ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಟೆಲ್ ಟೀವಿಯಲ್ಲೇ ಕಮಲ್ ಹೊಸ ಚಿತ್ರ!

Last Updated 8 ಜನವರಿ 2013, 19:59 IST
ಅಕ್ಷರ ಗಾತ್ರ

ಏರ್‌ಟೆಲ್ ಡಿಜಿಟಲ್ ಟೀವಿ ಕಮಲ್ ಹಾಸನ್ ಅವರ ಬಹು ನಿರೀಕ್ಷಿತ `ವಿಶ್ವರೂಪಂ' ಚಲನಚಿತ್ರವನ್ನು ತನ್ನ `ಪೇ ಪರ್ ವ್ಯೆ' (ಪಿಪಿವಿ) ವೇದಿಕೆಯಲ್ಲಿ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಸಾರ ಮಾಡುತ್ತಿರುವುದಾಗಿ ಪ್ರಕಟಿಸಿದೆ. ಈ ಮೂಲಕ ಏರ್‌ಟೆಲ್ ಡಿಟಿಎಚ್ ಗ್ರಾಹಕರು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ 12 ತಾಸು ಮೊದಲೇ ಚಲನಚಿತ್ರವನ್ನು ತಮ್ಮ ಮನೆಯ ಟೀವಿ ಸೆಟ್‌ಗಳಲ್ಲೇ ವೀಕ್ಷಿಸುವ ಅವಕಾಶ ಕಲ್ಪಿಸಿಕೊಡಲಿದೆ.

ಈ ವಿನೂತನ ಕೊಡುಗೆಯ ಮೂಲಕ ಏರ್‌ಟೆಲ್ ಡಿಜಿಟಲ್ ಟೀವಿಯ ಗ್ರಾಹಕರು ಮನೆಯಲ್ಲಿಯೇ ಆರಾಮವಾಗಿ ಕುಳಿತು `ವಿಶ್ವರೂಪಂ' ಸಿನಿಮಾವನ್ನು ಎಂಪಿಇಜಿ4 ಡಿವಿಬಿ-ಎಸ್2 ತಂತ್ರಜ್ಞಾನದಲ್ಲಿ ಅತ್ಯುತ್ತಮ ದೃಶ್ಯ ಗುಣಮಟ್ಟ ಹಾಗೂ ಅಷ್ಟೇ ಉತ್ತಮವಾದ ಸೌಂಡ್‌ನೊಂದಿಗೆ ವೀಕ್ಷಿಸಿ ಆನಂದಿಸಬಹುದು.  

“ಈ ವಿನೂತನ ಪ್ರಯತ್ನದಲ್ಲಿ ಏರ್‌ಟೆಲ್ ಡಿಟಿಎಚ್ ಜತೆ ಕೈಜೋಡಿಸಿರುವುದಕ್ಕೆ ನನಗೆ ಅತೀವ ಹೆಮ್ಮೆ ಎನಿಸುತ್ತಿದೆ. ನಮ್ಮ ಈ ಪ್ರಯತ್ನವು ಮನೋರಂಜನೆ ಮತ್ತು ತಂತ್ರಜ್ಞಾನದ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಈ ಮೂಲಕ ಹೆಚ್ಚಿನ ಸಂಖ್ಯೆಯ ವೀಕ್ಷಕರು ತಮ್ಮ ಮನೆಯಲ್ಲಿ ಕುಳಿತು `ವಿಶ್ವರೂಪಂ' ಚಿತ್ರವನ್ನು ವೀಕ್ಷಿಸಬಹುದಾಗಿದೆ” ಎನ್ನುತ್ತಾರೆ ನಟ ಕಮಲ್ ಹಾಸನ್.

`ವಿಶ್ವರೂಪಂ' ಚಿತ್ರವು ಜನವರಿ 11ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಅದಕ್ಕೂ ಮುನ್ನ ಏರ್‌ಟೆಲ್ ಡಿಟಿಎಚ್‌ನ `ಪೇ ಪರ್ ವ್ಯೆ' ವೇದಿಕೆಯಲ್ಲಿ ಜನವರಿ 10ರಂದು ರಾತ್ರಿ 9.30ಕ್ಕೆ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಪ್ರಸಾರವಾಗಲಿದೆ. ಚಿತ್ರವನ್ನು ನೋಡಲು ಬುಕ್ ಮಾಡಲು ಇಚ್ಛಿಸುವ ಗ್ರಾಹಕರು ತಮ್ಮ ನೋಂದಾಯಿತ ಟೆಲಿಫೋನ್ ಸಂಖ್ಯೆಯಿಂದ (ರಿಜಿಸ್ಟರ್ಡ್ ಟೆಲಿಫೋನ್ ನಂಬರ್- ಆರ್‌ಟಿಎನ್) 54325ಕ್ಕೆ ್ಖಐಖಏಅ ಎಂದು ಎಸ್‌ಎಂಎಸ್ ಮಾಡಬೇಕು. ನಂತರ ಏರ್‌ಟೆಲ್ ಡಿಟಿಎಚ್ ಕಸ್ಟಮರ್ ಕೇರ್ ಪ್ರತಿನಿಧಿಗಳು ನಿಮಗೆ ಮರಳಿ ಕರೆ ಮಾಡಿ ಮುಂಗಡ ಬುಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ. ತಮಿಳು ಚಲನಚಿತ್ರವನ್ನುರೂ.1,200 ಮತ್ತು ತೆಲುಗು ಹಾಗೂ ಹಿಂದಿ ಆವೃತ್ತಿಯನ್ನುರೂ.500 ನೀಡಿ ಬುಕ್ ಮಾಡಬಹುದು. ತಮಿಳು ಆವೃತ್ತಿಯ ಪ್ರೀ-ಬುಕಿಂಗ್ರೂ.1,000 ಶುಲ್ಕದಲ್ಲಿ ಲಭ್ಯ.

ಇದರರ್ಥ ಟೀವಿಯಲ್ಲಿ ಸಿನಿಮಾ ಅಗ್ಗದ ಬೆಲೆಗೇನೂ ಸಿಗುತ್ತಿಲ್ಲ ಎಂದಾಯಿತು. ಟೀವಿಯಲ್ಲಿ ಕಮಲ್ ಹಾಸನ್ ಅಭಿನಯದ ಹೊಸ ಚಿತ್ರವನ್ನು ಮನೆಮಂದಿಯೆಲ್ಲಾ ಕುಳಿತು ನೋಡುವ ಆಮಿಷದ ಜೊತೆಗೆ ಹೊಸ ವ್ಯಾಪಾರದ ತಂತ್ರವೂ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT