ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ: ವರಮಾನ ಹೆಚ್ಚಳ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ದೇಶದ ಐ.ಟಿ ಮತ್ತು ಐ.ಟಿ ಆಧಾರಿತ  ಸೇವೆಗಳ ಒಟ್ಟು ವರಮಾನವು ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ರೂ 5ಲಕ್ಷ ಕೋಟಿ ಗಡಿ ದಾಟಲಿದೆ ಎಂದು ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ `ನಾಸ್ಕಾಂ~ ಅಂದಾಜಿಸಿದೆ.

2011-12ನೇ ಸಾಲಿನಲ್ಲಿ `ಐ.ಟಿ~ ಆಧಾರಿತ ವಲಯ ಶೇ 16ರಷ್ಟು ಪ್ರಗತಿ ದಾಖಲಿಸಿದೆ. ಉದ್ಯಮದ ಪಾಲಿಗೆ ಇದು ಲಾಭದಾಯಕ ವರ್ಷ. ಆದರೆ, ಜಾಗತಿಕ ಆರ್ಥಿಕ ಅಸ್ಥಿರತೆ,  ಯೂರೋಪ್ ಬಿಕ್ಕಟ್ಟು, ದೇಶೀಯ ನೀತಿಗಳಲ್ಲಿನ ಲೋಪ ಇತ್ಯಾದಿ ಕಾರಣಗಳಿಂದ ಬರಲಿರುವ ಹಣಕಾಸು ವರ್ಷದಲ್ಲಿ `ಐ.ಟಿ~ ವರಮಾನ ಕುಸಿಯಬಹುದು. ಈ ಅವಧಿಯಲ್ಲಿ  ಸರಾಸರಿ ಪ್ರಗತಿ   ಶೇ 11ರಿಂದ 14ರಷ್ಟು  ಇರಬಹುದು ಎಂದು `ನಾಸ್ಕಾಂ~ ಮುಖ್ಯಸ್ಥ ರಾಜೇಂದ್ರ ಎಸ್. ಪವಾರ್ ಅಭಿಪ್ರಾಯಟ್ಟಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಫ್ಟ್‌ವೇರ್ ಸೇವೆಗಳ ರಫ್ತಿನ ಮೂಲಕ ್ಙ3.45 ಲಕ್ಷ ಕೋಟಿ ಮತ್ತು ದೇಶೀಯ ಮಾರಾಟದ ಮೂಲಕ 1.6 ಲಕ್ಷ ಕೋಟಿಗಳಷ್ಟು ವರಮಾನ ದಾಖಲಾಗಲಿದ್ದು, ಒಟ್ಟು ವಹಿವಾಟು 100 ಶತಕೋಟಿ ಡಾಲರ್ ದಾಟಲಿದೆ ಎಂದು ಪವಾರ್ ಹೇಳಿದ್ದಾರೆ.

2020ರ ವೇಳೆಗೆ ಐ.ಟಿ ಸೇವೆಗಳ ವರಮಾನವು ್ಙ11.25 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ. ಸದ್ಯಕ್ಕೆ ಉದ್ಯಮವು ವಾರ್ಷಿಕವಾಗಿ ಶೇ 13ರಷ್ಟು ಪ್ರಗತಿ ಕಾಣುತ್ತಿದೆ. ಆದರೆ, ದೇಶದಲ್ಲಿ ನೇರ ತೆರಿಗೆ ಸಂಹಿತೆ (ಡಿಟಿಸಿ) ಸಾಮಾನ್ಯ ಮಾರಾಟ ತೆರಿಗೆ ಮತ್ತು ವಿಶೇಷ ಆರ್ಥಿಕ ವಲಯಗಳಿಗೆ ಸಂಬಂಧಿಸಿದಂತೆ ಸಮರ್ಪಕವಾದ ನೀಲಿ ನಕ್ಷೆ ರೂಪಗೊಂಡಿಲ್ಲ. ಬ್ರೆಜಿಲ್, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಪಿಲಿಪ್ಪೀನ್ಸ್‌ಗಳಲ್ಲಿ ಐ.ಟಿ ಆಧಾರಿತ ಸೇವಾ ಸಂಸ್ಥೆಗಳಿಗೆ ನೀಡುವ ಉತ್ತೇಜನವನ್ನು ದೇಶದಲ್ಲೂ ನೀಡಬೇಕು  ಎಂದು ನಾಸ್ಕಾಂ ಅಧ್ಯಕ್ಷ ಸೋಮ್ ಮಿತ್ತಲ್ ಆಗ್ರಹಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ `ಐ.ಟಿ ಅಧಾರಿತ ಸೇವಾ ವಲಯ, 1 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶ ನೀಡಿದ್ದು, ನೌಕರರ ವೇತನವನ್ನೂ ಶೇ 10ರಿಂದ 14ರಷ್ಟು ಹೆಚ್ಚಿಸಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT