ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಶ್ವರ್ಯ ರೈ ಆದರ್ಶ ತಾಯಿ

Last Updated 11 ಮೇ 2012, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಅಮಿತಾಭ್ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ಬಾಲಿವುಡ್‌ನ ಖ್ಯಾತನಾಮ ಆದರ್ಶ ತಾಯಂದಿರ ಸಾಲಿನಲ್ಲಿ ಅಗ್ರ ಶ್ರೇಣಿಯಲ್ಲಿದ್ದಾರೆ. ಹಾಲಿವುಡ್‌ನಲ್ಲಿ ಏಂಜಲೀನಾ ಜೋಲಿ ಇರುವಂತೆ ಐಶ್ವರ್ಯ ಬಾಲಿವುಡ್‌ನಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಈ ಸಂಬಂಧ 38 ವರ್ಷದ ಮಾಜಿ ವಿಶ್ವ ಸುಂದರಿಗೆ ಶೇ 54ರಷ್ಟು ಮತಗಳು ಬಂದಿದ್ದರೆ, ನಂತರದ ಸಾಲಿನಲ್ಲಿರುವ ಕರಿಷ್ಮಾ ಕಪೂರ್ ಅವರಿಗೆ ಶೇ 27ರಷ್ಟು ಮತಗಳು ದೊರೆತಿವೆ.

ಅಭಿಷೇಕ್ ಐಶ್ವರ್ಯ ದಂಪತಿಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಹೆಣ್ಣು ಮಗು ಜನಿಸಿದೆ. `ಆದರ್ಶ ತಾಯಿ~ ಎಂಬ ಗೌರವಕ್ಕೆ ಬಾಲಿವುಡ್‌ನಲ್ಲಿ ಎಲ್ಲ ರೀತಿಯಿಂದಲೂ ಯೋಗ್ಯವಾಗಿರುವ ನಟಿ ಯಾರು ಎಂಬ ಪ್ರಶ್ನೆಯನ್ನು ಮುಂದಿಟ್ಟು,  ವಿವಾಹಕ್ಕೆ ಸಂಬಂಧಿಸಿದ ವೆಬ್‌ಸೈಟ್ ಶಾದಿ ಡಾಟ್‌ಕಾಮ್ ನಡೆಸಿದ ಸಮೀಕ್ಷೆಯಿಂದ ಈ ಅಂಶ ಹೊರಬಿದ್ದಿದೆ.

ಮಲೈಕಾ ಅರೋರಾ ಖಾನ್ ಮತ್ತು ಲಾರಾ ದತ್ತಾ ಕೂಡ ಸ್ಪರ್ಧೆಯಲ್ಲಿದ್ದರು.  ಮಾಜಿ `ಕನಸಿನ ಕನ್ಯೆ~ ಹೇಮಾ ಮಾಲಿನಿ ಮತ್ತು ಅವರ ಪುತ್ರಿ ಇಷಾ ಡಿಯೋಲ್ ಅತ್ಯುತ್ತಮ ತಾಯಿ- ಮಗಳು ಜೋಡಿ ಎಂದು ಅತಿ ಹೆಚ್ಚಿನ ಜನ ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT