ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ: ಸುಜಯ್, ಪ್ರಫುಲ್‌ಗೆ ರ‌್ಯಾಂಕ್

Last Updated 20 ಮೇ 2012, 6:30 IST
ಅಕ್ಷರ ಗಾತ್ರ

ದಾವಣಗೆರೆ: ಪ್ರತಿಷ್ಠಿತ ಭಾರತೀಯ ತಾಂತ್ರಿಕ ಸಂಸ್ಥೆಗಳಲ್ಲಿನ (ಐಐಟಿ) ಪ್ರವೇಶಕ್ಕಾಗಿ ನಡೆದ ಅರ್ಹತಾ ಪರೀಕ್ಷೆಯಲ್ಲಿ ನಗರದ ಅನುಭವ ಮಂಟಪ- ತರಳಬಾಳು ಅಕಾಡೆಮಿಯ ಜಿ.ಡಿ. ಸುಜಯ್ 941ನೇ ಹಾಗೂ ಪ್ರಫುಲ್ ಎನ್. ಕುಲಕರ್ಣಿ 17,631ನೇ ರ‌್ಯಾಂಕ್ ಗಳಿಸಿದ್ದಾರೆ.

ಈ ಇಬ್ಬರೂ ವಿದ್ಯಾರ್ಥಿಗಳು ಪಿಯು ಜತೆಯಲ್ಲಿಯೇ ಐಐಟಿ ಅರ್ಹತಾ ಪರೀಕ್ಷೆಗೂ ಓದಿಕೊಂಡು, ಸಾಧನೆ ತೋರಿದ್ದಾರೆ. ಪರೀಕ್ಷೆ ತೆಗೆದುಕೊಂಡಿದ್ದ 20 ವಿದ್ಯಾರ್ಥಿಗಳಲ್ಲಿ ಸುಜಯ್ ಹಾಗೂ ಪ್ರಫುಲ್ ತೇರ್ಗಡೆಯಾಗಿದ್ದಾರೆ ಎಂದು ಪ್ರಾಂಶುಪಾಲ ಜೆ. ಲಿಂಗಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದ ನಿವಾಸಿ ಎಂಜಿನಿಯರ್ ಜಿ.ಆರ್. ದೇವರಾಜ್-ತಾರಾ ದಂಪತಿ ಪುತ್ರ ಸುಜಯ್, ಎಸ್ಸೆಸ್ಸೆಲ್ಸಿಯಲ್ಲಿ ಸಿಬಿಎಸ್‌ಇ ಪಠ್ಯಕ್ರಮದಲ್ಲಿ `ಎ 1~ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. `ಮುಂದೆ ಎಂಬಿಎ ಮಾಡಬೇಕು ಎಂಬ ಆಸೆ ಇದೆ. ಉನ್ನತ ಶಿಕ್ಷಣ ಮುಗಿಸಿ ಐಎಎಸ್ ಮಾಡಿ, ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಹಂಬಲವಿದೆ~ ಎಂದು ಸುಜಯ್ ತಿಳಿಸಿದರು.

ಎಂಜಿನಿಯರ್ ನಂದೀಶ್ ಆರ್. ಕುಲಕರ್ಣಿ ಹಾಗೂ ಸರ್ಕಾರಿ ಕಾಲೇಜಿನ ಉಪನ್ಯಾಸಕಿಯಾಗಿರುವ ಕೆ.ಎ. ಮಂಜುಳಾ ದಂಪತಿ ಪುತ್ರ ಪ್ರಫುಲ್  ಎನ್. ಕುಲಕರ್ಣಿ ಎಸ್ಸೆಸ್ಸೆಲ್ಸಿಯಲ್ಲಿಶೇ. 98.4 ಅಂಕ ಗಳಿಸಿ ಸಾಧನೆ ತೋರಿದ್ದರು. ಪಿಯು ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕೆ ಕಾಯುತ್ತಿದ್ದಾರೆ. `

ಕಾಲೇಜಿನ ಮಾಡುತ್ತಿದ್ದ ಬೋಧನೆ ಈ ಸಾಧನೆಗೆ ಕಾರಣವಾಯಿತು. ಹೊರರಾಜ್ಯದ ಬೋಧಕ ಸಿಬ್ಬಂದಿಯೂ ಕೆಲವು ತರಗತಿ ತೆಗೆದುಕೊಂಡಿದ್ದರು. ಇದರಿಂದಾಗಿ, ಪ್ರತಿಷ್ಠಿತ ಐಐಟಿಯಲ್ಲಿ ಪ್ರವೇಶ ಸಿಗುತ್ತಿದೆ. ಮುಂದೆ ಐಎಎಸ್ ಮಾಡಬೇಕು ಎಂಬ ಗುರಿ ಇದೆ~ ಎಂದು ಪ್ರಫುಲ್ ತಿಳಿಸಿದರು.

ಈ ಪರೀಕ್ಷೆಗೆ ಹಿಂದೆ, ಕರ್ನಾಟಕದ ವಿದ್ಯಾರ್ಥಿಗಳು ರಾಜಸ್ಥಾನದ ಕೋಟಾಕ್ಕೆ ಹೋಗಿ ತರಬೇತಿ ಪಡೆಯಬೇಕಿತ್ತು. ಇದನ್ನು ತಪ್ಪಿಸಲು, 2009-10ನೇ ಸಾಲಿನಲ್ಲಿ ನಗರದಲ್ಲಿಯೇ ಅಕಾಡೆಮಿ ಸ್ಥಾಪಿಸಲಾಗಿದೆ. ಇಲ್ಲಿ, ಐಐಟಿ, ಎಐಇಇಇ ಮತ್ತು ಎಐಐಎಂಟಿ ತರಬೇತಿ ನೀಡಲಾಗುತ್ತಿದೆ. 2ನೇ ವರ್ಷದ ತರಬೇತಿಯಲ್ಲಿ ಸುಜಯ್ ಹಾಗೂ ಪ್ರಫುಲ್ ಅತ್ಯುತ್ತಮ ಸಾಧನೆ ತೋರಿದ್ದಾರೆ.

ಕಳೆದ ವರ್ಷ ನಮ್ಮ ಕಾಲೇಜಿನ 6 ವಿದ್ಯಾರ್ಥಿಗಳು ಎಐಇಇಇಯಲ್ಲಿ ಉತ್ತಮ ರ‌್ಯಾಂಕ್ ಗಳಿಸಿ ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಈ ಸಾಲಿನಲ್ಲಿ 10 ಮಂದಿ ರ‌್ಯಾಂಕ್ ಗಳಿಸುವ ನಿರೀಕ್ಷೆ ಇದೆ ಎಂದು ಪ್ರಾಂಶುಪಾಲ ಲಿಂಗಪ್ಪ ತಿಳಿಸಿದರು.ಸಂಯೋಜಕ ಆರ್. ಬಾಬು, ಪ್ರಾಧ್ಯಾಪಕ ಕೆ. ಮಂಜಪ್ಪ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ್ದ್ದಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT