ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐನ್‌ಸ್ಟೀನ್ ಹಿಂದಿಕ್ಕಿದ ಬಾಲೆಯ ಬೌದ್ಧಿಕ ಪ್ರತಿಭೆ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಬ್ರಿಟನ್ನಿನ 12 ವರ್ಷದ ಶಾಲಾ ಬಾಲೆಯೊಬ್ಬಳು ಬುದ್ಧಿಮತ್ತೆ ಪರೀಕ್ಷೆಯಲ್ಲಿ ಮೇಧಾವಿ ವಿಜ್ಞಾನಿಗಳಾದ ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ಅವರನ್ನು ಹಿಂದಿಕ್ಕಿದ್ದಾಳೆ!

ಬೌದ್ಧಿಕ ಮಾಪನ ಪರೀಕ್ಷೆಯೊಂದರಲ್ಲಿ 162 ಗುಣಾಂಕಗಳನ್ನು ಪಡೆದಿರುವ ಲಿವರ್‌ಪೂಲ್ ನಗರದ ಒಲಿವಿಯಾ ಮ್ಯಾನಿಂಗ್ ಎಂಬ ಪೋರಿಯೇ ಈ ಸಾಧನೆ ಮಾಡಿರುವ ಬಾಲೆ.

ಈಕೆಯ ಬೌದ್ಧಿಕ ಮಟ್ಟದ ಗುಣಾಂಕ ಐನ್‌ಸ್ಟೀನ್ ಹಾಗೂ ಹಾಕಿಂಗ್ ಅವರ ಬುದ್ಧಿಮತ್ತೆಗೆ ಹೋಲಿಸಿದರೆ 2 ಗುಣಾಂಕಗಳಷ್ಟು ಜಾಸ್ತಿ ಇದೆ. ಈ ಇಬ್ಬರು ವಿಜ್ಞಾನಿಗಳ ಬೌದ್ಧಿಕ ಗುಣಾಂಕ 160 ಇತ್ತು.  ಇದರೊಂದಿಗೆ ಜಗತ್ತಿನಲ್ಲಿರುವ ಪ್ರಚಂಡ ಬುದ್ಧಿಮತ್ತೆಯ ಶೇ 1ರಷ್ಟು ಜನರ ಸಾಲಿಗೆ ಒಲಿವಿಯಾ ಸೇರಿದ್ದಾಳೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT