ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ಎನ್‌ಸಿಸಿ ಕೆಡೆಟ್‌ಗಳಿಗೆ ಗಾಯ

ಕವಿವಿ ಶಾಲ್ಮಲಾ ಹಾಸ್ಟೆಲ್‌ನಲ್ಲಿ ಕುಸಿದ ನೀರಿನ ತೊಟ್ಟಿ
Last Updated 25 ಡಿಸೆಂಬರ್ 2012, 6:19 IST
ಅಕ್ಷರ ಗಾತ್ರ

ಧಾರವಾಡ: ಸುಮಾರು 44 ವರ್ಷಗಳ ಹಿಂದೆ ನಿರ್ಮಿಸಲಾದ ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಹಾಸ್ಟೆಲ್‌ನ ನೀರು ಸಂಗ್ರಹಾಗಾರದ ತೊಟ್ಟಿಯ ಮೇಲೆ ಹತ್ತಾರು ಎನ್‌ಸಿಸಿ ಕೆಡೆಟ್‌ಗಳು ನಿಂತುಕೊಂಡ ಪರಿಣಾಮ ತೊಟ್ಟಿಯ ಮೇಲ್ಭಾಗವು ಕುಸಿದು ಕೆಡೆಟ್‌ಗಳು ಅದರಲ್ಲಿಯೇ ಬಿದ್ದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಏಳು ಜನರಿಗೆ ಗಾಯವಾಗಿದೆ. ಸಿಮೆಂಟ್ ಜೊತೆ ಇದ್ದ ಕಬ್ಬಿಣದ ರಾಡ್‌ಗಳು ತರುಚಿದ ಪರಿಣಾಮ ಕೈ ಕಾಲುಗಳಿಗೆ ತರುಚಿದ ಗಾಯಗಳಾಗಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ವಿಶ್ವವಿದ್ಯಾಲಯದ ಆವರಣದಲ್ಲಿ ಕೆಲ ದಿನಗಳಿಂದ ಎನ್‌ಸಿಸಿ ತರಬೇತಿ ಶಿಬಿರ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಿದ 100 ವಿದ್ಯಾರ್ಥಿಗಳಿಗೆ ಈ ಹಾಸ್ಟೆಲ್‌ನಲ್ಲಿ ವಾಸ್ತವ್ಯಕ್ಕೆ ಅನುಮತಿ ನೀಡಲಾಗಿತ್ತು. ಬೆಳಿಗ್ಗೆ ಸರದಿಯಲ್ಲಿ ನಿಂತು ಎನ್‌ಸಿಸಿ ಕೆಡೆಟ್‌ಗಳು ಉಪಹಾರ ಹಾಕಿಸಿಕೊಳ್ಳುತ್ತಿದ್ದರು. ಕೆಲವರು ತಳಮಟ್ಟದಲ್ಲಿರುವ ಈ ಸಂಗ್ರಾಹಾಗಾರದ ಮೇಲೆ ನಿಂತಿದ್ದರು. ಮೊದಲೇ ಶಿಥಿಲಾವಸ್ಥೆ ತಲುಪಿದ್ದ ಇದು ಆ ವಿದ್ಯಾರ್ಥಿಗಳ ಭಾರವನ್ನು ತಡೆದುಕೊಳ್ಳಲಾರದೇ 6-7 ಅಡಿಗಳಷ್ಟು ಅಗಲ ಬಿರುಕು ಬಿಟ್ಟು ಕುಸಿದು ಬಿತ್ತು.
ಸಂಜೆ ಸ್ಥಳಕ್ಕೆ ಭೇಟಿ ನೀಡಿದ ವಿ.ವಿ.ಯ ಸ್ಥಾನಿಕ ಎಂಜಿನಿಯರ್ ಎಸ್.ಪಿ.ಬಗಲಿ, ವಾರ್ಡನ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ವಿದ್ಯಾರ್ಥಿಗಳನ್ನು ಇಲ್ಲಿಂದ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.  ತಕ್ಷಣವೇ ತೊಟ್ಟಿಯ ಮೇಲ್ಭಾಗವನ್ನು ಕಬ್ಬಿಣದ ಸರಳುಗಳಿಂದ ಮುಚ್ಚಲಾಯಿತು.

ಭಜನಾ ಸ್ಪರ್ಧೆ ಇಂದು
ನವಲಗುಂದ: ತಾಲ್ಲೂಕಿನ ಯಮನೂರ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಯುವಕ ಮಂಡಳದ ವತಿಯಿಂದ ಸವಾಲ್ ಜವಾಬ್ ಭಜನಾ ಸ್ಪರ್ಧೆಯನ್ನು ಇದೇ 25 ರಂದು ರಾತ್ರಿ 9.30 ಕ್ಕೆ ಬಸ್ ನಿಲ್ದಾಣದ ಹತ್ತಿರ ಹಮ್ಮಿಕೊಳ್ಳಲಾಗಿದೆ.

ಸವಣೂರಿನ ಚಿಕ್ಕಮರಳಿಹಳ್ಳಿ ಗ್ರಾಮದ ಮಾರುತಿ ಸೇವಾಭಾಯಿ ಭಜನಾ ಸಂಘ ಹಾಗೂ ಕಣವಿ ಹೊನ್ನಾಪುರದ ಮಾರುತಿ ಭಜನಾ ಸಂಘ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT