ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿಗೆ ಪತ್ರ ಬರೆದ ಸಚಿನ್ ತೆಂಡೂಲ್ಕರ್

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಎರಡೂ ತಂಡಗಳಿಗೆ ತಲಾ 25 ಒವರ್‌ಗಳಂತೆ ಒಟ್ಟು ನಾಲ್ಕು ಇನಿಂಗ್ಸ್‌ಗಳನ್ನು ಆಡಿಸುವುದು ಸೇರಿದಂತೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹಲವು ಬದಲಾವಣೆ ಮಾಡುವುದು ಅಗತ್ಯವಿದೆ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೂನ್ ಲಾರ್ಗಟ್‌ಗೆ ಪತ್ರ ಬರೆದಿದ್ದಾರೆ.

ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಬದಲಾವಣೆ ಅಗತ್ಯ ಎನ್ನುವುದನ್ನು ಮಾಸ್ಟರ್ ಬ್ಲಾಸ್ಟರ್ ಬಹಿರಂಗವಾಗಿಯೇ ಹೇಳಿದ್ದಾರೆ. ಪವರ್ ಪ್ಲೇನಲ್ಲಿ ಬದಲಾವಣೆ ತರಬೇಕು. 25 ಓವರ್‌ಗಳಲ್ಲಿ ಕೇವಲ 2 ಸಲ ಬ್ಯಾಟಿಂಗ್‌ನಲ್ಲಿ ಪವರ್ ಪ್ಲೇ ಇರಬೇಕು. ಪ್ರತಿಯೊಬ್ಬ ಬೌಲರ್‌ಗೆ ಕಡ್ಡಾಯವಾಗಿ 12 ಓವರ್ ಮಾಡುವ ಅವಕಾಶ ನೀಡಬೇಕು ಎಂದಿದ್ದಾರೆ. ಈಗ ಪ್ರತಿ ಬೌಲರ್ 10 ಓವರ್ ಮಾಡಲು ಮಾತ್ರ ಅವಕಾಶವಿದೆ.

ಈಗಿರುವ ಪ್ರತಿ ಇನಿಂಗ್ಸ್‌ನ 50 ಓವರ್‌ಗಳ ಸಂಖ್ಯೆ ಕಡಿಮೆ ಮಾಡಬೇಕು. ಅದರ ಬದಲಾಗಿ 25 ಓವರ್‌ಗಳಿಗೆ ಒಂದು ಇನಿಂಗ್ಸ್‌ನಂತೆ ಪ್ರತ್ಯೇಕವಾಗಿ ನಾಲ್ಕು ಇನಿಂಗ್ಸ್ ಮಾಡಬೇಕು ಎನ್ನುವ ವಿಷಯ ಸಚಿನ್ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT