ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆದ ಮನಸ್ಸು ಬೆಸೆಯುವ ಸಾಹಿತ್ಯ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕನಕಪುರ: ಸಮಾಜದ ಮೇಲೆ ದುಷ್ಪರಿಣಾಮ ಬೀರುವಂತಹ ಸಾಹಿತ್ಯವನ್ನು ಸದೆ  ಬಡೆದು ಸಮಾನತೆ ಕಾಪಾಡುವ ಸಾಹಿತ್ಯವನ್ನು ಪೋಷಿಸುವ ನಿಟ್ಟಿನಲ್ಲಿ ಹೊಸ ಸಾಹಿತಿಗಳು ಕಲಾವಿದರು ಕಾರ್ಯನಿರ್ವಹಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಾಮಲಿಂಗೇಶ್ವರ (ಸಿಸಿರಾ) ಕರೆ ನೀಡಿದರು.

ತಾಲ್ಲೂಕು ಸಾತನೂರು ಹೋಬಳಿ ಸಾಸಲಾಪುರ ಗ್ರಾಮದಲಿ ್ಲಕನ್ನಡ ಗೆಳೆಯರ ಬಳಗ ಏರ್ಪಡಿಸಿದ್ದ ರಂಗಗೀತೆ ಸ್ಪರ್ಧೆ ಮತ್ತು ಕವಿಗೋಷ್ಠಿ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

 ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದಲ್ಲಿನ ಮನಸ್ಸುಗಳನ್ನು ಬೆಸೆಯುತ್ತವೆ. ಅಂಥ ಸಾಹಿತ್ಯವನ್ನು ರಚಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ದ್ವೇಷ-ಅಸೂಯೆಗಳನ್ನು ಹೋಗಲಾಡಿಸಿ ಮನುಷ್ಯ ಮನುಷ್ಯರನ್ನು ಪ್ರೀತಿ ವಿಶ್ವಾಸದಿಂದ ಸಹಬಾಳ್ವೆ ನಡೆಸುವಂತೆ ಸದಾಭಿರುಚಿಯ ಕಥೆ, ಕವನ, ಸಾಹಿತ್ಯ ರಚನೆ ಮಾಡಬೇಕೆಂದರು.

ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸರಗಳ್ಳಿ ಮಾತನಾಡಿ ಸಂಘಸಂಸ್ಥೆಗಳು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಬೇಕಾಗಿದೆ.

ಗೆಳೆಯರ ಬಳಗದ ಪದಾಧಿಕಾರಿಗಳು ತಮ್ಮ ದೈನಂದಿನ ಚಟುವಟಿಕೆಗಳ ಜೊತೆ ಕನ್ನಡ, ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸಿ ಶಾಲಾ ಮಕ್ಕಳಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ವಿಚಾರಧಾರೆಗಳನ್ನು ತಿಳಿಸುವ ಮೂಲಕ ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು. ಈ ಹಿಂದೆ ಸಾತನೂರು ವ್ಯಾಪ್ತಿಯಲ್ಲಿ ನಿವೃತ್ತ ಕೃಷಿ ಅಧಿಕಾರಿ ರಂಗಸ್ವಾಮಿ ನಿರಂತರ ಸಾಹಿತ್ಯ ಚಟುವಟಿಕೆಗಳನ್ನು ಜರುಗುತ್ತಿದ್ದವು. ಇತ್ತೀಚೆಗೆ ಯಾವ ಕಾರ್ಯಕ್ರಮಗಳನ್ನು ನಡೆಯುತ್ತಿಲ್ಲವೆಂದು ವಿಷಾಧಿಸಿದರು.

ಸಾಹಿತಿ ಸಾ.ಮ.ಶಿವಮಲ್ಲಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ರಂಗಕಲೆ ಸಾಹಿತ್ಯ ಸಂಸ್ಕೃತಿ ನಶಿಸುತ್ತಿದೆ. ಅವುಗಳನ್ನು ಮತ್ತೆ ಕಾಣಬೇಕಾದರೆ ನಾಟಕ, ಜನಪದ, ಕಲೆ, ರಂಗಗೀತೆ ಗಾಯನಗಳು ರೂಢಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.ಆರ್.ಇ.ಎಸ್. ಕಾರ್ಯದರ್ಶಿ ನಾಗರಾಜು, ಗೆಳೆಯ ಬಳಗದ ಎಸ್.ಪಿ. ರಾಮಕೃಷ್ಣ, ಸ್ಪರ್ಧಾ ತೀರ್ಪುಗಾರರಾದ ಆಕಾಶವಾಣಿ ಕಲಾವಿದ ಚಿಕ್ಕಮರಿಗೌಡ ಹಾಗೂ ಮಹದೇವಸ್ವಾಮಿ ಉಪಸ್ಥಿತರಿದ್ದರು.

ಕಬ್ಬಾಳು ಫ್ರೌಢಶಾಲೆ ಮುಖ್ಯಶಿಕ್ಷಕ ಸಿ. ಪುಟ್ಟಸ್ವಾಮಿರವರನ್ನು ಸನ್ಮಾನಿಸಲಾಯಿತು. ಶಿವಶಂಕರ್‌ಮೂರ್ತಿ ಹಾಗೂ ಮಹದೇವಸ್ವಾಮಿ ನೀತಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಾ.ಮಾ. ಮಾಯಣ್ಣ ವಿಶ್ವರಾಧ್ಯ, ಸುಜಾತದಾಸ್,  ಕೆ. ಪ್ರಕಾಶ್ ಕವನ ವಚನ ಮಾಡಿದರು.

ರಂಗಗೀತೆ ಸ್ಪರ್ಧೆಯಲ್ಲಿ ಮರಿಯಯ್ಯ ಪ್ರಥಮ ಹಾಗೂ ಸಾಸಲಾಪುರ ಪುಟ್ಟಲಿಂಗೇಗೌಡ ದ್ವಿತೀಯಾ, ಹರಿಹರ ಮುತ್ತುರಾಜು ತೃತೀಯಾ ಬುಹುಮಾನವನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT