ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್ ದಂಪತಿ ಅಕ್ರಮ ಆಸ್ತಿತನಿಖೆಗೆ ಸಮಿತಿ ರಚನೆ

Last Updated 2 ಫೆಬ್ರುವರಿ 2011, 17:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಎಎಸ್ ದಂಪತಿ ಅರವಿಂದ ಮತ್ತು ಟಿನು ಜೋಷಿ ಇವರಿಗೆ ಸೇರಿದ 360 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಕುರಿತು ತನಿಖೆ ನಡೆಸಲು ಮಧ್ಯಪ್ರದೇಶ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ.

ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಈ ಮಾಹಿತಿ ನೀಡಿ, ‘ಇತರರಿಗೆ ಮಾದರಿ ಆಗುವಂತಹ ಕ್ರಮ’ ಕೈಗೊಳ್ಳುತ್ತೇವೆ ಎಂದರು.ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ನಿರ್ಮಲಾ ಬಕ್ ತನಿಖೆ ನಡೆಸುತ್ತಿದ್ದು, ಆದಷ್ಟು ಬೇಗ ವರದಿ ಸಲ್ಲಿಸಬೇಕು ಎಂದು ಅವರಿಗೆ ಆದೇಶಿಸಲಾಗಿದೆ ಎಂದು ಚೌಹಾಣ್ ಹೇಳಿದರು.

ಈ ಮಧ್ಯೆ ಆದಾಯ ತೆರಿಗೆ ಇಲಾಖೆ ಆರೋಪಿ ದಂಪತಿಯ ಆದಾಯದ ಲೆಕ್ಕಾಚಾರ ನಡೆಸಿ, ವರದಿ ಯನ್ನು ಕೇಂದ್ರ ಕಚೇರಿಗೆ ಸಲ್ಲಿಸಿದ್ದಾರೆ. ಆದಾಯ ಮೊತ್ತ, ತೆರಿಗೆ ಬಾಕಿ, ವಸೂಲಿ ಮಾಡಬೇಕಾದ ಮೊತ್ತ  ಇತ್ಯಾದಿಗಳನ್ನು ಇನ್ನಷ್ಟೇ ಪ್ರಕಟಣೆ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT