ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಂಕಿ ಲಾಟರಿ ದಂಧೆ ವ್ಯಾಪಕ – ಎಚ್‌ಡಿಕೆ

ರಾಮನಗರದಲ್ಲಿ ಮೂಲ ಸೌಕರ್ಯ ಕಾಮಗಾರಿಗೆ ಶಂಕುಸ್ಥಾಪನೆ
Last Updated 17 ಸೆಪ್ಟೆಂಬರ್ 2013, 9:47 IST
ಅಕ್ಷರ ಗಾತ್ರ

ರಾಮನಗರ: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆ ಒಂದಂಕಿ ಲಾಟರಿ ದಂಧೆ  ತಲೆಯೆತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಕುಮ್ಮಕ್ಕು ಇದೆ ಎಂಬ ಅನುಮಾನ ವ್ಯಕ್ತವಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ನಗರೋತ್ಥಾನ ಯೋಜನೆಯಡಿ ರಸ್ತೆ, ಒಳಚರಂಡಿ ಸೇರಿದಂತೆ ವಿವಿಧ ಮೂಲ ಸೌಕರ್ಯ ಕಾಮಗಾರಿಗಳಿಗೆ ಸೋಮ ವಾರ ಶಂಕುಸ್ಥಾಪನೆ ಮಾಡಿದ ಅವರು ಬಳಿಕ ಸುದ್ದಿಗಾರರ ಜತೆ ಮಾತ ನಾಡಿದರು.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಬಡವರ ಹಿತದೃಷ್ಟಿಯಿಂದ ಲಾಟರಿ ವ್ಯವಸ್ಥೆಯನ್ನೇ ನಿಷೇಧಿಸಿದೆ. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಅನಧಿಕೃತವಾಗಿ ಲಾಟರಿ ವ್ಯವಹಾರ ಆರಂಭವಾಗಿದೆ. ಇದರಿಂದ ಬಡ ಕುಟುಂಬಗಳಿಗೆ ಸಂಕಷ್ಟ ಎದುರಾ ಗಲಿದೆ’ ಎಂದು ಅವರು ದೂರಿದರು.

‘ಬಡವರ ನೋವಿನ ಅರಿವು ತನಗಿದೆ ಎಂದು ಹೇಳಿಕೊಂಡಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಬಡವರ ಬಗ್ಗೆ ಇರುವ ಕಾಳಜಿ ಇದೇನಾ? ಎಂದು ಪ್ರಶ್ನಿಸಿದ’ ಕುಮಾರ ಸ್ವಾಮಿ ಅವರು, ‘ಈ ಬಗ್ಗೆ ಮುಖ್ಯ ಮಂತ್ರಿ ಅವರು ಸ್ಪಷ್ಟೀಕರಣ ನೀಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಲಾಟರಿ ವ್ಯವಹಾರ ಅನಧಿಕೃತವಾಗಿ ಆರಂಭವಾಗಿರುವುದಕ್ಕೆ ಕಾರಣಕರ್ತರಾಗಿರುವ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಕ್ರಮ ತೆಗೆದುಕೊಂಡು ಅವರ ಅಮಾನತು ಪಡಿಸಬೇಕು’ ಎಂದು ಅವರು ಒತ್ತಾ ಯಿಸಿದರು. ‘ಈ ಬಗ್ಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಅವರಿಗೆ ವಿಸ್ತೃತವಾಗಿ ಪತ್ರ ಬರೆಯುವುದಾಗಿ’ ಕುಮಾರ ಸ್ವಾಮಿ ಪ್ರತಿಕ್ರಿಯಿಸಿದರು.

ಗೂಂಡಾಗಿರಿ: ‘ರಾಮನಗರದಲ್ಲಿ ಸರ್ಕಾರಿ ಕಚೇರಿಗಳು ಕಾಂಗ್ರೆಸ್‌ ಗೂಂಡಾಗಳ ಹಾಗೂ ದಲ್ಲಾಳಿಗಳ  ಕಚೇರಿಗಳಾಗಿ ಪರಿವರ್ತನೆಯಾಗಿವೆ. ಇತ್ತೀಚೆಗೆ ರಾಮನಗರದ ಠಾಣೆ ಯೊಂದರಲ್ಲಿ ಸರ್ಕಾರಿ ನೌಕರರೊಬ್ಬರು ತಮ್ಮ ಕುಟುಂಬದ ಸಮಸ್ಯೆ ಬಗೆಹರಿಸಿ ಕೊಳ್ಳಲು ಹೋಗಿದ್ದರು. ಆ ಸಂದರ್ಭ ದಲ್ಲಿ ಕಾಂಗ್ರೆಸ್‌ ಮುಖಂಡ (ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪರಾ ಜಿತ ಅಭ್ಯರ್ಥಿ) ಪೊಲೀಸ್‌ ಠಾಣೆ ಯಲ್ಲಿ, ಪೊಲೀಸರ ಎದುರೇ ಸರ್ಕಾರಿ ಸಿಬ್ಬಂದಿಯ ಮೇಲೆ ದೈಹಿಕ ಹಲ್ಲೆ ನಡೆಸಿ ದ್ದಾರೆ’ ಎಂದು ಅವರು ಕಿಡಿಕಾರಿದರು.

‘ಪೊಲೀಸ್‌ ಠಾಣೆಯಲ್ಲಿ, ಪೊಲೀಸರ ಎದುರೇ ಸರ್ಕಾರಿ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು ಎಂದರೆ ಏನರ್ಥ ? ಆ ವ್ಯಕ್ತಿಗೆ ಹಲ್ಲೆ ಮಾಡುವ ಅಧಿಕಾರ ಕೊಟ್ಟವರು ಯಾರು ? ಅಲ್ಲಿದ್ದ ಪೊಲೀಸಿ ನವರು ಏನು ಮಾಡುತ್ತಿದ್ದರು ?’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದರು.

‘ಇಷ್ಟೇ ಅಲ್ಲದೆ ತನ್ನ ಮೇಲೆ ಪೊಲೀಸ್‌ ಠಾಣೆಯಲ್ಲಿಯೇ ಹಲ್ಲೆ ಆಗಿರುವ ಕುರಿತು ಆ ಸರ್ಕಾರಿ ನೌಕರ ದೂರು ನೀಡಿದ್ದಾರೆ. ಆದರೆ ಅದಕ್ಕೆ ಪ್ರಥಮ ಮಾಹಿತಿ ವರದಿಯನ್ನೂ ಪೊಲೀಸರು ದಾಖಲಿ ಸಿಲ್ಲ. ಅದರ ಬದಲಿಗೆ ಇಲ್ಲಿನ ಡಿವೈಎಸ್‌ಪಿ ಅವರು ರಾಜೀ ಮೂಲಕ ಪ್ರಕರಣ ಇತ್ಯರ್ಥಗೊಳಿಸುವ ಮಾತನಾಡು ತ್ತಿದ್ದಾರೆ ಎಂದು ಗೊತ್ತಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಜನ ಸಾಮಾನ್ಯರು ದೂರು ನೀಡಿದರೆ ಅದನ್ನು ದಾಖಲಿಸಿಕೊಳ್ಳಲು ಲಂಚ, ಋಷುವತ್ತುಗಳನ್ನು ಕೊಡ ಬೇಕಾದ ಸ್ಥಿತಿ ಬಂದಿದೆ. ಈ ಬಗ್ಗೆ ಇತ್ತೀಚೆಗೆ ಜಿಲ್ಲಾ ಪೊಲೀಸ್‌ ವರಿ ಷ್ಠಾಧಿಕಾರಿ ಅವರಿಗೆ ಎಚ್ಚರಿಕೆ ಯನ್ನೂ ನೀಡಿದ್ದೇನೆ. ಅಲ್ಲದೆ ಸರ್ಕಾರಿ ಕಚೇರಿಗಳನ್ನು ಕಾಂಗ್ರೆಸ್‌ ಗೂಂಡಾಗಳು ದುರುಪಯೋಗ ಪಡಿಸಿ ಕೊಳ್ಳದಂತೆ ಎಚ್ಚರವಹಿಸುವಂತೆಯೂ ಸೂಚಿಸಿ ದ್ದೇನೆ. ಈ ಪ್ರಕರಣ ಕುರಿತು ಗೃಹ ಸಚಿವ ಕೆ.ಜೆ.ಜಾರ್ಜ್‌ ಅವರ ಗಮನಕ್ಕೆ ತಂದು, ಸರ್ಕಾರಿ ನೌಕರನಿಗೆ ನ್ಯಾಯ ದೊರೆಕಿಸಿಕೊಡಲು ಪ್ರಾಮಾ ಣಿಕವಾಗಿ ಶ್ರಮಿಸುತ್ತೇನೆ’ ಎಂದು ಅವರು ಹೇಳಿದರು.

ಗುಣಾತ್ಮಕ ಕೆಲಸ ಆಗಲಿ: ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿ ಆಗಿ ದ್ದಾಗ ನಗರೋತ್ಥಾನ ಯೋಜನೆ ಯಡಿ ಜಿಲ್ಲೆಯ ನಾಲ್ಕು ನಗರ– ಪಟ್ಟಣಗಳಿಗೆ 54 ಕೋಟಿ ರೂಪಾಯಿ ಮಂಜೂ ರಾಗಿತ್ತು. ಅದರಲ್ಲಿ ಜಿಲ್ಲಾ ಕೇಂದ್ರವಾದ ರಾಮನಗರಕ್ಕೆ 28 ಕೋಟಿ ರೂಪಾಯಿ ನಿಗದಿಯಾಗಿತ್ತು. ರಸ್ತೆ, ಒಳಚರಂಡಿ, ಸೇರಿದಂತೆ ವಿವಿಧ ಮೂಲ ಸೌಕರ್ಯ ಕಲ್ಪಿಸಲು ಈ ಯೋಜನೆ ಸಹಕಾರಿ ಯಾಗಿದೆ. ಈ ಯೋಜನೆಯಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ತಡೆ ಗೋಡೆ ನಿರ್ಮಿಸುವಂತೆಯೂ ಸೂಚಿಸಿದ್ದೇನೆ. ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳು ವಂತೆಯೂ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.

‘ಲೋಕಸಭಾ ಉಪ ಚುನಾವಣೆ ಯಲ್ಲಿ ಲೀಡ್‌ ಕಡಿಮೆ ಆಯಿತು ಎಂದು ನಾನು ಇತ್ತೀಚೆಗೆ ರಾಮನಗರಕ್ಕೆ ಭೇಟಿ ನೀಡುತ್ತಿದ್ದೇನೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಈ ಮೊದಲು ನಾನು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷನಾ ಗಿದ್ದೆ. ರಾಜ್ಯದ ಎಲ್ಲೆಡೆ ಸಂಚರಿಸಿ ಪಕ್ಷ ಸಂಘಟಿಸಬೇಕಿತ್ತು. ಆಗ ರಾಮನಗರಕ್ಕೆ ಹೆಚ್ಚು ಬರಲು ಆಗಲಿಲ್ಲ. ಈಗ ನಾನು ಪಕ್ಷದ ಅಧ್ಯಕ್ಷನಲ್ಲ. ಕ್ಷೇತ್ರದ ಶಾಸಕ. ಕಳೆದ ಬಾರಿ ಬಂದಾಗ ಪ್ರತಿ ಸೋಮ ವಾರ ರಾಮನಗರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುವುದಾಗಿ ಹೇಳಿದ್ದೆ. ಅದರಂತೆ ಈ ಬಾರಿಯೂ ಬಂದಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಮೋದಿ ವಿಚಾರ ಬಿಜೆಪಿಗೆ ಸೇರಿದ್ದು’
‘ಮುಂದಿನ ಲೋಕಸಭಾ ಚುನಾ ವಣೆಗೆ ಬಿಜೆಪಿ ತನ್ನ ಪ್ರಧಾನಿ ಅಭ್ಯ ರ್ಥಿಯನ್ನಾಗಿ ಗುಜರಾತ್‌ ಮುಖ್ಯ ಮಂತ್ರಿ ನರೇಂದ್ರ ಮೋದಿ ಅವರನ್ನು ಅಂತಿಮಗೊಳಿಸಿದೆ. ಅದು ಆ ಪಕ್ಷದ ಆಂತರಿಕ ವಿಷಯ. ಇದನ್ನು ಬೆಂಬ ಲಿಸಿರುವ ಕೆಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿ ಜತೆ ಕೈಜೋಡಿಸುವ ಯತ್ನ ಮುಂದುವರೆಸಿದ್ದಾರೆ. ಈ ವಿಷಯ ದಿಂದ ಜೆಡಿಎಸ್‌ನ ವಿಧಾನ ಸಭೆಯ ವಿರೋಧ ಪಕ್ಷದ ಸ್ಥಾನಕ್ಕೆ ಕುತ್ತು ಬರುತ್ತದೆಯೋ ಇಲ್ಲವೋ ಎಂಬು ದನ್ನು ಸಭಾಧ್ಯಕ್ಷರು ತಿಳಿಸು ತ್ತಾರೆ. ಅದು ಅವರಿಗೆ ಬಿಟ್ಟ ವಿಷಯ’ ಎಂದು ಅವರು ಪ್ರತಿ ಕ್ರಿಯಿಸಿದರು.

‘ಕಾಂಗ್ರೆಸ್ಸಿಗರದ್ದೇ ಮಾರ್ಗದರ್ಶನ’
‘ನಾನು ಲೋಕಸಭಾ ಸದಸ್ಯ ನಾಗಿದ್ದ ಸಂದರ್ಭದಲ್ಲಿ ಕನಕಪುರದ ಶಾಸಕರು ಅಲ್ಲಿ ಮಾಡಿದ ಯಾವು ದೇ ಕಾರ್ಯಕ್ರಮ, ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾ ನಿಸಿರಲಿಲ್ಲ. ಅವರೇ ಹಾಕಿಕೊಟ್ಟ ಈ ಶಿಷ್ಟಾಚಾರದ ಮಾರ್ಗದರ್ಶನ ದಂತೆ ನಾನೂ ನಡೆದುಕೊಳ್ಳುತ್ತಿ ದ್ದೇನೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT