ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಸಂಘದ ಚುನಾವಣೆ: ಶೇ73 ಮತದಾನ

Last Updated 1 ಅಕ್ಟೋಬರ್ 2012, 7:55 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ.72ರಷ್ಟು ಮತದಾನ ನಡೆಯಿತು. 17 ಸ್ಥಾನಗಳಿಗೆ 39 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ನಗರದ ಜೆವಿಎಸ್ ಕಾಲೇಜಿನಲ್ಲಿ 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 345ರವರೆಗೆ ಮತದಾನ ನಡೆಯಿತು. ಸಂಜೆ 4 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. 17 ನಿರ್ದೇಶಕ ಸ್ಥಾನ ಗಳಿಗೆ 39 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಇದೇ ಮೊದಲ ಬಾರಿಗೆ ಎಲ್ಲ ಸ್ಥಾನ ಗಳಿಗೆ ಚುನಾವಣೆ ನಡೆದಿದ್ದು, ಸದಸ್ಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಂಡುಬಂತು.

ಸುಮಾರು 5 ಸಾವಿರ ಮಂದಿ ಮತದಾರರಿದ್ದು, ಸುಮಾರು 3794 ಮತದಾರರು ಮತ ಚಲಾಯಿಸಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ.

ಮೂಡಿಗೆರೆ ತಾಲ್ಲೂಕು ಮಹಿಳಾ ಕ್ಷೇತ್ರಕ್ಕೆ ಮಾಕೋನಹಳ್ಳಿ ಸಾವಿತ್ರಿ ಸೋಮಶೇಖರ್ 726 ಮತಗಳನ್ನು ಪಡೆದು ಆಯ್ಕೆಯಾದರು.

ಈ ಕ್ಷೇತ್ರಕ್ಕೆ 865 ಮತ ಚಲಾವಣೆಯಾಗಿದ್ದವು. ಇವರ ಪ್ರತಿಸ್ಪರ್ಧಿಯಾಗಿದ್ದ ಬೆಳಗೋಡು ಕೆ.ಆರ್.ಕನಕ ಅವರಿಗೆ 139 ಮತಗಳು ಮಾತ್ರ ಲಭಿಸಿವೆ.

ಕಡೂರು ತರೀಕೆರೆ ಸಾಮಾನ್ಯ ಸ್ಥಾನಕ್ಕೆ ರಂಗೇನಹಳ್ಳಿ ಎಂ.ಡಿ.ದೇವೇಗೌಡ ಚಲಾವಣೆಯಾದ 204 ಮತಗಳ ಪೈಕಿ 125 ಮತಗಳನ್ನು ಪಡೆದು ಆಯ್ಕೆ ಯಾಗಿದ್ದಾರೆ.

ಚಿಕ್ಕಮಗಳೂರಿನ ಸಾಮಾನ್ಯ 2 ಸ್ಥಾನಗಳಲ್ಲಿ ಹಳಿಯೂರಿನ ಎಚ್.ಎಸ್.ಕವೀಶ್ ಹಾಗೂ ಜಿ.ಎಸ್.ಚಂದ್ರಪ್ಪ ಆಯ್ಕೆಯಾಗಿದ್ದಾರೆ. ಚಿಕ್ಕಮಗಳೂರು ಸಾಮಾನ್ಯ ಮಹಿಳಾ ಸ್ಥಾನಕ್ಕೆ  ಮಲ್ಲಂದೂರಿನ ಎಚ್.ಆರ್.ಕನಕ ಆಯ್ಕೆಯಾದರು. ಮೂಡಿಗೆರೆ ಸಾಮಾನ್ಯ ಕ್ಷೇತ್ರಕ್ಕೆ ಮುಗ್ರಹಳ್ಳಿಯ ಪ್ರದೀಪ್ ಕುಮಾರ್ ಆಯ್ಕೆಯಾದರು.
ಉಳಿದ ಸ್ಥಾನಗಳ ಮತ ಎಣಿಕೆ ರಾತ್ರಿಯೂ ಮುಂದುವರಿದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT