ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಟ್ವೆಂಟಿ-20: ಸೂಪರ್ ಕಿಂಗ್ಸ್ ಶುಭಾರಂಭ

Last Updated 8 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ: ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎರಡು ರನ್‌ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೂಪರ್ ಕಿಂಗ್ಸ್ ತಂಡ ಶ್ರೀಕಾಂತ್ ಅನಿರುದ್ಧ್ (64, 55 ಎಸೆತ, 6 ಬೌಂ, 2 ಸಿಕ್ಸರ್) ಅವರ ಭರ್ಜರಿ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 153 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನಟ್ಟಿದ ಗೌತಮ್ ಗಂಭೀರ್ ನೇತೃತ್ವದ ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 151 ರನ್ ಗಳಿಸಲಷ್ಟೇ ಯಶಸ್ವಿಯಾಯಿತು. ಜಾಕ್ ಕಾಲಿಸ್ (54, 42 ಎಸೆತ, 7 ಬೌಂ) ಅವರ ಹೋರಾಟ ವ್ಯರ್ಥವಾಯಿತು. ಕೋಲ್ಕತ್ತ ತಂಡ ಒಂದು ಹಂತದಲ್ಲಿ 15 ಓವರ್‌ಗಳಲ್ಲಿ 2 ವಿಕೆಟ್‌ಗೆ 112 ರನ್ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಬಳಿಕ ಹಠಾತ್ ಕುಸಿತ ಕಂಡಿತು. ಕೊನೆಯಲ್ಲಿ ಮನೋಜ್ ತಿವಾರಿ (15 ಎಸೆತಗಳಲ್ಲಿ 27) ಅಬ್ಬರಿಸಿದರೂ ಕೋಲ್ಕತ್ತಕ್ಕೆ ಗೆಲುವು ಎಟುಕದೇ ಉಳಿಯಿತು. ಟಿಮ್ ಸೌಥಿ ಎಸೆದ ಕೊನೆಯ ಓವರ್‌ನಲ್ಲಿ ಗೆಲುವಿಗೆ 9 ರನ್ ಬೇಕಿತ್ತು. ಆದರೆ ತಂಡ 6 ರನ್‌ಗಳು ಮಾತ್ರ ಬಂದವು.

ಇದಕ್ಕೂ ಮೊದಲು ಟಾಸ್ ಗೆದ್ದ ಮಹೇಂದ್ರ ಸಿಂಗ್ ದೋನಿ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಮುರಳಿ ವಿಜಯ್ (4) ಅವರನ್ನು ತಂಡ ಬೇಗನೇ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ರೈನಾ (33, 29 ಎಸೆತ, 4 ಬೌಂ) ಮತ್ತು ಶ್ರೀಕಾಂತ್ ಎರಡನೇ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ನೀಡಿದರು. ಶ್ರೀಕಾಂತ್ ಆ ಬಳಿಕ ದೋನಿ (21 ಎಸೆತಗಳಲ್ಲಿ 29) ಜೊತೆ ಸೇರಿಕೊಂಡು ಮೂರನೇ ವಿಕೆಟ್‌ಗೆ 49 ರನ್‌ಗಳನ್ನು ಕಲೆಹಾಕಿದರು. ಇದರಿಂದ ಮೊತ್ತ 150ರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್: ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 153 (ಶ್ರೀಕಾಂತ್ ಅನಿರುದ್ಧ್ 64, ಸುರೇಶ್ ರೈನಾ 33, ಮಹೇಂದ್ರ ಸಿಂಗ್ ದೋನಿ 29, ಅಲ್ಬಿ ಮಾರ್ಕೆಲ್ ಔಟಾಗದೆ 15, ಜಾಕ್ ಕಾಲಿಸ್ 34ಕ್ಕೆ 2, ಇಕ್ಬಾಲ್ ಅಬ್ದುಲ್ಲ 26ಕ್ಕೆ 1, ಪಠಾಣ್ 19ಕ್ಕೆ 1). ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 151 (ಮನ್ವಿಂದರ್ ಬಿಸ್ಲಾ 27, ಜಾಕ್ ಕಾಲಿಸ್ 54, ಯೂಸುಫ್ ಪಠಾಣ್ 11, ಮನೋಜ್ ತಿವಾರಿ 27, ಶಾದಾಬ್ ಜಕಾತಿ 26ಕ್ಕೆ 1, ಆರ್. ಅಶ್ವಿನ್ 26ಕ್ಕೆ 1).

ಫಲಿತಾಂಶ: ಸೂಪರ್ ಕಿಂಗ್ಸ್‌ಗೆ 2 ರನ್ ಜಯ; 2 ಪಾಯಿಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT