ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸಿ ಸದಸ್ಯರ ವಿರುದ್ಧ ತನಿಖೆಗೆ ಕೇಜ್ರಿವಾಲ್ ಮುಂದು

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಭ್ರಷ್ಟಾಚಾರ ವಿರೋಧಿ ಆಂದೋಲನ (ಐಎಸಿ) ದ ಮೂವರು ಪ್ರಮುಖ ಸದಸ್ಯರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದು, ಈ ಕುರಿತು ಸಂಘಟನೆಯ `ಆಂತರಿಕ ಲೋಕಪಾಲ~ರಿಂದ ತನಿಖೆ ನಡೆಸಲಿದೆ ಎಂದು ಸಂಘಟನೆಯ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ಪ್ರಶಾಂತ ಭೂಷಣ್, ಅಂಜಲಿ ದಾಮನಿಯಾ ಮತ್ತು ಮಯಾಂಕ ಗಾಂಧಿ ಈ ಮೂವರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಅದಕ್ಕೆ ಸಂಬಂಧಿಸಿದಂತೆ ಎಲ್ಲ ಸಾಕ್ಷ್ಯಗಳನ್ನು ಲೋಕಪಾಲ್ ಎದುರು ಹಾಜರುಪಡಿಸುತ್ತೇವೆ. ಯಾರಾದರೂ ತಪ್ಪಿತಸ್ಥರಾಗಲಿ, ಅಂಥವರು ನಮ್ಮ ಸಂಘಟನೆಯಿಂದ ಹೊರ ನಡೆಯಬೇಕಾಗುತ್ತದೆ~ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. `ಆಂತರಿಕ ಲೋಕಪಾಲ~ದಲ್ಲಿ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳಾದ ಎ.ಪಿ.ಷಾ ಮತ್ತು ಜಸ್ಪಾಲ್ ಸಿಂಗ್ ಅವರು ಇದ್ದಾರೆ.

`ಭ್ರಷ್ಟಾಚಾರ ವಿರೋಧಿ ಸಂಸ್ಥೆಯು ಈ ಮೂವರ ವಿರುದ್ಧ `ಆಂತರಿಕ ಲೋಕಪಾಲ~ ತನಿಖೆಗೆ ಸೋಮವಾರ ದೂರು ದಾಖಲಿಸಲಿದೆ. ಮೂರು ತಿಂಗಳಲ್ಲಿ ತನಿಖೆ ನಡೆಸುವಂತೆ ಲೋಕಪಾಲವನ್ನು ವಿನಂತಿಸಲಾಗುತ್ತದೆ~ ಎಂದು ಅವರು ಹೇಳಿದ್ದಾರೆ.

ಈ  ವಿರುದ್ಧದ ಆರೋಪ ಕುರಿತು ಯಾರ ಬಳಿಯಾದರೂ ಸಾಕ್ಷ್ಯವಿದ್ದರೆ, ಅವರು ಲೋಕಪಾಲ ತಂಡದಲ್ಲಿರುವ ಮೂವರು ನ್ಯಾಯಮೂರ್ತಿಗಳನ್ನು ಸಂಪರ್ಕಿಸಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT