ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಿಂದ ಕ್ರಿಕೆಟ್‌ಗೆ ಅಪಾಯ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ):  ಐಪಿಎಲ್‌ನಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಭಾರಿ ಅಪಾಯವಿದೆ ಎಂದು         ವೆಸ್ಟ್‌ಇಂಡೀಸ್ ತಂಡದ ಮಾಜಿ ಆಟಗಾರ ಕಾರ್ಲ್ ಹೂಪರ್ ಆತಂಕ ವ್ಯಕ್ತಪಡಿಸಿದ್ದಾರೆ.

`ಸದ್ಯ ಕ್ರಿಕೆಟ್‌ಗಿರುವ ದೊಡ್ಡ ಅಪಾಯವೆಂದರೆ ಅದು  ಐಪಿಎಲ್~ ಎಂದು ಹೇಳಿದ್ದಾರೆ.
ಟ್ವೆಂಟಿ-20 ವಿಶ್ವ ಚಾಂಪಿಯನ್ ಆಗಿರುವ  ವೆಸ್ಟ್‌ಇಂಡೀಸ್ ತಂಡದ ಆಟಗಾರರ ಜೊತೆ ಕ್ರಿಕೆಟ್ ಮಂಡಳಿಯು ಕೇಂದ್ರೀಯ ಗುತ್ತಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಅವರೆಲ್ಲಾ ಐಪಿಎಲ್ ಮೊರೆ ಹೋಗುವ ಸಾಧ್ಯತೆ ಇದೆ ಎಂದೂ ಹೂಪರ್ ನುಡಿದಿದ್ದಾರೆ.

ಕೆರಿಬಿಯನ್ ನಾಡಿನ ಕ್ರಿಸ್ ಗೇಲ್ ಈ ಹಿಂದೆ ಐಪಿಎಲ್‌ನಲ್ಲಿ ಆಡಲು ಮುಂದಾಗಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಒಂದು ವರ್ಷ ಅವರು ದೇಶದ ತಂಡದಿಂದ ಹೊರಗುಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT