ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಆಸ್ತಿಗೆ 2 ದಾಖಲೆ ಸೃಷ್ಟಿಸಿ ವಂಚನೆ

ನಗರಸಭೆಯ ಕಂದಾಯ ಸಿಬ್ಬಂದಿ ಕೈಚಳಕ
Last Updated 12 ಡಿಸೆಂಬರ್ 2013, 8:34 IST
ಅಕ್ಷರ ಗಾತ್ರ

ಗಂಗಾವತಿ: ಒಂದೇ ಆಸ್ತಿ ಇಬ್ಬರು ವಾರಸುದಾರರನ್ನು ಹಾಗೂ ಎರಡು ದಾಖಲೆಗಳನ್ನು ಸೃಷ್ಟಿಸುವ ಮೂಲಕ ಇಲ್ಲಿನ ನಗರಸಭೆಯ ಕಂದಾಯ ವಿಭಾಗದ ಸಿಬ್ಬಂದಿ, ಆಸ್ತಿಯ ಮೂಲ ವಾರಸುದಾರರನ್ನು ವಂಚಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಆಸ್ತಿಯ ಮೂಲ ವಾರಸುದಾರರು ಎನ್ನಲಾದ ಅಂಬಮ್ಮ ಗಂಡ ಲಿಂಗಪ್ಪ ಕೋರಿ, ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆ, ತೆರಿಗೆ ಪಾವತಿ ರಸೀದಿ ಸಂಗ್ರಹಿಸಿ ಇದೀಗ ನಗರಸಭೆಯ ವಿರುದ್ಧ ಕಾನೂನು ಸಮರದ ಮೊರೆ ಹೋಗುತ್ತಿರುವುದರಿಂದ ಪ್ರಕರಣ ಬಯಲಿಗೆ ಬಂದಿದೆ.

ಪ್ರಕರಣದ ವಿವರ: ನಗರಸಭಾ ವ್ಯಾಪ್ತಿಯ ಮುರಹರಿ ನಗರದ ಕುರಿ ಕಮೇಲಿ ಸಮೀಪ ಬ್ಲಾಕ್‌ ನಂಬರ್‌ ಪ್ಲಾಟ್‌ ನಂಬರ್‌ 23ನ್ನು ನಗರಸಭೆ, 1992ರಲ್ಲಿ 15X20 ಸೈಜಿನ ಟಿಎಂಜಿ/ ಪ್ಲಾಟ್‌/48/91–92 ನಿವೇ­ಶ­ನವನ್ನು ಅಂಬಮ್ಮ ಅವರಿಗೆ ₨ 900 ಪಡೆದು ವಿತರಿಸಿತ್ತು.

ಆರ್ಥಿಕ ದುರ್ಬಲರ ಕೋಟಾದಡಿ ಅಂಬಮ್ಮರಿಗೆ 1992ರ ಜೂನ್‌ 17­ರಂದು ನಗರಸಭೆಯು ನಿವೇಶ­ನಕ್ಕೆ ಸಂಬಂ­ಧಿಸಿದ ಹಕ್ಕುನ್ನು ಖರೀದಿ ಪತ್ರದ ಮೂಲಕ ಬಿಟ್ಟು ಕೊಟ್ಟಿತ್ತು. ನಿವೇಶನದ ಸುತ್ತಲಿನ ಚಕ್ಕುಬಂದಿಯ ಮಾಹಿತಿ­ಯನ್ನು ಹಕ್ಕುಪತ್ರದಲ್ಲಿ ವಿವರಿಸಲಾಗಿತ್ತು.

1992ರಿಂದ 2013ರ ನವೆಂಬರ್‌­ವರೆಗೂ ಅಂಬಮ್ಮರ ಹೆಸರಲ್ಲಿರುವ ನಿವೇಶನಕ್ಕೆ ವಾರಸುದಾರರು ತೆರಿಗೆ ಪಾವತಿಸುತ್ತಾ ಬಂದಿದ್ದಾರೆ. ಸದರಿ ಪ್ಲಾಟ್‌ನ ದಾಖಲೆಗಳನ್ನು ಪರಿಶೀಲಿಸಿದ ನಗರಸಭೆಯ ಪೌರಾಯುಕ್ತ, ನಿವೇಶನ ಅಂಬಮ್ಮರಿಗೆ ಸೇರಿದ್ದು ಎಂದು 24.10.2013ರಂದು ದೃಢೀಕರಣ ನೀಡಿದ್ದಾರೆ.  

ಮತ್ತೊಬ್ಬರ ಸೃಷ್ಟಿ: ಆದರೆ ನಗರಸಭೆಯ ಕಂದಾಯ ವಿಭಾಗದ ಸಿಬ್ಬಂದಿಯು ನಗರಸಭೆಯಿಂದ ಅಂಬ­ಮ್ಮ­ರಿಗೆ ಮಂಜೂರಾಗಿದ್ದ ನಿವೇ­ನಕ್ಕೆ ಫಾತೀಮಾ ಗಂಡ ಇಮಾಮ್‌ಸಾಬ­ರನ್ನು ವಾರಸುದಾ­ರರಾಗಿ ಸೃಷ್ಟಿಸಿ­ದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಬಸವ­ರಾಜ ಬೆಣಕಲ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT