ಒಂದೂವರೆ ಗಂಟೆ ಅವಧಿ ಒಳಗಿನ ಕಡಿಮೆ ದೂರದ ಪ್ರಯಾಣ ಸಂದರ್ಭದಲ್ಲಿ  ಬಿಸಿ ಆಹಾರ ಬದಲಿಗೆ ಈ ಮೊದಲೇ ಪ್ಯಾಕ್ ಮಾಡಲಾಗಿದ್ದ ಕುರುಕಲು ತಿಂಡಿ, ನೀರು ಮತ್ತು ಟೆಟ್ರಾಪ್ಯಾಕ್‌ನಲ್ಲಿ ಹಣ್ಣಿನ ರಸ ನೀಡಲು ನಿರ್ಧರಿಸಿದೆ.
 
ಕಾಫಿ ಅಥವಾ ಚಹವನ್ನು ಕೋರಿಕೆ ಮೇರೆಗೆ ನೀಡಲಿದೆ. ಪ್ರಯಾಣದ ಅವಧಿ ಒಂದೂವರೆ ಗಂಟೆ ( 90 ನಿಮಿಷ) ಇದ್ದರೆ, ಸ್ಯಾಂಡ್‌ವಿಚ್ ಜತೆಗೆ ಕಾಫಿ ಅಥವಾ ಚಹ ಪೂರೈಸಲಾಗುವುದು.

ಎಕ್ಸಿಕ್ಯುಟಿವ್ ಕ್ಲಾಸ್‌ನ ಪ್ರಯಾಣಿಕರಿಗೆ ಈ ನಿರ್ಬಂಧ ಅನ್ವಯಿಸಲಾರದು. ಅವರಿಗೆ ಈ ಮೊದಲಿನಂತೆಯೇ ಬಿಸಿ ಆಹಾರ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT