ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕುಟುಂಬದ 9 ಮಂದಿ ಲೋಕಸಭೆಗೆ!

Last Updated 19 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ರಾಜೀವ್ ಗಾಂಧಿ ಭಾರತದ ನಗುಮೊಗದ ರಾಜಕಾರಣಿಗಳಲ್ಲಿ ಒಬ್ಬರು. ಒಂದೇ ಕುಟುಂಬದ ಸದಸ್ಯರು ದೇಶದ ರಾಜಕೀಯದಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡಿ­ರುವುದಕ್ಕೆ ಈ ನೆಹರೂ–ಗಾಂಧಿ ಕುಟುಂಬ ಒಂದು ಉತ್ತಮ ನಿದರ್ಶನ. ಅವರ ತಾತ ನೆಹರೂ ದೇಶದ ಮೊದಲ ಪ್ರಧಾನಿ, ತಾಯಿ ಇಂದಿರಾಗಾಂಧಿ ಭಾರತದ ಮೂರನೇ ಪ್ರಧಾನಿ.

ರಾಜೀವ್ ಗಾಂಧಿ ಅವರ ತಂದೆ ಪಾರ್ಸಿ ಧರ್ಮಕ್ಕೆ ಸೇರಿದ ಫಿರೋಜ್ ಷಾ ಗಾಂಧಿ ಅವರು ಪತ್ರಕರ್ತರು ಮತ್ತು ಮೊದಲನೇ ಲೋಕಸಭೆಗೆ ಉತ್ತರಪ್ರದೇಶದ ರಾಯ್ ಬರೇಲಿಯಿಂದ 1952–57ರ ಅವಧಿಗೆ ಆಯ್ಕೆಯಾಗಿದ್ದರು.
1980ರಲ್ಲಿ ತಮ್ಮ ಸಂಜಯ ಗಾಂಧಿ ವಿಮಾನ ಅಪಘಾತದಲ್ಲಿ  ಮರಣ­ಹೊಂದಿದ ಮೇಲೆ ಇಂದಿರಾಗಾಂಧಿ ಅವರ ಆಗ್ರಹದ ಮೇರೆಗೆ ರಾಜೀವ್ ರಾಜಕೀಯ ಪ್ರವೇಶಿ­ಸಿದರು.

ಸಂಜಯ ಗಾಂಧಿ ಅವರ ಪತ್ನಿ  ಮೇನಕಾ ಗಾಂಧಿ ಅವರು ಈ ಪರಿವಾರಕ್ಕೆ ಸೇರಿದ ಕಾಂಗ್ರೆಸ್ಸೇತರ ಲೋಕಸಭಾ ಸದಸ್ಯೆ. ಅವರು 9,11,12,13,14 ಮತ್ತು 15 ನೆ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರ ಪುತ್ರ ವರುಣ್ ಗಾಂಧಿ ಅವರು 15ನೇ ಲೋಕಸಭೆಗೆ ಉತ್ತರ­ಪ್ರದೇಶದ ಪಿಲಿಭಿತ್  ಕ್ಷೇತ್ರದಿಂದ ಆಯ್ಕೆಯಾ­ಗಿದ್ದರು.

ಇಂದಿರಾಗಾಂಧಿ ಅವರು 1984ರ ಅಕ್ಟೋಬರ್ 31 ರಂದು ಅಂಗರಕ್ಷಕರಿಂದ ಹತ್ಯೆಯಾದ ನಂತರದ ಮಹಾ­ಚುನಾ­ವ­ಣೆಯಲ್ಲಿ ಗೆದ್ದ ರಾಜೀವ್ ಪ್ರಧಾನಿ­ಯಾದರು. ಒಂದೇ ಕುಟುಂಬದಿಂದ ಆಯ್ಕೆಯಾದ ಮೂರನೇ ಪ್ರಧಾನಿ ಇವರು.
7,8,9 ಮತ್ತು 10ನೆ ಲೋಕಸಭೆಗೆ ಆಯ್ಕೆಯಾದ ರಾಜೀವ್ ಅವರು ಮತ್ತೆ ಮತ್ತೆ ಉತ್ತರಪ್ರದೇಶದ ಅಮೇಠಿ ಯಿಂದ ಆಯ್ಕೆಯಾದರು. . ಒಂಬತ್ತನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.

ಕರ್ನಾಟಕದಲ್ಲಿ ವೀರೇಂದ್ರ ಪಾಟೀಲ ಅವರನ್ನು ಅನಿರೀ­ಕ್ಷಿತ­ವಾಗಿ ಮುಖ್ಯ­ಮಂತ್ರಿ ಪದವಿಯಿಂದ ಇಳಿಸಿದ ಪ್ರಕರಣ ಆ ಕಾಲದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿತ್ತು. ರಾಜೀವ್‌ ಹತ್ಯೆಗೆ ಮೊದಲು ನಡೆದ ಮಹಾ­ಚುನಾವಣೆ­ಯಲ್ಲಿ ರಾಜೀವ್ ಕರ್ನಾಟಕದಲ್ಲಿ ಚುನಾವಣಾ ಪ್ರವಾಸ ಮಾಡು­ವಾಗ ಕೇರಳದ ಗಡಿ ಪ್ರದೇಶವಾದ ತಲಪಾಡಿಗೆ ಬಂದಾಗ ಅವರನ್ನು ಆಸ್ಕರ್ ಫರ್ನಾಂಡಿಸ್ ಸ್ವಾಗತಿಸಿದ ಮೇಲೆ ರಾಜೀವ್ ಕಾರಿನಲ್ಲಿ ಕುಳಿತರು.

ಆಗ ಆಸ್ಕರ್ ಹೇಳಿದರು: ‘Sir, mind your head’ (ಸರ್, ದಯವಿಟ್ಟು ನಿಮ್ಮ ತಲೆ ಹುಷಾರು). ’I will have to mind my head’ (ಹೌದು, ನನ್ನ ತಲೆ ಕಾಪಾಡಿ­ಕೊಳ್ಳಬೇಕು). ಆದರೆ ತಮಿಳು­ನಾಡಿನ ಶ್ರೀಪೆರಂಬುದೂರಿನಲ್ಲಿ ಅವರು ಎಲ್‌ಟಿಟಿಇ  ಮಾನವ ಬಾಂಬ್‌ ದಾಳಿಗೆ  ಮೇ 21, 1991ರಂದು ಬಲಿ­ಯಾದರು.

ಆನಂತರ ಇವರ ಪತ್ನಿ  ಸೋನಿಯಾ ಗಾಂಧಿ ಅವರು 13,14,15ನೇ ಲೋಕಸಭೆಗೆ ಆಯ್ಕೆಯಾದರು.  1998ರಿಂದ ಅವರು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದಾರೆ. ಅವರ ಮಗ ರಾಹುಲ್ ಗಾಂಧಿ 14,15ನೇ ಲೋಕಸಭೆಗೆ ಅಮೇಠಿಯಿಂದ ಆಯ್ಕೆ­ಯಾಗಿದ್ದರು. ಹೀಗೆ ಒಂದೇ ಕುಟುಂಬದ ಒಂಬತ್ತು ಮಂದಿ ಲೋಕಸಭೆಗೆ ಪ್ರವೇಶಿಸಿರುವುದೂ ಒಂದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT