ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಟೆಲ್: ಪ್ರಿಪೇಯ್ಡ ಗ್ರಾಹಕರಿಗೆ ಸ್ವ-ಸಹಾಯ ಸೇವೆ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಂಚೂಣಿ ದೂರವಾಣಿ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್, ದೇಶೀಯ ಪ್ರೀಪೇಯ್ಡ ಮೊಬೈಲ್ ಗ್ರಾಹಕರಿಗಾಗಿ  ಆನ್‌ಲೈನ್‌ನಲ್ಲಿ `ಸ್ವ-ಸಹಾಯ ಸೇವೆ~(self care services) ಪರಿಚಯಿಸಿದೆ.
 
ಈ ಯೋಜನೆಯಡಿ ಪ್ರಿಪೇಯ್ಡ ಗ್ರಾಹಕರು  www.airtel.in ತಾಣಕ್ಕೆ ಲಾಗಿನ್ ಆಗುವ ಮೂಲಕ ತಮ್ಮ ಖಾತೆಯಲ್ಲಿರುವ ಬಾಕಿ ಮೊತ್ತ, ರಿಚಾರ್ಜ್ ವಿವರ, ಮೌಲ್ಯವರ್ಧಿತ ಸೇವೆ, ಪ್ರತಿ ಕರೆ ಎಸ್‌ಎಂಎಸ್‌ಗಳಿಗೆ ಕಡಿತಗೊಂಡಿರುವ ದರ ವಿವರವನ್ನು ಪಡೆಯಬಹುದು. ಜತೆಗೆ ತಮ್ಮ ಖಾತೆಯನ್ನು  ತಾವೇ ನಿರ್ವಹಿಸಬಹುದು.

24*7 ಮಾದರಿಯಲ್ಲಿ ಈ ಸೇವೆ ಎಲ್ಲಿ, ಯಾವಾಗ ಬೇಕಾದರೂ ಪಡೆಯಬಹುದಾಗಿದೆ. ಇದಕ್ಕಾಗಿ ಚಂದಾದಾರರು ಏರ್‌ಟೆಲ್‌ನ ಹೋಮ್‌ಪೇಜ್‌ನಲ್ಲಿರುವ `ಮೈ ಅಕೌಂಟ್~ನಲ್ಲಿ ನೋಂದಾಯಿಸಿಕೊಳ್ಳಬೇಕು. 3ಜಿ ಸೇವಾ ವಿವರ ಸೇರಿದಂತೆ ಕೊನೆಯ 5 ರಿಚಾರ್ಜ್ ವಿವರಗಳನ್ನು ಇಲ್ಲಿಂದ ಪಡೆಯಬಹುದು. `ಮೈ ಏರ್‌ಟೆಲ್ ಮೈ ಆಫರ್~ ವಿಭಾಗದಲ್ಲಿ ದಿನದ ವಿಶೇಷ ಕೊಡುಗೆಗಳ ಬಗ್ಗೆಯೂ ಮಾಹಿತಿ ಲಭ್ಯವಿದೆ. ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಸುಮಾರು 19 ದೇಶಗಳಲ್ಲಿ ಏರ್‌ಟೆಲ್ ಸೇವೆ ಒದಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT