ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಾಮ ಆಡಳಿತದಲ್ಲಿ ಭಾರತೀಯರ ನೇಮಕ

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಒಬಾಮ ಆಡಳಿತವು ಭಾರತೀಯ ಮೂಲದ ಸ್ಮಿತಾ ಸಿಂಗ್ ಅವರನ್ನು ಅಮೆರಿಕದ ಜಾಗತಿಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ.

`ಜಾಗತಿಕ ಅಭಿವೃದ್ಧಿಗೆ ಸಂಬಂಧಿಸಿದ ನೀತಿಗಳು ಹಾಗೂ ಆಚರಣೆಗಳ ಕುರಿತು ಈ ಮಂಡಳಿಯು ಅಮೆರಿಕದ ಅಧ್ಯಕ್ಷರು ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ' ಎಂದು ಶ್ವೇತಭವನ ತಿಳಿಸಿದೆ.

1998ರಿಂದ 2001ರವರೆಗೆ ಸ್ಮಿತಾ ಅವರು `ಹಾರ್ವರ್ಡ್ ಅಕಾಡೆಮಿ ಫಾರ್ ಇಂಟರ್‌ನ್ಯಾಷನಲ್ ಆಂಡ್ ಏರಿಯಾ ಸ್ಟಡೀಸ್'ನಲ್ಲಿ ವಿದ್ಯಾರ್ಥಿನಿಯಾಗಿದ್ದರು.
ಅಲ್ಲದೇ ವಿಶ್ವಬ್ಯಾಂಕ್ ಹಾಗೂ ಆಫ್ರಿಕಾಕ್ಕೆ ವಿಶ್ವಸಂಸ್ಥೆಯ ಆರ್ಥಿಕ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು.

ಭಾರತೀಯನಿಗೆ ಪ್ರಶಸ್ತಿ

ಐಬಿಎಂ ಸಂಶೋಧಕ, ಭಾರತೀಯ ಮೂಲದ ರಂಗಸ್ವಾಮಿ ಶ್ರೀನಿವಾಸನ್ ಅವರನ್ನು ತಾಂತ್ರಿಕ ಆವಿಷ್ಕಾರಕ್ಕೆ ನೀಡುವ ಅಮೆರಿಕ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಬರಾಕ್ ಒಬಾಮ ಅವರು ಈ ಪ್ರಶಸ್ತಿಗೆ ಇನ್ನೂ 12 ಸಂಶೋಧಕರನ್ನು ಆಯ್ಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT