ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐನ್‌ಸ್ಟೀನ್ ದೇವರ ಪತ್ರ ಲಿಲಾವಿಗೆ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಮೇಧಾವಿ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್, ದೇವರ ಅಸ್ತಿತ್ವ ಪ್ರಶ್ನಿಸಿ ಪ್ರಸ್ತಾಪಿಸಿದ ಕೈಬರವಣಿಗೆಯ ಪತ್ರವನ್ನು ಆನ್‌ಲೈನ್ ಮೂಲಕ ಹರಾಜಿಗೆ ಇಡಲಾಗಿದೆ.

`ದೇವರ ಪತ್ರ~ (ಗಾಡ್ ಲೆಟರ್) ಎಂದೇ ಹೆಸರಾದ ಜರ್ಮನ್ ಭಾಷೆಯಲ್ಲಿರುವ ಈ ಪತ್ರವನ್ನು ಐನ್‌ಸ್ಟೀನ್ ತಮ್ಮ ಸಾವಿಗಿಂತ ಒಂದು ವರ್ಷ ಮುನ್ನ, ಅಂದರೆ 1955ರಲ್ಲಿ ಬರೆದಿದ್ದರು. ಧರ್ಮ, ದೇವರು ಇತ್ಯಾದಿ ಪ್ರಸ್ತಾಪ ಈ ಪತ್ರದಲ್ಲಿದೆ. ಈಗ ಈ ಪತ್ರದ ಹರಾಜಿಗೆ 30 ಲಕ್ಷ ಡಾಲರ್‌ಗಳನ್ನು ಕನಿಷ್ಠ ದರವಾಗಿ ನಿಗದಿ ಮಾಡಲಾಗಿದೆ.

ಐನ್‌ಸ್ಟೀನ್, ತತ್ವಜ್ಞಾನಿ ಎರಿಕ್ ಗಟ್‌ಕೈಂಡ್ ಅವರಿಗೆ ಪ್ರಿನ್ಸ್‌ಟನ್ ವಿವಿ ಲೆಟರ್ ಹೆಡ್‌ನಲ್ಲಿ ಈ ಪತ್ರ ಬರೆದಿದ್ದರು.
`ನನ್ನ ಮಟ್ಟಿಗೆ ಹೇಳುವುದಾದರೆ ದೇವರು ಎಂಬ ಪದವು ಮಾನವ ದೌರ್ಬಲ್ಯಗಳ ಫಲಿತ ಮೊತ್ತವೆಂಬಂತೆಯೇ ತೋರುತ್ತದೆ...~ ಎಂದೂ ಐನ್‌ಸ್ಟೀನ್ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT