ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಇಎಸ್ 2011 ಪರೀಕ್ಷೆ

Last Updated 3 ಜನವರಿ 2011, 11:10 IST
ಅಕ್ಷರ ಗಾತ್ರ


ಕೇಂ ದ್ರ ಲೋಕಸೇವಾ ಆಯೋಗವು ಪ್ರತಿವರ್ಷ ಮೇ-ಜೂನ್ ತಿಂಗಳಿನಲ್ಲಿ ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ ಸೇವಾ ಪರೀಕ್ಷೆಯನ್ನು ಅಖಿಲ ಭಾರತೀಯ ಮಟ್ಟದಲ್ಲಿ ನಡೆಸುತ್ತದೆ. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನದ ಮುಖಾಂತರ ಅರ್ಹತೆ ಪಡೆದ ನಂತರ, ಉದ್ಯೋಗ ಅವಕಾಶವನ್ನು ನೀಡಲಾಗುತ್ತದೆ.

 ಮೇ 14ರಂದು ಎಂಜಿನಿಯರಿಂಗ್ ಸೇವಾ ಪರೀಕ್ಷೆಯು ಪ್ರಾರಂಭವಾಗುತ್ತದೆ. ಒಟ್ಟು 3 ದಿನಗಳು ಪರೀಕ್ಷೆಯು ನಡೆಯುತ್ತದೆ. ಈಗಾಗಲೇ 25.12.10 ರಿಂದ ಈ ಪರೀಕ್ಷೆಯ ಬಗ್ಗೆ ಕೇಂದ್ರ ಲೋಕಸೇವಾ ಆಯೋಗದ ಅಂತರ್ಜಾಲದಲ್ಲಿ ಮಾಹಿತಿಯನ್ನು ನೀಡಲಾಗಿದ್ದು, ಪರೀಕ್ಷಾ ನೋಂದಣಿಗೆ ಕೊನೆಯ ದಿನಾಂಕ 24.1.2011 ಆಗಿರುತ್ತದೆ. ಈಗ ಅಭ್ಯರ್ಥಿಗಳು ಅಂತರ್ಜಾಲದಲ್ಲೇ ಪರೀಕ್ಷೆಯ ನಮೂನೆಯನ್ನು ಸಲ್ಲಿಸುವ ವ್ಯವಸ್ಥೆ ಇದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಧಾರವಾಡ ಪರೀಕ್ಷಾ ಕೇಂದ್ರಗಳಾಗಿರುತ್ತದೆ.
ಎಂಜಿನಿಯರಿಂಗ್ ಸೇವಾ ಪರೀಕ್ಷೆಯು ವಿದ್ಯುತ್, ಎಲೆಕ್ಟ್ರಾನಿಕ್ಸ್, ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗಗಳಿಗೆ ಸೀಮಿತವಾಗಿರುತ್ತದೆ. ಯಾವುದೇ ಎಂಜಿನಿಯರಿಂಗ್ ಕ್ಷೇತ್ರವಾದರು, ಪರೀಕ್ಷೆಯ ಸ್ವರೂಪ ಒಂದೇ ಆಗಿರುತ್ತದೆ.

ಎಂಜಿನಿಯರಿಂಗ್ ಸೇವಾ ಪರೀಕ್ಷೆಯಲ್ಲಿ, ಸಾಮಾನ್ಯ ಅರ್ಹತೆಯ ಪರೀಕ್ಷೆಯು ಎಲ್ಲಾ ಅಭ್ಯರ್ಥಿಗಳಿಗೂ ಸಾಮಾನ್ಯ ಪ್ರಶ್ನೆಪತ್ರಿಕೆ ಇರುತ್ತದೆ. ಈ ಸಾಮಾನ್ಯ ಪ್ರಶ್ನೆಪತ್ರಿಕೆಯಲ್ಲಿ ಒಟ್ಟು ಎರಡು ಭಾಗಗಳಿರುತ್ತದೆ. ಮೊದಲನೆಯ ಭಾಗದಲ್ಲಿ 100 ಅಂಕಗಳಿಗೆ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಸಾಮಾನ್ಯ ಪ್ರಶ್ನೆಗಳಿರುತ್ತದೆ ಮತ್ತು ಎರಡನೆಯ ಭಾಗದಲ್ಲಿ ಸಾಮಾನ್ಯ ಜ್ಞಾನ ಕುರಿತ ಪ್ರಶ್ನೆಗಳಿರುತ್ತದೆ.

ಇದರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆ, ಭೂಗೋಳ ಇತರ ವಿಷಯಗಳು, ವರ್ತಮಾನ, ಆಟ, ಮುಂತಾದವುಗಳ ಬಗ್ಗೆ ಪ್ರಶ್ನೆಗಳಿರುತ್ತದೆ. ಒಟ್ಟು ಸಾಮಾನ್ಯ ಅರ್ಹತೆಯ ಪರೀಕ್ಷೆಯ ಅಂಕಗಳು 200 ಹಾಗೂ ಪರೀಕ್ಷೆಯ ಅವಧಿ ಎರಡು ಗಂಟೆಗಳು.
ಎಂಜಿನಿಯರಿಂಗ್ ವಿಭಾಗದ ವಿದ್ಯುತ್, ಎಲೆಕ್ಟ್ರಾನಿಕ್ಸ್, ಸಿವಿಲ್ ಮತ್ತು ಮೆಕ್ಯಾನಿಕಲ್ ಪಠ್ಯಕ್ರಮಗಳನ್ನು ಒಟ್ಟು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೊದಲನೆಯ ಭಾಗದಲ್ಲಿ, ಎರಡನೆಯ ದಿನ ಬೆಳಗಿನ ಸಮಯದಲ್ಲಿ ಬಹು ಆಯ್ಕೆ ಪ್ರಶ್ನೆಪತ್ರಿಕೆ 200 ಅಂಕಗಳಿಗೆ ಎರಡು ಗಂಟೆ ಅವಧಿಗೆ ನಡೆಯುತ್ತಿದೆ, ನಂತರ ಮಧ್ಯಾಹ್ನದ ಅವಧಿಯಲ್ಲಿ ಸಾಂಪ್ರದಾಯಿಕ ಪ್ರಶ್ನೆ ಪತ್ರಿಕೆಯು 200 ಅಂಕಗಳಿಗೆ ಮೂರು ಗಂಟೆ ಅವಧಿಗೆ ನಡೆಯುತ್ತದೆ.

ಮೂರನೆಯ ದಿನ, ಎಂಜಿನಿಯರಿಂಗ್ ವಿಭಾಗದ, ಪಠ್ಯಕ್ರಮದ ಎರಡನೆಯ ಭಾಗದಲ್ಲಿ, ಬೆಳಗಿನ ಅವಧಿಯಲ್ಲಿ ಬಹು ಆಯ್ಕೆ ಪ್ರಶ್ನೆಪತ್ರಿಕೆ ಪುನಃ 200 ಅಂಕಗಳೊಂದಿಗೆ, ಎರಡು ಗಂಟೆಗೆ ಸೀಮಿತವಾಗಿ ನಡೆಯುತ್ತದೆ. ನಂತರ ಮಧ್ಯಾಹ್ನ 200 ಅಂಕಗಳಿಗೆ ಸಾಂಪ್ರದಾಯಿಕ ಪ್ರಶ್ನೆಪತ್ರಿಕೆಯು ಮೂರು ಗಂಟೆ ಅವಧಿಗೆ ನಡೆಯುತ್ತದೆ.

ಒಟ್ಟು ಎಂಜಿನಿಯರಿಂಗ್ ಸೇವಾ ಪರೀಕ್ಷೆಯ ಲಿಖಿತ ಪರೀಕ್ಷೆಯ ಅಂಕಗಳು 1000 ಆಗಿರುತ್ತವೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸಂದರ್ಶನದ ಪರೀಕ್ಷೆಯು ದೆಹಲಿಯಲ್ಲಿ ನಡೆಯುತ್ತದೆ. ಜಿ ನಿಯರಿಂಗ್ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು, ಪರೀಕ್ಷೆಗೆ ನಿಗದಿತ ಯೋಜನೆಯಲ್ಲಿ ಸಿದ್ಧಪಡಿಸಬೇಕು. ಈ ಪರೀಕ್ಷೆಯನ್ನು ಎದುರಿಸಲು ಅಭ್ಯರ್ಥಿಯು 21 ರಿಂದ 30 ವರ್ಷದೊಳಗೆ ಇರಬೇಕು. ವಯಸ್ಸಿನ ಅರ್ಹತೆ ಇತರ ಅಭ್ಯರ್ಥಿಗಳಿಗೆ ಸಡಿಲಿಕೆಯೂ ಇದೆ. ಎಂಜಿನಿಯರಿಂಗ್ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆಲಸವನ್ನು ಬಯಸುವ ಅಭ್ಯರ್ಥಿಗಳಿಗೆ ಹಿಂದಿ ಭಾಷೆಯ ಬಗ್ಗೆ ಜ್ಞಾನವಿದ್ದರೆ ಅಪೇಕ್ಷಣೀಯ.

ಎಂಜಿನಿಯರಿಂಗ್ ಸೇವಾ ಪರೀಕ್ಷೆಯ ಬಗ್ಗೆ ಅಗತ್ಯವಾದ ಮಾಹಿತಿ ಪಡೆಯಲು, ಅಂತರ್ಜಾಲದಲ್ಲಿ  upsc.gov.in ವೆಬ್ ತಾಣದಲ್ಲಿ ನೋಡಬಹುದು. ಮಾರುಕಟ್ಟೆಯಲ್ಲಿ ಈ ಪರೀಕ್ಷೆಯ ಬಗ್ಗೆ ಅನೇಕ ಪುಸ್ತಕಗಳು ದೊರೆಯುತ್ತವೆ.  ಐಇಎಸ್-2011 ಪರೀಕ್ಷೆಯ ಬಗ್ಗೆ ಬಹಳಷ್ಟು ಮಾಹಿತಿಗಳು ಅಂತರ್ಜಾಲದಲ್ಲಿ ಸಿಗುತ್ತದೆ.

ಅಗತ್ಯವಾದ ವೆಬ್ ತಾಣಗಳು:
iesacademy.com,
iesmade easy.org
onlineies.com
brilliant-tutorials.com
ಎಂಜಿನಿಯರಿಂಗ್ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ನಂತರ ಸಂದರ್ಶನದಲ್ಲಿ ಅರ್ಹತೆ ಪಡೆದು, ಭಾರತ ಸರ್ಕಾರದ ವಿವಿಧ ವಿಭಾಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಕನ್ನಡಿಗರು ಬಹಳ ಅಪರೂಪ.

ಈ ಎಂಜಿನಿಯರಿಂಗ್ ಸೇವಾ ಪರೀಕ್ಷೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಎಂಜಿನಿಯರಿಂಗ್ ಓದುತ್ತಿರುವ ಮೂರನೇ ವರ್ಷದಿಂದಲೇ, ಪರೀಕ್ಷೆಯ ಬಗ್ಗೆ ಸಿದ್ಧತೆ  ನಡೆಸಿದರೆ, ಯಶಸ್ಸನ್ನು ನಿರೀಕ್ಷಿಸಬಹುದು ಹಾಗೂ ಇತರ ಸಾರ್ವಜನಿಕ ರಂಗಕ್ಕೂ ಮತ್ತು ಖಾಸಗಿ ಕಂಪೆನಿಗಳ ಪರೀಕ್ಷೆಗೂ, ಇದು ಸಹಾಯವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT