ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐರೋಪ್ಯ ಒಕ್ಕೂಟದಿಂದ ಹೊರಬರಲು ಒಲವು

ಸಮೀಕ್ಷೆಯಲ್ಲಿ ಬ್ರಿಟನ್ನರ ಅಭಿಪ್ರಾಯ
Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಯುರೋಪಿನ ಪ್ರಬಲ ಶಕ್ತಿಯಾಗಿರುವ ಬ್ರಿಟನ್ನಿನಲ್ಲಿ ಐರೋಪ್ಯ ಒಕ್ಕೂಟದ (ಇಯು) ಬಗ್ಗೆ ಸಂಶಯ ಮಡುಗಟ್ಟಿದೆ. ಬ್ರಿಟನ್ನಿನ ಶೇ 51ಕ್ಕೂ ಹೆಚ್ಚು ಜನರು `ಇಯು'ನಿಂದ ಹೊರಬರಲು ಬಯಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಇದೇ ವೇಳೆಗೆ `ಇಯು'ನಲ್ಲಿ ಉಳಿಯಲು ಬಯಸಿದವರ ಸಂಖ್ಯೆ ಶೇ 40ರಷ್ಟು ಇದೆ. ಐರೋಪ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು, ಜಾಗತಿಕ ಮಟ್ಟದಲ್ಲಿ `ಯುರೊ' ಕರೆನ್ಸಿ ಮೌಲ್ಯ ಕುಸಿಯುವ ಭೀತಿ ಬ್ರಿಟನ್ ಜನರನ್ನು ಬಹಳವಾಗಿ ಕಾಡುತ್ತಿದೆ ಎಂದು ಅಧ್ಯಯನ ಹೇಳಿದೆ.

ಕಳೆದ ವರ್ಷ ನಡೆದ ಸಮೀಕ್ಷೆಯಲ್ಲಿ ಶೇ 49ರಷ್ಟು ಬ್ರಿಟನ್ ಜನರು `ಇಯು' ವಿರೋಧಿಸಿದ್ದರು. ಶೇ 40ರಷ್ಟು ಜನರು ಪರವಾಗಿದ್ದರು. ಈಗ `ಇಯು' ಕುರಿತು ಸಂಶಯ ಮತ್ತಷ್ಟು ಹೆಚ್ಚಳವಾಗಿದ್ದು, ವಿರೋಧಿಸುವವರ ಸಂಖ್ಯೆ ಶೇ 2ರಷ್ಟು ಏರಿಕೆ ಆಗಿದೆ.

ಒಂದು ದಶಕದ ಹಿಂದೆ ನಡೆಸಲಾದ ಇಂತಹದ್ದೇ ಸಮೀಕ್ಷೆಯೊಂದರಲ್ಲಿ `ಇಯು' ಪರವಾಗಿ ಬ್ರಿಟನ್ ವಾಸಿಗಳು ಒಲವು ತೋರಿದ್ದರು. ಆಗ ಶೇ 68 ಜನರು ಪರವಾಗಿಯೂ, ಶೇ 19ರಷ್ಟು ಮಂದಿ ವಿರುದ್ಧವಾಗಿ ನಿಲುವು ವ್ಯಕ್ತಪಡಿಸಿದ್ದರು ಎಂದು `ಡೈಲಿ ಮೇಲ್' ವರದಿ ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT