ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಚೂರು :ಹುಲಿಗೂ ಸೌಟೇಟು

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ವನಿತೆಯೊಬ್ಬಳು ಸೌಟೇಟಿನಿಂದಲೇ ಹುಲಿಯನ್ನು ಓಡಿಸಿದ ಮಜವಾದ ಘಟನೆ ಮಲೇಷ್ಯಾದಲ್ಲಿ ನಡೆಯಿತು. ಮನೆಯಲ್ಲಿ ಅವಳು ಅಡುಗೆ ಮಾಡುವುದರಲ್ಲಿ ನಿರತಳಾಗಿದ್ದಳು. ಅಳಿಲುಗಳ ಹಿಡಿಯಲೆಂದು ಗಂಡ ಹೊರಗೆ ಹೋಗಿದ್ದ. ಇದ್ದಕ್ಕಿದ್ದಂತೆ ಅವನ ಚೀರಾಟ ಕೇಳಿಸಿತು.

ಸೌಟು ಹಿಡಿದುಕೊಂಡೇ ಹೊರಗೆ ಹೋದ ಅವಳಿಗೆ ಗಂಡನ ಮೇಲೆ ಹುಲಿ ದಾಳಿ ಇಡುತ್ತಿರುವುದು ಕಂಡಿತು. ಹುಲಿಯ ತಲೆಯ ಭಾಗಕ್ಕೆ ಅದರಿಂದ ಅವಳು ಒಂದೇಸಮ ಬಡಿಯತೊಡಗಿದಳು. ಯಾತನೆ ತಾಳಲಾರದೆ ಹುಲಿ ಅಲ್ಲಿಂದ ಓಡಿಹೋಯಿತು.

ಮಹಿಳಾ ಸೌಟಿನ ಶಕ್ತಿ ಎಂಥದ್ದಲ್ಲವೇ ಎಂದು ಅವಳ ಗಂಡ ಈ ಘಟನೆಯನ್ನು ಎಲ್ಲಾ ಕಡೆ ಹೇಳಿಕೊಂಡು ಓಡಾಡುತ್ತಿದ್ದಾನಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT