ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಶಾಲಾ ಚೆಸ್: ಕರ್ನಾಟಕಕ್ಕೆ 6 ಪದಕ

Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಮಂಗಳೂರು: ಕರ್ನಾಟಕದ ಉದಯೋನ್ಮುಖ ಆಟಗಾರರಾದ ಕೆ.ಎಸ್.ರಘುನಂದನ್ (ಬೆಂಗಳೂರು), ಎಚ್.ಎ.ಅಮೋಘ ಮತ್ತು ಎಚ್.ಆರ್.ಮಾನಸಾ (ಇಬ್ಬರೂ ಮೈಸೂರು) ಅವರು ನವದೆಹಲಿಯಲ್ಲಿ ಬುಧವಾರ ಮುಕ್ತಾಯಗೊಂಡ ಎಂಟನೇ ಏಷ್ಯನ್ ಶಾಲೆಗಳ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಮೂರು ಚಿನ್ನ, ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
 
ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಎಐಸಿಎಫ್ ವತಿಯಿಂದ ದೆಹಲಿ ಚೆಸ್ ಸಂಸ್ಥೆ ಆಶ್ರಯದಲ್ಲಿ ಈ ಆರು ದಿನಗಳ ಚಾಂಪಿಯನ್‌ಷಿಪ್ ನಡೆಯಿತು. 11 ರಾಷ್ಟ್ರಗಳ 415 ಆಟಗಾರರು ಕಣದಲ್ಲಿ ವಿವಿಧ ವಯೋವರ್ಗಗಳಲ್ಲಿ ಭಾಗವಹಿಸಿದ್ದರು.
 
ರಘುನಂದನ್, ಈ ಚಾಂಪಿಯನ್‌ಷಿಪ್‌ನ 11 ವರ್ಷದೊಳಗಿನವರ ಸಾದಾ ಮತ್ತು ರ‌್ಯಾಪಿಡ್ ವಿಭಾಗಗಳಲ್ಲಿ  ಚಿನ್ನದ ಪದಕಗಳನ್ನು ಪಡೆದನು. ಬ್ಲಿಟ್ಸ್ (ಮಿಂಚಿನ ಚೆಸ್) ವಿಭಾಗದಲ್ಲಿ ಕಂಚಿನ ಪದಕವೂ ಈತನ ಪಾಲಾಯಿತು.
 
ಅಮೋಘ ಎಚ್.ಎ, 15 ವರ್ಷದೊಳಗಿನವರ ಓಪನ್ ಚಾಂಪಿಯನ್‌ಷಿಪ್‌ನ ಬ್ಲಿಟ್ಸ್‌ನಲ್ಲಿ ಚಿನ್ನ, ಸಾಮಾನ್ಯ ಚೆಸ್‌ನಲ್ಲಿ ಕಂಚಿನ ಪದಕ ಗಳಿಸಿದನು. ಮಾನಸಾ, 13 ವರ್ಷದೊಳಗಿನವರ ವಿಭಾಗದಲ್ಲಿ ಕಂಚಿನ ಪದಕ ಪಡೆದಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT