ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಚೂರು

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೋಟಿಗಾಗಿ ಕೇಸು
ಅಮೆರಿಕದ ಹೂಸ್ಟನ್‌ನ ವಕೀಲ ವಿಲಿಯಮ್ ಒಗ್ಲೆಟ್ರಿ ವಿಮಾನ ನಿಲ್ದಾಣದ ರೆಸ್ಟೊರೆಂಟ್‌ನಲ್ಲಿ ತಮ್ಮ 800 ಡಾಲರ್ ಬೆಲೆಯ ಕೋಟನ್ನು ಮರೆತುಬಂದರು. ಆಮೇಲೆ ನೆನಪಾಗಿ ವಾಪಸ್ ಹೋಗಿ ನೋಡಿದರು. ಅದು ಅಲ್ಲಿರಲಿಲ್ಲ. ತಮ್ಮ ಮರೆಗುಳಿ ಬುದ್ಧಿಗೆ ಮರುಕಪಡುವುದರ ಬದಲು ಅವರು ರೆಸ್ಟೊರೆಂಟ್ ನಡೆಸುವ ಕಂಪೆನಿಯ ವಿರುದ್ಧ ಕೋಟನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೆಂದು ಕೇಸು ಹಾಕಿದರು.

ಒಂದು ನಿಮಿಷಕ್ಕೆ ರೀಮೇಕ್
ಮಾರ್ಕ್ ವಾಂಗ್ ಎಂಬ ಕೇಂಬ್ರಿಜ್‌ನ ಸಿನಿಮಾ ಪ್ರೇಮಿಯೊಬ್ಬ ಮೂರು ವರ್ಷ ತನ್ನಿಷ್ಟದ ಹಾಲಿವುಡ್ ಚಿತ್ರಗಳನ್ನೆಲ್ಲಾ ರೀಮೇಕ್ ಮಾಡುವುದಕ್ಕೇ ಮೀಸಲಿಟ್ಟ. `ಸ್ಪೀಡ್~, `ಪರ್ಲ್ ಹಾರ್ಬರ್~, `ಟಾಪ್ ಗನ್~ ಸೇರಿದಂತೆ ಪ್ರಮುಖ ಚಿತ್ರಗಳನ್ನು ಅವನು ಒಂದೇ ನಿಮಿಷದ ಚಿತ್ರಗಳಾಗಿ ರೀಮೇಕ್ ಮಾಡಿದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT