ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಜೂನಿಯರ್ ಟೆನಿಸ್: ಭಾರತ ತಂಡಕ್ಕೆ ಪ್ರಶಸ್ತಿ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಭಾರತ ತಂಡ ದೋಹಾದಲ್ಲಿ ನಡೆದ ಚೊಚ್ಚಲ ಏಷ್ಯನ್ ಜೂನಿಯರ್ (14 ವರ್ಷ ವಯಸ್ಸಿನೊಳಗಿನವರ) ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿತು. ಖಲೀಫಾ ಇಂಟರ್‌ನ್ಯಾಷನಲ್ ಟೆನಿಸ್ ಮತ್ತು ಸ್ಕ್ವಾಷ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತ 2-0 ರಲ್ಲಿ ಹಾಂಕಾಂಗ್ ವಿರುದ್ಧ ಜಯ ಪಡೆಯಿತು.

ಭಾರತ ತಂಡದಲ್ಲಿ ಗರ್ವಿತ್ ಬಾತ್ರ, ಸಚಿನ್ ಕುಮಾರ್, ವಿಷ್ಣು ಪ್ರಸಾದ್ ಮತ್ತು ಕರ್ನಾಟಕದ ಬಿ.ಆರ್. ನಿಕ್ಷೇಪ್ ಇದ್ದರು. ಫೈನಲ್‌ನಲ್ಲಿ ನಿಕ್ಷೇಪ್ 6-4, 3-6, 6-2 ರಲ್ಲಿ ಹಾಂಕಾಂಗ್‌ನ ಜಾಕ್ ವ್ಯಾಂಗ್ ವಿರುದ್ಧ ಜಯ ಪಡೆದರೆ, ಗರ್ವಿತ್ ಬಾತ್ರ 6-1, 6-1 ರಲ್ಲಿ ಜಾಕಿ ಟಾಂಗ್ ಮೇಲೂ ಗೆಲುವು ಸಾಧಿಸಿದರು. ಸೆಮಿಫೈನಲ್‌ನಲ್ಲಿ ಭಾರತ 2-1 ರಲ್ಲಿ ಕಜಕಸ್ತಾನ ತಂಡವನ್ನು ಸೋಲಿಸಿತ್ತು.

ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಅಲ್ಲದೆ ಕಜಕಸ್ತಾನ, ಹಾಂಕಾಂಗ್, ವಿಯೆಟ್ನಾಂ, ಪಾಕಿಸ್ತಾನ ಸೇರಿದಂತೆ ಇತರ ತಂಡಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT