ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಮಾರಕ ರೋಗ ತಡೆ: ಚುಚ್ಚುಮದ್ದು ಹಾಕಿಸಲು ಸಲಹೆ

Last Updated 5 ಏಪ್ರಿಲ್ 2013, 6:39 IST
ಅಕ್ಷರ ಗಾತ್ರ

ದೇವದುರ್ಗ: ಹುಟ್ಟಿದ 45 ದಿನಗಳಿಂದ ಮೂರುವರೆ ತಿಂಗಳ ಮಗುವಿಗೆ ಹರಡಲಿರುವ ಐದು ಮಾರಕ ರೋಗಳ ತಡೆಗೆ ಫೆನಟಾ ವಾಲೆಂಟ್ ಎಂಬ ಹೊಸ ಚುಚ್ಚುಮದ್ದನ್ನು ತಾಯಿಂದಿರುವ ಮಕ್ಕಳಿಗೆ ಹಾಕಿಸಬೇಕೆಂದು ವೈದ್ಯಾಧಿಕಾರಿ ಡಾ.ಪ್ರತಿಮಾ ಪಾಟೀಲ ಹೇಳಿದರು.

ತಾಲ್ಲೂಕಿನ ಗಬ್ಬೂರು ಗ್ರಾಮದ ಚಲುವಾದಿ ಓಣಿಯಲ್ಲಿ ಬರುವ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಸಿಲಾಗಿದ್ದ ಸರಳ ಸಮಾರಂಭದಲ್ಲಿ ಹೊಸದಾಗಿ ಬಂದಿರುವ ಚುಚ್ಚುಮದ್ದಿನ ಬಗ್ಗೆ ತಾಯಿಂದಿರಿಗೆ ಪರಿಚಯ ಮಾಡಿಕೊಟ್ಟರು.

ಹುಟ್ಟಿದ ಮಗುವಿಗೆ ಹರಡುವ ಕೆಮ್ಮು, ಕಾಮಲೆ, ಗಂಟಲು ನೋವು ಸೇರಿದಂಥೆ ಒಟ್ಟು ಐದು ಮಾರಕ ಕಾಯಿಲೆಗಳನ್ನು ಬರದಂಥೆ ಫೆನಟಾ ವಾಲೆಂಟ್ ಎಂಬ ಚುಚ್ಚುಮದ್ದು ಮಗುವಿಗೆ ಉಪಯೋಗವಾಗುತ್ತಿದ್ದು, ಇದನ್ನು ಪ್ರತಿಯೊಬ್ಬ ತಾಯಿಂದಿರು ನಿಮ್ಮ ಸಮೀಪದ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಸಹಾಯಕ ಹತ್ತಿರ ಕೇಳಿ ಹಾಕಿಸಿಕೊಳ್ಳಲು ಹೇಳಿದರು.

ಹುಟ್ಟಿದ ಮಗುವಿಗೆ ಒಂದುವರೆ ತಿಂಗಳು, ಎರಡೂವರೆ ತಿಂಗಳು ಮತ್ತು ಮೂರುವರೆ ತಿಂಗಳಲ್ಲಿ ಸದರಿ ಚುಚ್ಚುಮದ್ದನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು, ಇಲಾಖೆಯಲ್ಲಿ ಉಚಿತವಾಗಿ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಮಂಜುಳಾ, ಅಂಗನವಾಡಿ ಕಾರ್ಯಕರ್ತೆ ವಿರಜಾ, ಆಶಾ ಕಾರ್ಯಕರ್ತೆ ಗಿರಿಜಾ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆಯ ಸಂಗಮ್ಮ ಹಾಗೂ ಗ್ರಾಮದ ತಾಯಿಂದಿರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT