ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಚೂರು

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕನ್ನಡಕಪ್ರೇಮಿ ಅಳಿಲು
ಲಂಡನ್‌ನ ಮೃಗಾಲಯದಲ್ಲಿರುವ ಬೊಲಿವಿಯನ್ ಅಳಿಲುಗಳಿಗೆ ಚಟವೊಂದು ಅಂಟಿಕೊಂಡಿದೆ. ಅವು  ಪ್ರವಾಸಿಗರ ತಂಪು ಕನ್ನಡಗಳನ್ನು ಕಿತ್ತುಕೊಂಡು ಓಡುತ್ತವೆ. ತಮ್ಮ ಕನ್ನಡಕಗಳನ್ನು ಹೇಗಾದರೂ ಮಾಡಿ ವಾಪಸ್ ಪಡೆಯಲು ಪರದಾಡುವ ಪ್ರವಾಸಿಗರ ದಂಡೇ ಅಲ್ಲಿ ನಿತ್ಯವೂ ಕಾಣುತ್ತದೆ. ಬೊಲಿವಿಯನ್ ಅಳಿಲುಗಳ ಬಳಿ ಒಳ್ಳೆಯ `ಸನ್‌ಗ್ಲಾಸ್~ ಸಂಗ್ರಹವಿದೆ.

ಮೀನಿನ ಕೀಚೈನ್
ಬ್ರೆಜಿಲಿಯನ್ ಆಮೆ ಅಥವಾ ಎರಡು ಸಣ್ಣ ಮೀನುಗಳಿರುವ ಪುಟಾಣಿ ಪ್ಲಾಸ್ಟಿಕ್ ಜಾಡಿ ಇರುವ ಕೀಚೈನ್‌ಗಳು ಚೀನಾದಲ್ಲಿ ಈಗ ಜನಪ್ರಿಯವಾಗಿವೆ. 7 ಸೆಂ.ಮೀ. ಉದ್ದದ ಬಿಗಿಯಾದ ಪ್ಲಾಸ್ಟಿಕ್ ನಳಿಕೆಯಲ್ಲಿ ಸಣ್ಣ ಸಣ್ಣ ಮೀನುಗಳನ್ನು ಅಥವಾ ಸಣ್ಣ ಬ್ರೆಜಿಲಿಯನ್ ಆಮೆಯನ್ನು ಇರಿಸಲಾಗಿರುತ್ತದೆ. ನೀರಿನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಕೆಲವು ತಿಂಗಳವರೆಗೆ ಆಮೆ ಅಥವಾ ಮೀನುಗಳು ಬದುಕಬಲ್ಲವು ಎಂದು ಕೀಚೈನ್ ಮಾರಾಟ ಮಾಡುವವರು ಹೇಳುತ್ತಾರೆ.

ಶೌಚಾಲಯದ ಮ್ಯೂಸಿಯಂ
ಜರ್ಮನಿಯ ಮೈಕಲ್ ಬರ್ಗ್ಲರ್ ಶೌಚಾಲಯಕ್ಕೇ ಮೀಸಲಾದ ಮ್ಯೂಸಿಯಂ ಒಂದನ್ನು ಸ್ಥಾಪಿಸಿದ್ದಾರೆ. ವಿಸ್ಬೇಡನ್‌ನಲ್ಲಿರುವ ಈ ಮ್ಯೂಸಿಯಂನಲ್ಲಿ ವಿವಿಧ ನಮೂನೆಯ `ಕಮೋಡ್~ಗಳು, ವಿಲಕ್ಷಣವೂ ವಿಚಿತ್ರವೂ ಆದ `ಟಾಯ್ಲೆಟ್ ಸೀಟ್~ಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT