ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಲ್ಲ, ಎರಡು `ದೇವ ಕಣ'?

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಭೂಮಂಡಲದ ಉಗಮಕ್ಕೆ ಕಾರಣ ಎನ್ನಲಾದ ಮಹಾಸ್ಫೋಟ( ಬಿಗ್‌ಬ್ಯಾಂಗ್) ರಹಸ್ಯವನ್ನು ಭೇದಿಸಲು ನಡೆಸಲಾದ ಪ್ರಯೋಗದಲ್ಲಿ ಈ ಮೊದಲು ಒಂದು `ದೇವಕಣ' (ಹಿಗ್ಸ್ ಬೋಸಾನ್)ಪತ್ತೆ ಹಚ್ಚಿದ್ದಾಗಿ ಹೇಳಿದ್ದ ವಿಜ್ಞಾನಿಗಳು  ಈಗ, `ನಾವು ಪತ್ತೆ ಹಚ್ಚಿದ್ದು ಒಂದಲ್ಲ, ಎರಡು ದೇವ ಕಣಗಳನ್ನು' ಎಂದು ಹೇಳಿಕೊಂಡಿದ್ದಾರೆ.

`ಜಿನೀವಾ ಬಳಿ 27 ಕಿ.ಮೀ ಆಳದ ಸುರಂಗ ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಸಿದ ಮಹಾಸ್ಫೋಟದಲ್ಲಿ 2 ದೇವ ಕಣಗಳು ಬಿಡುಗಡೆಯಾಗಿರುವ ಸಾಧ್ಯತೆ ಇದೆ' ಎಂದು ಯೂರೋಪ್ ಪರಮಾಣು ಸಂಶೋಧನಾ ಸಂಸ್ಥೆ       (ಸಿಇಆರ್‌ಎನ್) ತಿಳಿಸಿದೆ.

`ಮೊದಲು ಪತ್ತೆಯಾಗಿದ್ದ ಒಂದು ನಿರ್ದಿಷ್ಟ ದ್ರವ್ಯರಾಶಿಯ ದೇವ ಕಣದ ಜತೆಯಲ್ಲಿಯೇ ಅದಕ್ಕಿಂತ ಸ್ವಲ್ಪ ಹೆಚ್ಚು ದ್ರವ್ಯರಾಶಿ ಹೊಂದಿದ ಮತ್ತೊಂದು ಅಪರಿಚಿತ ಕಣ ಪತ್ತೆಯಾಗಿತ್ತು.

ಅದು ಮತ್ತೊಂದು `ದೇವ ಕಣ' ಇರಬಹುದು' ಎಂದು ಸಿಇಆರ್‌ಎನ್ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾಗಿ `ಡೈಲಿ ಮೇಲ್' ವರದಿ ಮಾಡಿದೆ.

ವಿಜ್ಞಾನಿಗಳು ಎರಡು ದೇವಕಣಗಳ ಅಸ್ತಿತ್ವದ ಕುರಿತು ಉದ್ಭವಿಸಿರುವ ಸಂಶಯಗಳನ್ನು ನಿವಾರಿಸುವ ಪ್ರಯತ್ನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT