ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಸೂರು ಜಾನಪದ ನೂರು

Last Updated 18 ಮೇ 2012, 19:30 IST
ಅಕ್ಷರ ಗಾತ್ರ

ಜಾನಪದವೆಂದರೆ ಮನಸ್ಸು ಅರಳುತ್ತದೆ. ಜಾನಪದ ಕೇವಲ ಪದವಲ್ಲ; ಅದೊಂದು ಸಂಸ್ಕೃತಿ ಹಾಗೂ ಭಾವನೆಗಳ ಹೂಗುಚ್ಛ. ಪ್ರತಿಯೊಂದು ಸಮುದಾಯ ಕೂಡ ಅದರದ್ದೇ ಜಾನಪದದ ಸೊಗಡು ಹೊಂದಿದೆ. ಹಾಗಾಗಿ ವಿಶ್ವದೆಲ್ಲೆಡೆ ತೆರೆದುಕೊಂಡಿರುವ ಜನಪದದ ವೈವಿಧ್ಯ ಸಾವಿರ ಬಗೆಯದು.

ಪಂಜಾಬಿ, ಅಸ್ಸಾಮಿ, ಕೇರಳ, ತಮಿಳುನಾಡು, ಆಂಧ್ರ ಜನರ ಜನಪದದಲ್ಲಿ ಒಂದು ಲಾಲಿತ್ಯವಿದೆ. ಅವುಗಳ ಸೊಬಗನ್ನು ಸವಿದೇ ನೋಡಬೇಕು. ಇಂತಹ ಶ್ರೀಮಂತ ಪರಂಪರೆ ಹೊಂದಿರುವ ಈ ಎಲ್ಲ ಜನಪದ ಸೊಗಡನ್ನು ಒಂದೇ ಸೂರಿನಡಿ ನೋಡಿ ಸವಿಯುವ ಅವಕಾಶ ಸಿಗುವುದು ಬಹಳ ಕಡಿಮೆ. ಇಂತಹ ಅಪೂರ್ವ ಅವಕಾಶವನ್ನು ಬೆಂಗಳೂರಿಗರಿಗೆ ನೀಡುತ್ತಿದೆ ರಿದಂ ಮತ್ತು ರಾಗ ತಂಡ.

ರಿದಂ ಮತ್ತು ರಾಗ ಸಂಸ್ಥೆ `ಫ್ಲಾಕ್ ಇಟ್ ಇಂಡಿಯಾ~ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿದೆ. ದೇಶದೆಲ್ಲೆಡೆ ಇರುವ ಜಾನಪದ ಲೋಕದ ಘಟಾನುಘಟಿಗಳು ಇಲ್ಲಿ ಒಟ್ಟುಗೂಡಿ ಕಾರ್ಯಕ್ರಮ ನೀಡಿ ರಂಜಿಸಲಿದ್ದಾರೆ. ಜಾನಪದ, ಲಾವಣಿ, ಭಾಂಗ್ರ, ದಾಂಡಿಯ, ರಾಜಸ್ತಾನಿ, ಅಸ್ಸಾಮಿ, ಬಂಗಾಲಿ, ಮಣಿಪುರಿ ಮೊದಲಾದ ರಾಜ್ಯಗಳ ಜಾನಪದ ಪ್ರಕಾರಗಳು ಇಲ್ಲಿ ಒಡಮೂಡಲಿವೆ. ಸಂಗೀತ, ನೃತ್ಯ ಇವೆಲ್ಲವೂ ಇದರಲ್ಲಿ ಮೇಳೈಸಲಿವೆ. ಈ ಮೂಲಕ ವೀಕ್ಷಕರನ್ನು ಜಾನಪದ ಲೋಕಕ್ಕೆ ಕೊಂಡೊಯ್ಯುವ ಹಂಬಲ ಆಯೋಜಕರದ್ದು.

ಶ್ರೀಕಿಶನ್, ಸೀಮಾ ರಾಯ್ಕರ್, ಸುಪ್ರತೀಕ್ ಘೋಷ್ ಮತ್ತು ಶರಣ್ ಗುರ್ಜಾರ್ ಸಂಗೀತ ಸಂಜೆಯ ವಿಶೇಷ ಆಕರ್ಷಣೆ. ಜಾನಪದ ಸಾಲುಗಳನ್ನು ಸಂಗೀತದ ಮೂಲಕ ಶನಿವಾರದ (ಮೇ 19) ಸಂಜೆಗೆ ಉಡುಗೊರೆಯಾಗಿ ನೀಡಲಿದ್ದಾರೆ.  ಸ್ಥಳ: ಅಲೈಯೆನ್ಸ್ ಫ್ರಾನ್ಸೆ, ವಸಂತನಗರ ಸಂಜೆ 7.30. ಮುಂಗಡ ಬುಕ್ಕಿಂಗ್‌ಗಾಗಿ www.indianstage.in and www.bookmyshow.com 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT