ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ಮಾರುಕಟ್ಟೆ ಶೇ 17ರಷ್ಟು ವೃದ್ಧಿ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶಿ ಐ.ಟಿ ಸೇವೆ ಮತ್ತು ಉತ್ಪನ್ನಗಳ ಮಾರುಕಟ್ಟೆ ವಹಿವಾಟು ಮುಂದಿನ ವರ್ಷದ ಹೊತ್ತಿಗೆ ್ಙ 1,71,698 ಕೋಟಿಗಳಿಗೆ ತಲುಪಲಿದೆ ಎಂದು ಸಂಶೋಧನಾ ಮತ್ತು ಸಲಹಾ ಸಂಸ್ಥೆ ಸೈಬರ್ ಮೀಡಿಯಾ ರಿಸರ್ಚ್ ತಿಳಿಸಿದೆ.

ಈ ಮಾರುಕಟ್ಟೆಯ ವಹಿವಾಟಿನ ವಾರ್ಷಿಕ ಬೆಳವಣಿಗೆ ದರವು 2010ರಿಂದ 2014ರ ಅವಧಿಯಲ್ಲಿ ಶೇ 17ರಷ್ಟಿದೆ. ದೇಶಿ ಐ.ಟಿ ಸೇವೆ ಮತ್ತು ಐ.ಟಿ ಉತ್ಪನ್ನಗಳ ವಹಿವಾಟು ಮೂರು ವರ್ಷಗಳಲ್ಲಿ (2014ರ ಹೊತ್ತಿಗೆ) ್ಙ 2,33,930 ಕೋಟಿಗಳಿಗೆ ಏರಿಕೆಯಾಗಲಿದೆ ಎಂದು ಸಂಶೋಧನಾ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಐ.ಟಿ ಸೇವೆಗಳಲ್ಲಿನ ಆರೋಗ್ಯಕರ ಬೆಳವಣಿಗೆಯ ಫಲವಾಗಿ ಐ.ಟಿ      ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಉತ್ಪನ್ನಗಳು ಉತ್ತಮ ವಹಿವಾಟು ದಾಖಲಿಸಲಿವೆ ಎಂದು ಸೈಬರ್ ಮೀಡಿಯಾ ರೀಸರ್ಚ್ ಅಸೋಸಿಯೇಟ್ಸ್‌ನ ಉಪಾಧ್ಯಕ್ಷ ಅನಿರ್ಬನ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT