ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐರೋಪ್ಯ ಒಕ್ಕೂಟಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ

Last Updated 12 ಅಕ್ಟೋಬರ್ 2012, 9:50 IST
ಅಕ್ಷರ ಗಾತ್ರ

ಓಸ್ಲೋ (ಎಎಫ್ ಪಿ): ಪ್ರಸ್ತುತ ಬಿಕ್ಕಟ್ಟಿನಿಂದ ನಲುಗುತ್ತಿರುವ ಆದರೆ ಅರ್ಧ ಶತಮಾನಕ್ಕೂ ಹೆಚ್ಚುಕಾಲ ಎರಡನೇ ಜಾಗತಿಕ ಸಮರದಿಂದ ತತ್ತರಿಸಿದ ಖಂಡದಲ್ಲಿ ಶಾಂತಿ ಸ್ಥಾಪನೆಯಲ್ಲಿ ವಿಶೇಷ ಶ್ರಮ ವಹಿಸಿದ ಶ್ರೇಯಕ್ಕೆ ಪಾತ್ರವಾಗಿರುವ ಐರೋಪ್ಯ ಒಕ್ಕೂಟಕ್ಕೆ ಶುಕ್ರವಾರ 2012ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಯಿತು.

~ಒಕ್ಕೂಟ ಮತ್ತು ಅದನ್ನು ಮುನ್ನಡೆಸಿದವರು ಆರು ದಶಕಗಳ ಕಾಲ ಯುರೋಪಿನಲ್ಲಿ ಶಾಂತಿ, ಸಾಮರಸ್ಯ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳು ನೆಲೆಗೊಳ್ಳುವಂತೆ ಮಾಡಲು ಕಾಣಿಕೆ ನೀಡಿದ್ದಾರೆ~ ಎಂದು ನೊಬೆಲ್ ಸಮಿತಿ ಅಧ್ಯಕ್ಷ ತೊರ್ಬ್ ಜೋರ್ನ್ ಜಾಗ್ ಲ್ಯಾಂಡ್ ಓಸ್ಲೋದಲ್ಲಿ ಹೇಳಿದರು.

 ಪ್ರಸ್ತುತ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ನಿರ್ಧಾರದ ಹಿನ್ನೆಲೆಯನ್ನು ವಿವರಿಸಿದ ಅವರು ~70 ವರ್ಷಗಳ ಕಾಲಾವಧಿಯಲ್ಲಿ ಜರ್ಮನಿ ಮತ್ತು ಫ್ರಾನ್ಸ್ ಮೂರು ಕದನಗಳನ್ನು ನಡೆಸಿದವು. ಇಂದು ಜರ್ಮನಿ ಮತ್ತು ಫ್ರಾನ್ಸ್ ನಡುವಣ ಸಮರವನ್ನು ಕಲ್ಪಿಸಲೂ ಸಾಧ್ಯವಿಲ್ಲ. ಇದು ಪರಸ್ಪರ ವಿಶ್ವಾಸ ನಿರ್ಮಿಸುವಲ್ಲಿ ಮತ್ತು ಚಾರಿತ್ರಿಕ ವೈರಿಗಳು ನಿಕಟ ಮೈತ್ರಿ ಸಾಧಿಸುವಲ್ಲಿ ಸ್ಪಷ್ಟ ಗುರಿಯೊಂದಿಗೆ ನಡೆಸುವ ವ್ಯವಸ್ಥಿತ ಪ್ರಯತ್ನಗಳು ಹೇಗೆ ಫಲಕಾರಿ ಆಗಬಲ್ಲುವು ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ~ ಎಂದು ಹೇಳಿ ಹೇಳಿದರು.

ಏನಿದ್ದರೂ ಯುರೋಪಿನ ದಕ್ಷಿಣ ಭಾಗವು ಸಾಲದಲ್ಲಿ ಮುಳುಗಿ ನಲುತ್ತಿರುವಾಗ ಜರ್ಮನಿ ನೇತೃತ್ವದ ಶ್ರೀಮಂತ ಉತ್ತರಭಾಗವು ದಕ್ಷಿಣದ ನೆರವಿಗೆ ಹಿಂದೇಟು ಹಾಕುತ್ತಿರುವ ಈಗಿನ ಸ್ಥಿತಿಯಲ್ಲಿ ಐರೋಪ್ಯ ಒಕ್ಕೂಟದ ಬಿಕ್ಕಟ್ಟು ತಾರಕಕ್ಕೆ ಏರಿರುವಾಗ ಅದಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿರುವುದು ಮಾತ್ರ ಅಚ್ಚರಿಗೆ ಕಾರಣವಾಗಿದೆ.

 ಹಾಲಿ ಬಿಕ್ಕಟ್ಟು ಏನೇ ಇದ್ದರೂ ಬದ್ಧ ವೈರಿಗಳಾಗಿದ್ದ ಫ್ರಾನ್ಸ್ ಮತ್ತು ಜರ್ಮನಿಯನ್ನು ಒಂದುಗೂಡಿಸಿ ಸಮರಗ್ರಸ್ತ ಖಂಡದಲ್ಲಿ ಶಾಂತಿ ಮತ್ತು ಸ್ಥಿರತೆ ತಂದು ಕೊಡುವಲ್ಲಿ ಐರೋಪ್ಯ ಒಕ್ಕೂಟದ ಸೃಷ್ಟಿ ಮಹತ್ವದ ಪಾತ್ರ ವಹಿಸಿದ್ದನ್ನು ಮರೆಯಲಾಗದು ಎಂದು ನೊಬೆಲ್ ಸಮಿತಿ ಹೇಳಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT