ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಸಮಾವೇಶ: ಬಿಜೆಪಿ ಹೈಕಮಾಂಡ್ ಕ್ರಮಕ್ಕೆ ಖಂಡನೆ

Last Updated 9 ಜುಲೈ 2012, 8:30 IST
ಅಕ್ಷರ ಗಾತ್ರ

ಚಿಂತಾಮಣಿ: ಭ್ರಷ್ಟಾಚಾರ ಸೇರಿದಂತೆ ಯಾವುದೇ ಹಗರಣಗಳಿಲ್ಲದೆ ಅಧಿಕಾರ ನಡೆಸಿದ ಮುಖ್ಯಮಂತ್ರಿ ಸದಾನಂದಗೌಡರನ್ನು ಪದಚ್ಯುತಗೊಳಿಸಿದ ಬಿಜೆಪಿ ಹೈಕಮಾಂಡ್ ಕ್ರಮವನ್ನು ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸಿದೆ.

ಭಾನುವಾರ ನಗರದಲ್ಲಿ ನಡೆದ ಅಂಬಾಜಿದುರ್ಗ ಹೋಬಳಿಯ ಒಕ್ಕಲಿಗರ ಸಭೆಯಲ್ಲಿ ಮಾತನಾಡಿದ ಮುಖಂಡರೆಲ್ಲ ಸದಾನಂದಗೌಡರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿದ್ದನ್ನು ಕಠಿಣವಾಗಿ ಟೀಕಿಸಿದರು.

ಹಿಂದಿನ ಮುಖ್ಯಮಂತ್ರಿಗಳ ಭ್ರಷ್ಟಾಚಾರ ಹಗರಣ, ಸ್ವಜನಪಕ್ಷಪಾತ ತೀರ್ಮಾನಗಳಿಂದ ಇಡೀ ದೇಶದಲ್ಲಿ ರಾಜ್ಯದ ಮಾನ ಹೋದ ಸಮಯ ಅಧಿಕಾರ ವಹಿಸಿಕೊಂಡ ಸದಾನಂದಗೌಡ ಉತ್ತಮ ಆಡಳಿತ ನೀಡಿದ್ದಾರೆ. ಭ್ರಷ್ಟಾಚಾರ ಮುಚ್ಚಿಹಾಕಲು ಸಹಕಾರ ನೀಡಲಿಲ್ಲ ಎಂಬ ಏಕೈಕ ಕಾರಣದಿಂದ ಭ್ರಷ್ಟರು, ಜೈಲಿಗೆ ಹೋದವರೆಲ್ಲ ಸೇರಿಕೊಂಡು ಸದಾನಂದಗೌಡರನ್ನು ಕೆಳಗಿಳಿಸಲು ಒತ್ತಡ ತಂದು ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟಶಿವಾರೆಡ್ಡಿ, ನಗರಸಭೆ ಉಪಾಧ್ಯಕ್ಷ ಎಲ್.ಚೌಡರೆಡ್ಡಿ, ವಕೀಲ ಪಾಪಿರೆಡ್ಡಿ, ಲಕ್ಷ್ಮೀದೇವನಕೋಟೆ ನಾರಾಯಣಸ್ವಾಮಿ, ಪ್ರಕಾಶರೆಡ್ಡಿ, ಶಿವಾರೆಡ್ಡಿ, ಕೆಂಪರೆಡ್ಡಿ, ಲಕ್ಷ್ಮಣರೆಡ್ಡಿ, ರೆಡ್ಡಪ್ಪ, ರಾಮಚಂದ್ರ, ಮುನಿರೆಡ್ಡಿ ಅವರು ಹೋಬಳಿ ಒಕ್ಕಲಿಗರ ಸಮಾವೇಶದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT