ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಂ ಗೀತೆ: ಧೋರಣೆ ಸರಿಯಲ್ಲ

Last Updated 24 ಮೇ 2012, 19:30 IST
ಅಕ್ಷರ ಗಾತ್ರ

`ಸಾಂದರ್ಭಿಕವಾಗಿ ಐಟಂ ಹಾಡುಗಳಿದ್ದರೆ ಯಾವ ಅಭ್ಯಂತರವೂ ಇಲ್ಲ~ ಎಂದು ಶಬಾನಾ ಆಜ್ಮಿ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಐಟಂ ಹಾಡುಗಳ ನೆಪದಲ್ಲಿ ಹುಡುಗಿಯರು ನಟರ ಪಾದದ ಮೇಲೆ ಬೀಳುವುದನ್ನು ಮಾತ್ರ ಅವರು ಪ್ರಶ್ನಿಸಿದ್ದಾರೆ.

“ಐಟಂ ಹಾಡುಗಳು ಚಿತ್ರೋದ್ಯಮದಲ್ಲಿ ಹಿಂದಿನಿಂದಲೂ ಇವೆ. ಆದರೆ ಅವು ಸಿನಿಮಾದಲ್ಲಿ ಪ್ರಸ್ತುತ ಎನಿಸುತ್ತಿದ್ದವು. ಓಂಕಾರಾ ಚಿತ್ರದಲ್ಲಿ ಬಿಪಾಶಾ `ಬೀಡಿ ಜಲೈಲೆ...~ ಹಾಡು ಅದ್ಭುತವಾಗಿದೆ. ಆ ಹಾಡಲ್ಲಿ ಬಿಪಾಶಾಳನ್ನು ಅನೇಕರು ಆರಾಧಿಸುತ್ತಾರೆ. ಓಲೈಸುತ್ತಾರೆ. ಹೆಣ್ತನವೆಂಬುದು ಅದರಲ್ಲಿ ರಾರಾಜಿಸುತ್ತದೆ. ಆದರೆ ಅನೇಕ ಐಟಂ ಹಾಡುಗಳಲ್ಲಿ ತೋರುವ ಧೋರಣೆಯ ಬಗ್ಗೆ ನನಗೆ ಅಸಮಾಧಾನವಿದೆ” ಎಂದು ಶಬಾನಾ ಹೇಳಿದ್ದಾರೆ.

`ಸಿನಿಮಾ ಸಮಾಜವನ್ನು ಪ್ರತಿನಿಧಿಸುತ್ತದೆ. ನಾಯಕಿ ಪಾತ್ರವಂತೂ ಬದಲಾಗುತ್ತಲೇ ಬಂದಿದೆ. ಹಿಂದಿ ಸಿನೆಮಾ ಕೂಡ ಇದಕ್ಕೆ ಹೊರತಲ್ಲ. ಮೊದಲು ವ್ಯಕ್ತಿಯಂತೆ, ಶಕ್ತಿಯಂತೆ, ಪಾತ್ರದಂತೆ ಅವಳನ್ನು ಬಿಂಬಿಸಲಾಗುತ್ತಿತ್ತು. ಈಗ ಉತ್ಪನ್ನದಂತೆ, ಮಾರಾಟದ ಸರಕಿನಂತೆ ಬಿಂಬಿಸುವ ಯತ್ನ ನಡೆಯುತ್ತಿದೆ. ಈ ಧೋರಣೆ ಕಡಿಮೆಯಾಗಬೇಕು~ ಎಂಬುದು ಶಬಾನಾ ಆಶಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT