ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ:ಸುಸ್ಥಿರ ಪ್ರಗತಿ ನಿರೀಕ್ಷೆ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು (ಐಎಎನ್‌ಎಸ್):  ಜಾಗತಿಕ ಆರ್ಥಿಕ ಅಸ್ಥಿರತೆ, ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟಿನ ನಡುವೆಯೂ ದೇಶೀಯ ಮಾಹಿತಿ ತಂತ್ರಜ್ಞಾನ ವಲಯ (ಐಟಿ) 2012ರಲ್ಲಿ ಉತ್ತಮ ವೃದ್ಧಿ ದರ ಕಾಯ್ದುಕೊಳ್ಳಲಿದೆ ಎಂದು ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ  ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಹೇಳಿದೆ.

ಜಾಗತಿಕ ಆರ್ಥಿಕ ಹಿಂಜರಿತದಿಂದ 2009-10ನೇ ಸಾಲಿನಲ್ಲಿ  ದೇಶೀಯ `ಐಟಿ~ ವಲಯದ ವೃದ್ಧಿ ದರ ಒಂದಂಕಿಗೆ ಇಳಿದಿತ್ತು. ಆದರೆ, ಪ್ರಸಕ್ತ ಅವಧಿಯಲ್ಲಿ ತಂತ್ರಾಂಶ ಸೇವೆಗಳ ರಫ್ತು ಸುಸ್ಥಿರ ಪ್ರಗತಿ ದಾಖಲಿಸುವ ನಿರೀಕ್ಷೆ ಇದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದೂ ಹೆಚ್ಚಿನ ರಫ್ತು ಲಾಭ ತರಲಿದೆ. ದೇಶೀಯ ಐಟಿ ವಲಯ ಶೇ 17ರಷ್ಟು ಪ್ರಗತಿ ದಾಖಲಿಸಲಿದ್ದು, 70 ಶತಕೋಟಿ ಡಾಲರ್ ವಹಿವಾಟು  ದಾಖಲಾಗುವ ನಿರೀಕ್ಷೆ ಇದೆ ಎಂದು ನಾಸ್ಕಾಂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT