ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಎಸ್‌ಇ, ಐಎಸ್‌ಸಿ ಪರೀಕ್ಷೆ: ದಕ್ಷಿಣದ ವಿದ್ಯಾರ್ಥಿಗಳ ಮೇಲುಗೈ

Last Updated 19 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಎಸ್‌ಇ ಮತ್ತು ಐಎಸ್‌ಸಿ ಪರೀಕ್ಷೆಯಲ್ಲಿ (10 ಮತ್ತು 12ನೇ ತರಗತಿ) ದಕ್ಷಿಣ ವಲಯದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಈ ಎರಡೂ ಪರೀಕ್ಷೆಗಳ ಫಲಿತಾಂಶ ಶನಿವಾರ ಪ್ರಕಟವಾಗಿದೆ.

ದಕ್ಷಿಣದ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿನ ವಿದ್ಯಾರ್ಥಿಗಳ ಉತ್ತೀರ್ಣತೆ ಪ್ರಮಾಣ ಶೇ 99.76ರಷ್ಟಿದೆ.

ಬೇರೆ ವಲಯಗಳಿಗೆ ಹೋಲಿಸಿದರೆ ದಕ್ಷಿಣ ವಲಯದ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿದೆ. ದಕ್ಷಿಣ ವಲಯದಿಂದ 22,742 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ 22,688 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ರಾಜ್ಯದಲ್ಲಿ 247 ಐಸಿಎಸ್‌ಇ ಶಾಲೆಗಳಿದ್ದು, ರಾಜಧಾನಿಯ ವಿದ್ಯಾರ್ಥಿಗಳು ಎರಡೂ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.

ಕೋರಮಂಗಲದ ಬೆಥನಿ ಪ್ರೌಢಶಾಲೆಯ ಭಾರ್ಗವ ರಾಮಕೃಷ್ಣ ರೆಡ್ಡಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ 97.28ರಷ್ಟು ಅಂಕಗಳನ್ನು ಪಡೆದಿದ್ದಾರೆ. `ಕೇವಲ ಓದುವುದಕ್ಕೆ ಮಾತ್ರ ಸೀಮಿತವಾಗದೆ ಪರೀಕ್ಷೆ ಸಂದರ್ಭದಲ್ಲೂ ಕ್ರಿಕೆಟ್ ಮತ್ತಿತರ ಚಟುವಟಿಕೆಗಳಲ್ಲಿ ತೊಡಗುತ್ತಿದೆ. ಇತಿಹಾಸ ಸ್ವಲ್ಪ ಕಷ್ಟ ಅನಿಸಿತು.  ಗಣಿತ,  ಭೌತ ವಿಜ್ಞಾನ ಸುಲಭವಾಗಿತ್ತು. ನಿರೀಕ್ಷೆ ಪ್ರಮಾಣದಲ್ಲಿ ಅಂಕಗಳು ಬಂದಿವೆ~ ಎಂದು ಭಾರ್ಗವ ಸಂತಸ ವ್ಯಕ್ತಪಡಿಸಿದರು.

ನ್ಯೂಹೊರೈಜನ್ ಪಬ್ಲಿಕ್ ಶಾಲೆಯ ಜಿ.ರಂಜಿತಾ ಶೇ 96.86ರಷ್ಟು ಅಂಕಗಳನ್ನು ಪಡೆದಿದ್ದಾರೆ. `ಪಠ್ಯಕ್ರಮಕ್ಕೆ ಅಷ್ಟೇ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗುತ್ತಿದೆ. ಶಾಲೆಯಲ್ಲಿ ಶಿಕ್ಷಕರು ನೀಡಿದ ಮಾರ್ಗದರ್ಶನದಿಂದಾಗಿ ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ನೆರವಾಯಿತು~ ಎಂದು ಅಭಿಪ್ರಾಯಪಟ್ಟರು.

ರಾಜಾಜಿನಗರದ ವಾಣಿ ಎಜುಕೇಷನ್ ಸೆಂಟರ್‌ನ ಮೇಘನಾ ಸುರೇಶ್ ಶೇ 96.14ರಷ್ಟು ಅಂಕಗಳನ್ನು ಪಡೆದಿದ್ದಾರೆ. `ಇಷ್ಟು ಅಂಕಗಳು ಬರುತ್ತವೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಫಲಿತಾಂಶ ನೋಡಿದ ನಂತರ ಸಂತೋಷವಾಯಿತು. ಗಣಿತ ನನ್ನ ನೆಚ್ಚಿನ ವಿಷಯ~ ಎಂದು ನುಡಿದರು.

ಸಹಕಾರ ನಗರದ ವಿವೇಕಾನಂದ ಶಾಲೆಯ ಸಮನ್ವಿತಾ ಶಾಸ್ತ್ರ ಶೇ 96.86ರಷ್ಟು ಅಂಕಗಳನ್ನು, ನಗರದ ಪ್ಲಾರೆನ್ಸ್ ಶಾಲೆಯ ಕರಣ್ ಮ್ಯಾಥೂ 12ನೇ ತರಗತಿಯಲ್ಲಿ ಶೇ 97ರಷ್ಟು ಅಂಕಗಳನ್ನು ಪಡೆದಿದ್ದಾರೆ. ಒಟ್ಟಾರೆ ರಾಷ್ಟ್ರಮಟ್ಟದಲ್ಲಿ ಈ ವರ್ಷ ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ 98.62ರಷ್ಟು ಹಾಗೂ ಐಎಸ್‌ಇ ಪರೀಕ್ಷೆಯಲ್ಲಿ ಶೇ 97.25ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT