ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಎಫ್ ಬೀದರ್ ಓಪನ್ ಟೆನಿಸ್ ಟೂರ್ನಿ: ಸ್ಫೂರ್ತಿ, ಅನುಷ್ಕಾ ಮುನ್ನಡೆ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೀದರ್: ಬೆಂಗಳೂರಿನ ಸ್ಫೂರ್ತಿ ಶಿವಲಿಂಗಯ್ಯ ಇಲ್ಲಿ ನಡೆಯುತ್ತಿರುವ ಒಟ್ಟು 55 ಲಕ್ಷ ರೂಪಾಯಿ ಬಹುಮಾನ ಮೊತ್ತದ `ಬೀದರ್ ಓಪನ್ ಐಟಿಎಫ್ ಟೆನಿಸ್~ ಟೂರ್ನಿಯಲ್ಲಿ ಸೋಮವಾರ ತೀವ್ರ ಸೆಣಸಾಟ ಕಂಡ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆ ಸಾಧಿಸಿದರು.

ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಸ್ಪೂರ್ತಿ ಅವರು  ಎತಿ ಮೆಹ್ತಾ ವಿರುದ್ಧದ ಪಂದ್ಯದ ಮೊದಲ ಸೆಟ್‌ನಲ್ಲಿ 2-6 ರಿಂದ ಹಿಂದೆ ಬಿದ್ದರೂ, ಉಳಿದೆರಡು ಸೆಟ್‌ಗಳಲ್ಲಿ ಕ್ರಮವಾಗಿ 6-4, 6-3 ರಿಂದ ಗೆಲುವಿನ ನಗೆ ಚೆಲ್ಲಿದರು. 2ಗಂಟೆ 45 ನಿಮಿಷಗಳ ಕಾಲ ನಡೆದ ಈ ಪಂದ್ಯದ ಆರಂಭದಲ್ಲಿ  ಮೆಹ್ತಾ ಪೂರ್ಣ ಮೇಲುಗೈ ಸಾಧಿಸಿದ್ದರು. ಆದರೆ ಎರಡನೇ ಸೆಟ್‌ನಲ್ಲಿ ನೇರ ಸರ್ವ್ ಅನ್ನು ಕೈಚೆಲ್ಲಿದ ಮೆಹ್ತಾ, ಸತತ ಎರಡು `ಡಬಲ್ ಫಾಲ್ಟ್~ ಎಸಗಿದರು. ನಂತರ ಅವರು ಚೇತರಿಕೆಯ ಆಟವಾಡಿದ್ದೇ ಕಡಿಮೆ.

ಇನ್ನೊಂದು ಪಂದ್ಯದಲ್ಲಿ ಭಾರತದ ಪ್ರಾರ್ಥನಾ ತೋಂಬ್ರೆ 4-6, 6-4, 6-4 ರಿಂದ ಎಂಟನೇ ಶ್ರೇಯಾಂಕದ ಆಟಗಾರ್ತಿ ಚೀನಾ ತೈಪೆಯ ಪೆಯ್ ಚೀ ಲೀ ವಿರುದ್ಧ ಗೆಲುವು ಗಳಿಸಿದರು. ಉಕ್ರೇನ್‌ನ ಅಲೆಕ್ಸಾಂಡ್ರಾ ಕೊರಶಿವಿಲಿ ಅವರು ತಮ್ಮ ಮೊದಲ ಪಂದ್ಯದಲ್ಲಿ ಭಾರತದ ನಾಲ್ಕನೇ ಶ್ರೇಯಾಂಕದ ರಿಷಿಕಾ ಸುಂಕಾರ ಅವರನ್ನು 2-6, 6-0, 6-3ರಿಂದ ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ಭಾರತದ ಅನುಷ್ಕಾ ಭಾರ್ಗವ ಅವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಜಪಾನ್‌ನ ಸಾನೇ ಒಹ್ತಾ ಅವರ ವಿರುದ್ಧ 6-2, 6-7 (3), 6-2 ಸೆಟ್‌ಗಳಿಂದ ಜಯಗಳಿಸಿದರು. ಐದನೇ ಶ್ರೇಯಾಂಕದ ಅಂಕಿತಾ ರೈನಾ ಅವರು ಅತ್ಯುತ್ತಮ ಹೊಡೆತಗಳ ಮೂಲಕ ಗಮನಸೆಳೆದು ಭಾರತದವರೇ ಆದ ಸಾಯಿ ಸಂಹಿತಾ ಅವರ ವಿರುದ್ಧ 6-1, 6-1ರಲ್ಲಿ ಗೆದ್ದರು.

ಭಾರತದ ಅರಾಂಕ್ಸಾ ಅಂದ್ರಾದೆ ವಿರುದ್ಧ ಹಾಂಗ್‌ಕಾಂಗ್‌ನ ಹೂ ಚಿಂಗ್ ವೂ 6-3, 6-2ರಿಂದ ಗೆದ್ದರೆ,   ರಿಯಾ ಭಾಟಿಯಾ ವಿರುದ್ಧ ವಣಿಯ ದಾಂಗ್ವಾಲ್ ಅವರು 6-2, 6-2 ಗೆದ್ದರು. ಭಾರತದ ಅನೇ ಒಹ್ತಾ ವಿರುದ್ಧ ಅನುಷ್ಕಾ ಭಾರ್ಗವರಿಗೆ ಗೆಲುವು (6-2, 6-7 (3), 6-2). ಶಿಬಿಕಾ ಬರ್ಮನ್ ವಿರುದ್ಧ ನಾನ್ ನನ್ ಝಂಗ್ 6-0, 6-1ರಿಂದ ಗೆದ್ದರು. ಭಾರತದ ಅನುಷ್ಕಾ ಭಾರ್ಗವ 6-2, 6-7 (3), 6-2 ರಿಂದ ಗೆದ್ದರು.

ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಟೂರ್ನಿ ಉದ್ಘಾಟಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್, ಲೋಕಾಯುಕ್ತ ಡಿ ಐಜಿ ಅರುಣ್ ಚಕ್ರವರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT