ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಇಂಡಿಯಾ: ರೂ 1200 ಕೋಟಿ ಹೆಚ್ಚುವರಿ ನೆರವು

Last Updated 1 ಜನವರಿ 2011, 11:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಗೆ ಹೆಚ್ಚುವರಿ ್ಙ1200 ಕೋಟಿ ನೆರವು ನೀಡಲು ಸರ್ಕಾರ  ಅನುಮೋದನೆ ನೀಡಿದೆ.

ಪ್ರಸಕ್ತ ಸಾಲಿನಲ್ಲಿ ಏರ್ ಇಂಡಿಯಾಗೆ ನೀಡುತ್ತಿರುವ ಎರಡನೆಯ ಆರ್ಥಿಕ ನೆರವು ಇದಾಗಿದ್ದು, ಈ ಮೊತ್ತದಲ್ಲಿ ‘ಏಐ’ಬಾಕಿ ಉಳಿಸಿಕೊಂಡಿರುವ 25,000 ಉದ್ಯೋಗಿಗಳ ವೇತನ ಮತ್ತು ಇತರೆ ಭತ್ಯೆಗಳನ್ನು ಕೂಡಲೇ ಪಾವತಿಸುವಂತೆ ಸೂಚನೆ ನೀಡಲಾಗಿದೆ.

ವಾಣಿಜ್ಯ ವ್ಯವಹಾರಗಳ ಸಂಸದೀಯ ಸಮಿತಿ ಈ ಹೆಚ್ಚುವರಿ ನೆರವಿಗೆ ಅನುಮೋದನೆ ನೀಡಿದ್ದು, ‘ಇದರಿಂದ ‘ಏಐ’ ನ ಆರ್ಥಿಕ  ಪುನಶ್ಚೇತನ ಜತೆಗೆ, ಹಣಕಾಸು ವ್ಯವಹಾರಗಳ ಪ್ರಗತಿಯನ್ನೂ ನಿರೀಕ್ಷಿಸಲಾಗಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.

 ಆರ್ಥಿಕ ಪುನಶ್ಚೇತನ ಯೋಜನೆಯಡಿ ಮೊದಲ ಹಂತದ ನೆರವಾಗಿ ್ಙ 800 ಕೋಟಿಯನ್ನು ಸರ್ಕಾರ ಕಳೆದ ಫೆಬ್ರುವರಿಯಲ್ಲಿ ಏರ್ ಇಂಡಿಯಾಕ್ಕೆ ಪಾವತಿಸಿತ್ತು. ನಂತರ ಹೆಚ್ಚುರಿ ್ಙ 1200 ಕೋಟಿ ನೀಡುವಂತೆ ‘ಎಐ’ ಸರ್ಕಾರವನ್ನು ಕೋರಿತ್ತು.

‘ಹೆಚ್ಚುವರಿ ನೆರವನ್ನು ಹಂತ ಹಂತವಾಗಿ ನೀಡಲಾಗುವುದು. ಇದು ‘ಏಐ’  ಪ್ರಗತಿಯ ಮಾನದಂಡವನ್ನು ಅವಲಂಬಿಸಿರುತ್ತದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ನೆರವನ್ನು ಪ್ರಕಟಿಸುವಾಗ ವಾಣಿಜ್ಯ ವ್ಯವಹಾರಗಳ ಸಂಸದೀಯ ಸಮಿತಿ (ಸಿಸಿಇಎ) ‘ಎಐ’ ಬಾಕಿ ಉಳಿಸಿಕೊಂಡಿರುವ ಸಿಬ್ಬಂದಿಗಳ ವೇತನವನ್ನು ಕಡ್ಡಾಯವಾಗಿ ಪಾವತಿಸುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.

ಇದುವರೆಗೆ ಕಾರ್ಮಿಕರ ಒಕ್ಕೂಟ ಮತ್ತು ವಿಮಾನಯಾನ ಆಡಳಿತ ಮಂಡಳಿಗಳ ನಡುವೆ ಸಿಬ್ಬಂದಿಗಳ ವೇತನಕ್ಕೆ ಸಂಬಂಧಿಸಿದಂತೆ 10 ಒಪ್ಪಂದಗಳಾಗಿದ್ದು, ಈ ಒಪ್ಪಂದಗಳನ್ನು  ಮರು ಪರಿಶೀಲಿಸಲು ವಾಣಿಜ್ಯ ವ್ಯವಹಾರಗಳ ಸಂಸದೀಯ ಸಮಿತಿ, ರಾಷ್ಟ್ರೀಯ ವಿಮಾನಯಾನ ಸಂಸ್ಥೆ (ಎನ್‌ಎಸಿಐಎಲ್) ಗೆ ಅಧಿಕೃತ ಒಪ್ಪಿಗೆ ನೀಡಿದೆ.

ವಿಮಾನಯಾನ ಸಿಬ್ಬಂದಿಗಳ ವೇತನ ಮತ್ತು ಇತರೆ ಭತ್ಯೆಗಳ ಕಡಿತಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸದ್ಯ ವಿಮಾನಯಾನ ಸಂಸ್ಥೆಗಳ ಒಟ್ಟು ಆದಾಯ ಶೇಕಡ 18ರಷ್ಟನ್ನು ಮಾತ್ರ ವೇತನ ಒಳಗೊಂಡಿದೆ. ಜಾಗತಿಕವಾಗಿ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಶೇಕಡ 22ರಷ್ಟು ಆದಾಯವನ್ನು ವೇತನವಾಗಿ ನೀಡುತ್ತಿವೆ ಎಂದು ಕಾರ್ಮಿಕರ ಒಕ್ಕೂಟ ಹೇಳಿವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT