ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರ ಸಾವು, 45 ಮಂದಿಗೆ ಗಾಯ

ಹಿಂಸೆಗೆ ತಿರುಗಿದ ಥಾಯ್ಲೆಂಡ್‌ ಸರ್ಕಾರಿ ವಿರೋಧಿ ಪ್ರತಿಭಟನೆ
Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬ್ಯಾಂಕಾಕ್‌ (ಪಿಟಿಐ): ಥಾಯ್ಲೆಂಡ್‌ ಪ್ರಧಾನಿ ಯಿಂಗ್ಲುಕ್‌ ಶಿನವತ್ರಾ ಅವರ ಪದಚ್ಯುತಿಗೆ ಆಗ್ರಹಿಸಿ ಸರ್ಕಾರಿ ವಿರೋ­­ಧಿ­ಗಳು ನಡೆಸುತ್ತಿ­ರುವ ‘ಜನದಂಗೆ’ಯ ಪ್ರತಿ­ಭಟನೆ ಹಿಂಸಾ­ರೂಪಕ್ಕೆ ತಿರುಗಿ, ಅಪಾ­ಯ­ಕಾರಿ ಹಂತ ತಲುಪಿದೆ.

ಇದ­ರಿಂದ ಪೊಲೀಸ್‌ ಭದ್ರತಾ ತಾಣ­ದಲ್ಲಿದ್ದ ಪ್ರಧಾನಿ ಸುರಕ್ಷಿತ ಸ್ಥಳಕ್ಕೆ ಪಲಾ­ಯನ ಮಾಡಿದ್ದಾರೆ ಎನ್ನಲಾಗಿದ್ದು, ಆದರೆ ಸರ್ಕಾರ ಇದನ್ನು ನಿರಾಕರಿಸಿದೆ. ಭಾನುವಾರ ಇಲ್ಲಿ ಸರ್ಕಾರದ ಪರ ಮತ್ತು ವಿರೋಧಿ ಪ್ರತಿ­ಭಟ­ನಾಕಾರರ ನಡುವೆ ನಡೆದ ಘರ್ಷಣೆ­ಯಲ್ಲಿ ಕನಿಷ್ಠ ಐವರು ಮೃತಪಟ್ಟು, ಇತರ ಸುಮಾರು ೪೫ ಜನ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸರ್ಕಾರಿ ಭವನಕ್ಕೆ ಮುತ್ತಿಗೆ ಹಾಕಿ, ವಶಕ್ಕೆ ಪಡೆಯಲು ಯತ್ನಿಸಿದ 30 ಸಾವಿ­ರಕ್ಕೂ ಹೆಚ್ಚಿನ ಪ್ರತಿಭಟ­ನಾ­ಕಾರ­ರನ್ನು ತಡೆ­­ಯಲು ಪೊಲೀಸರು ಅಶ್ರುವಾಯು ಷೆಲ್‌ಗಳನ್ನು ಸಿಡಿಸಿದರು ಮತ್ತು ಜಲ­ಫಿರಂಗಿ ಪ್ರಯೋಗಿಸಿದರು.  ರಾಮ್ಖಾ­ಮ್ಹೇಂಗ್‌ ವಿಶ್ವವಿದ್ಯಾಲ­ಯದ ಆವರಣ­ದಲ್ಲಿ ಶನಿವಾರ ಪ್ರತಿ­ಭಟನೆ ನಡೆ­ಸುತ್ತಿ­ದ್ದಾಗ ಆರಂಭವಾದ ಹಿಂಸೆ ಭಾನು­ವಾರ ಬೆಳಿಗ್ಗೆವರೆಗೂ ಮುಂದು­ವರಿದು, ಐವರ ಸಾವಿಗೆ ಕಾರ­ಣವಾಗಿದೆ.

ರೆಡ್‌ಶರ್ಟ್‌ ನಾಯಕ ಜತುಪಾರ್ನ್‌ ಪ್ರಾಂಫಾನ್‌ ಅವರ ಪ್ರಕಾರ, ಮೃತರಲ್ಲಿ ನಾಲ್ವರು ಸರ್ಕಾರಿ ಬೆಂಬಲಿಗರು. ವಿವಿ ಒಳಗಡೆ ಸಂಕಷ್ಟದಲ್ಲಿದ್ದ ಸುಮಾರು ೨,೦೦೦ ವಿದ್ಯಾರ್ಥಿಗಳನ್ನು ಪೊಲೀಸರು ತೆರವು ಮಾಡಿ­ದ್ದಾರೆ. ಮೃತರಲ್ಲಿ ೨೧ ವರ್ಷದ ವಿದ್ಯಾರ್ಥಿ ಮತ್ತು ಸರ್ಕಾರಿ ಬೆಂಬಲಿಗ ಸೇರಿದ್ದಾರೆ. ವಿವಿ ಆವರಣ­ದಲ್ಲಿ ಸ್ಫೋಟಕ  ಪತ್ತೆಯಾ­ಗಿದ್ದು, ಅದನ್ನು  ನಿಷ್ಕ್ರಿಯ­­ಗೊಳಿ­­ಸ­ಲಾಗಿದೆ

ಈ ಮಧ್ಯೆ, ಸರ್ಕಾರಿ ವಿರೋಧಿ ಪ್ರತಿ­ಭಟನಾಕಾರರು, ಪ್ರಧಾನಿ ಯಿಂಗ್ಲುಕ್‌ ನೇತೃತ್ವದ ಸರ್ಕಾರದ ರಾಜೀನಾಮೆಗೆ ಒತ್ತಾ­ಯಿಸಿ, ಸರ್ಕಾರಿ ಭವನದತ್ತ ಮೆರ­ವ­ಣಿಗೆಯಲ್ಲಿ ತೆರಳಿದರು. ನಂತರ ಎಲ್ಲ ಸಚಿ­ವಾ­ಲ­ಯಗಳನ್ನು ವಶಕ್ಕೆ ಪಡೆದು, ಸರ್ಕಾರದ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರು­ವಾಯು ಷೆಲ್‌ಗಳು ಮತ್ತು ಜಲಫಿರಂಗಿ ಬಳಸಿದರು.

ಸರ್ಕಾರಿ ವಿರೋಧಿ ಪ್ರತಿಭಟನಾ­ಕಾರರು ಥಾಯಿ ಪಿಬಿಎಸ್‌ ಟೆಲಿವಿಷನ್‌ ಕೇಂದ್ರವನ್ನು ತಮ್ಮ ನಿಯಂತ್ರಣಕ್ಕೆ ತೆಗೆ­ದು­­ಕೊಂಡಿದ್ದು, ಇನ್ನೊಂದು ಗುಂಪು ಎಲ್ಲ ಅಡೆತಡೆಗಳನ್ನು ಮುರಿದು ಒಳಾ­ಡಳಿತ ಸಚಿವಾಲಯದ ಆವರಣವನ್ನು ಪ್ರವೇ­ಶಿ­ಸು­ವಲ್ಲಿ ಯಶಸ್ವಿಯಾಯಿತು.
ಪ್ರತಿಭಟ­ನಾಕಾರರನ್ನು ಹುರಿ­ದುಂಬಿ ಸಿದ ವಿರೋಧಿ ಡೆಮಾ­ಕ್ರಟ್‌ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಸುದೀಪ್‌ ತಾಗ್ಸುಬನ್‌, ಅಧಿಕಾರಿಗಳು ಪ್ರತಿಕ್ರಮಕ್ಕೆ ತಯಾ­ರಾಗುವ ಮುನ್ನವೇ  ಅವರ ಮೇಲೆ ನಿಯಂತ್ರಣ ಸಾಧಿಸಿ, ಸರ್ಕಾರದ ಕಾರ್ಯನಿರ್ವಹಣೆಯನ್ನು ನಿತ್ರಾಣ­ಗೊಳಿ­ಸು­ವಂತೆ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT