ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎನ್‌ಜಿ ಲೈಫ್: ಮಹಿಳಾ ಸಲಹೆಗಾರರಿಗೆ ಆದ್ಯತೆ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಖಾಸಗಿ ಜೀವ ವಿಮೆ ಸಂಸ್ಥೆಗಳಲ್ಲಿ ಒಂದಾಗಿರುವ `ಐಎನ್‌ಜಿ ಲೈಫ್ ಇನ್ಶುರೆನ್ಸ್~ ಈಗ  10ನೇ ವರ್ಷಕ್ಕೆ ಕಾಲಿಟ್ಟಿದೆ. ಬೆಂಗಳೂರಿನಲ್ಲಿಯೇ ಪ್ರಧಾನ ಕಚೇರಿ ಹೊಂದಿರುವ ಖಾಸಗಿ ವಲಯದ ಏಕೈಕ  ಜೀವ ವಿಮೆ ಸಂಸ್ಥೆ ಎನ್ನುವುದು ಇದರ ಇನ್ನೊಂದು ಹೆಗ್ಗಳಿಕೆ.
ಒಟ್ಟಾರೆ ದೇಶದಲ್ಲಿ 23 ಖಾಸಗಿ ಜೀವ ವಿಮೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, `ಐಎನ್‌ಜಿ ಲೈಫ್..~ ಸದ್ಯಕ್ಕೆ 10ನೇ ಸ್ಥಾನದಲ್ಲಿ ಇದೆ.

ರಾಜ್ಯದಲ್ಲಿ ಸೇವೆ ಆರಂಭಿಸಿದ ದಿನದಿಂದಲೂ ಸಂಸ್ಥೆಯು ಮಹಿಳಾ ಸಲಹೆಗಾರರ ನೇಮಕಕ್ಕೆ ಆದ್ಯತೆ ನೀಡುತ್ತಲೇ ಬಂದಿದೆ. ವಿಮೆ ಪಾಲಿಸಿದಾರರು ಮಹಿಳಾ ಸಲಹೆಗಾರರ ದಕ್ಷ ಸೇವೆ ಒಪ್ಪಿಕೊಂಡಿರುವುದರಿಂದ ಸಲಹೆಗಾರರ ಹುದ್ದೆಗೆ ಅವರ ನೇಮಕವು  ಗರಿಷ್ಠ ಮಟ್ಟದಲ್ಲಿಯೇ ನಡೆಯುತ್ತಿದೆ.

2009ರಲ್ಲಿ ಶೇ 35ರಷ್ಟಿದ್ದ `ಮಹಿಳಾ ಸಲಹೆಗಾರರ~ ಪ್ರಮಾಣ ಈಗ ಶೇ 39ಕ್ಕೆ ಏರಿದೆ. ಇದು ಇನ್ನೂ ಹೆಚ್ಚಳಗೊಳ್ಳುವ ಸಾಧ್ಯತೆಗಳು ಇವೆ ಎಂದು  ಸಂಸ್ಥೆಯ ಮಾರಾಟ ವಿಭಾಗದ ನಿರ್ದೇಶಕ ಟಿ. ಕೆ. ಉತ್ತಪ್ಪ ಹೇಳುತ್ತಾರೆ.

ಮಹಿಳಾ ಸಲಹೆಗಾರರು ತಮ್ಮ ಈ ಹೊಸ ವೃತ್ತಿಯಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡಿದ್ದಾರೆ. ವಿಮೆ ಪಾಲಿಸಿದಾರರ ಮನವೊಲಿಕೆ ಮತ್ತು ಅವರಿಗೆ ವಿಮೆಯ ಮಹತ್ವ ತಿಳಿಸಿಕೊಡುವಲ್ಲಿ ಹೆಚ್ಚು ಸಮಯ ವ್ಯಯ ಮಾಡಿದರೆ ಮತ್ತು ನಿರಂತರವಾಗಿ ಪ್ರಯತ್ನಿಸಿದರೆ ಮಾತ್ರ ಫಲಪ್ರದವಾಗಲು ಸಾಧ್ಯ. ಅಂತಹ ಸಾಧನೆ ಹೆಣ್ಣುಮಕ್ಕಳಿಂದ ಆಗುತ್ತಿದೆ. ಅವರು ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮಪಡುತ್ತಿದ್ದಾರೆ.

ಪಿಯುಸಿ ಓದಿದ (10+2) ಕನಿಷ್ಠ ಅರ್ಹತೆ ಇದ್ದವರೂ ಸೂಕ್ತ ತರಬೇತಿ ಪಡೆದು `ಮಹಿಳಾ ಸಲಹೆಗಾರ~ರಾಗಿ ಕಾರ್ಯನಿರ್ವಹಿಸಬಹುದು. ಮಹಿಳೆಯರು ತಮಗೆ ಅನುಕೂಲ ಎನಿಸುವ ಸಮಯದಲ್ಲಿ ಈ ಸೇವೆ ನಿರ್ವಹಿಸಬಹುದು.  ಪತಿಯ ವರಮಾನಕ್ಕೆ ಪೂರಕವಾಗಿ ದುಡಿಯಲು ಬಯಸುವ ಅನೇಕ ಗೃಹಿಣಿಯರಿಗೂ ಇದು ಹೆಚ್ಚು ಪ್ರಯೋಜನಕಾರಿ.

`ಮಹಿಳಾ ಸಲಹೆಗಾರ~ ಆಗಲು ಬಯಸುವವರು  ಮೂರು ಬಗೆಯ ತರಬೇತಿ ಪಡೆದು ಸಿದ್ಧರಾಗಬೇಕಾಗುತ್ತದೆ. 50 ಗಂಟೆಗಳ ಕಡ್ಡಾಯ ಪೂರ್ವಭಾವಿ ತರಬೇತಿ. ಇದಕ್ಕೆ ಸಂಬಂಧಿಸಿದಂತೆ ನಡೆಯುವ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಬೇಕು.

ಆನಂತರ ಜೀವ ವಿಮೆ ಉತ್ಪನ್ನಗಳ ಮಾರಾಟ ತರಬೇತಿ. ಸಂಸ್ಥೆಯ ಮಾರಾಟ ವ್ಯವಸ್ಥಾಪಕರು ಮತ್ತು ಶಾಖೆಗಳ ಮ್ಯಾನೇಜರ್‌ಗಳ ಜತೆ ಪಾಲಿಸಿದಾರರ ಬಳಿಗೆ ತೆರಳಿ ಮಾಹಿತಿ ಪಡೆಯುವುದು. ಹೀಗೆ ಸೂಕ್ತ ತರಬೇತಿ ನಂತರವೇ ಮಹಿಳೆಯರಿಗೆ ವಿಮೆ ಪಾಲಿಸಿಗಳ ಮಾರಾಟ ಹೊಣೆಗಾರಿಕೆ ಒಪ್ಪಿಸಲಾಗುತ್ತದೆ ಎಂದು ಉತ್ಪಪ್ಪ ವಿವರಿಸುತ್ತಾರೆ.

ಸಂಸ್ಥೆಯ ಒಟ್ಟು 6 ಸಾವಿರ ಸಲಹೆಗಾರರಲ್ಲಿ ಶೇ 40ರಷ್ಟು ಮಹಿಳೆಯರು ಇದ್ದಾರೆ. ಕೆಲ ಶಾಖೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ಸಲಹೆಗಾರರು ಮಹಿಳೆಯರೇ ಆಗಿದ್ದಾರೆ. ಕೆಲ ಸಲಹೆಗಾರರು ಮಾಸಿಕ ಕನಿಷ್ಠ ್ಙ 20 ರಿಂದ ್ಙ 25 ಸಾವಿರದಷ್ಟು ಕಮಿಷನ್ ಪಡೆಯುತ್ತಾರೆ. ್ಙ 1 ಲಕ್ಷಕ್ಕಿಂತ ಹೆಚ್ಚು ಕಮಿಷನ್ ಪಡೆಯುವ ಮಹಿಳೆಯರೂ ಇದ್ದಾರೆ.
ಅರೆ- ನಗರ, ಪಟ್ಟಣಗಳಲ್ಲಿಯೂ ಮಹಿಳೆಯರು ಉದ್ಯೋಗ ಅವಕಾಶ ಪಡೆದುಕೊಂಡಿದ್ದಾರೆ.
 
ಈ ಹುದ್ದೆ ಆಯ್ದುಕೊಳ್ಳುವ ಆಸಕ್ತ ಮಹಿಳೆಯರು ಸಂಸ್ಥೆಯ ಶಾಖೆಗಳ ಮ್ಯಾನೇಜರ್‌ಗಳನ್ನು  ಸಂಪರ್ಕಿಸಬಹುದು ಎಂದು ಉತ್ತಪ್ಪ ಹೇಳುತ್ತಾರೆ.
ಈ ಉದ್ಯೋಗ ಆಯ್ಕೆ ಮಾಡಿಕೊಳ್ಳಲು ವಯೋಮಿತಿ ನಿಬಂಧನೆ ಇಲ್ಲ.
 
ನಿವೃತ್ತ ಶಿಕ್ಷಕಿಯರು, ಬ್ಯಾಂಕ್ ಸಿಬ್ಬಂದಿ ಕೂಡ ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ.   ಯುವತಿಯರು ಮತ್ತು ವಯಸ್ಸಾದವರಿಗೂ ಇಲ್ಲಿ  ಅವಕಾಶಗಳಿವೆ. ವಿಮೆ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿಯೂ ಸಂಸ್ಥೆಯು ಮುಂಚೂಣಿಯಲ್ಲಿ ಇದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT