ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಒ ಮಾಹಿತಿ ಬಹಿರಂಗಕ್ಕೆ ಚಾಲನೆ

Last Updated 26 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಈ ಹಿಂದೆ ಪ್ರಕಟಿಸಿರುವ ಮತ್ತು ನಿರ್ವಹಿಸಿರುವ  ಆರಂಭಿಕ ಸಾರ್ವಜನಿಕ ಕೊಡುಗೆಗಳ (ಐಪಿಒ) ಸಾಧನೆ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಮರ್ಚೆಂಟ್ಸ್ ಬ್ಯಾಂಕರ್ಸ್‌ಗಳು ಮುಂದಾಗಿವೆ. 

  ಹೂಡಿಕೆದಾರರ ಹಿತಾಸಕ್ತಿಯಿಂದ `ಐಪಿಒ~ ಸಾಧನೆ ದಾಖಲೆಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮರ್ಚೆಂಟ್ಸ್ ಬ್ಯಾಂಕರ್ಸ್‌ಗಳಿಗೆ ಸೂಚಿಸಿತ್ತು.  

  `ಸೆಬಿ~ ನಿಯಮದನ್ವಯ ಎಡಿಲ್‌ವೈಸ್, ಸಿಟಿ ಮತ್ತು ಮೋರ್ಗನ್ ಸ್ಟ್ಯಾನ್ಲಿ  ಹಣಕಾಸು ಸಂಸ್ಥೆಗಳು ಈ ಹಿಂದಿನ `ಐಪಿಒ~ ಸಾಧನೆ ಮಾಹಿತಿ ಬಹಿರಂಗಗೊಳಿಸಿವೆ. ಮೋರ್ಗನ್ ಸ್ಟ್ಯಾನ್ಲಿ ಐದು `ಐಪಿಒ~ಗಳನ್ನು ಬಿಡುಗಡೆ ಮಾಡಿದ್ದು, ಈ ಕುರಿತು ಮಾಹಿತಿ ಬಹಿರಂಗಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT