ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಪೆಸಿಫಿಕ್ ಗೇಮ್‌ನಲ್ಲಿ ಚಿನ್ನ, ಬೆಳ್ಳಿ

Last Updated 19 ಡಿಸೆಂಬರ್ 2013, 5:54 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಕೊಡಗು ವಿದ್ಯಾಲಯದ ಆಪರ್ಚುನಿಟಿ ಶಾಲೆಯ ವಿದ್ಯಾರ್ಥಿಗಳಾದ ಕೆ.ಟಿ. ಪೊನ್ನಣ್ಣ, ಮೈಕಲ್ ಅಂತೋಣಿ ಮತ್ತು ಶಿಕ್ಷಕರಾದ ಸುನಿಲ್ ಕೆ ಆರ್ ಇವರುಗಳು ಆಸ್ಟ್ರೇಲಿಯಾದ  ನ್ಯೂ ಕ್ಯಾಸಲ್‌ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಗೇಮ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿದ್ದಾರೆ. 

ಮಾಸ್ಟರ್ ಪೊನ್ನಣ್ಣ ಕೆ.ಟಿ. ಭಾರತದ ಬಾಸ್ಕೆಟ್ ಬಾಲ್ ತಂಡದಲ್ಲಿ ಒಬ್ಬರಾಗಿ ಆಡಿದ್ದಾರೆ. ಪೈನಲ್ಸ್ ನಲ್ಲಿ ಭಾರತ, ಪಾಕಿಸ್ಥಾನದ ವಿರುದ್ಧ ಆಡಿ ಚಿನ್ನದ ಪದಕ ಗಳಿಸಿರು ಇವರು ಈ ಆಟಗಳಲ್ಲಿ ಟಾಪ್ ಶೂಟರ್ ಆಗಿದ್ದರು.

ಮೈಕಲ್ ಅಂತೋಣಿ ಭಾರತದ ಫುಟ್ ಬಾಲ್ ತಂಡದಲ್ಲಿ ಆಡಿ ಭಾರತ 5ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.  ಶಿಕ್ಷಕರಾದ ಸುನಿಲ್ ಕೆ. ಆರ್. ಕ್ರಿಕೆಟ್ ತಂಡದ ತರಬೇತುದಾರರಾಗಿ ಪೈನಲ್ಸ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಆಡಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಈ ಪಂದ್ಯಗಳಲ್ಲಿ ಭಾರತ ದೇಶವನ್ನು ಸೇರಿ ಒಟ್ಟು 39 ರಾಷ್ಟ್ರಗಳು ಪಾಲ್ಗೊಂಡಿದ್ದವು ಎಂದು ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT