ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಾಮ ಪ್ರಚಾರ ಕಚೇರಿಗೆ ಗುಂಡು (ಸಂಕ್ಷಿಪ್ತ ಸುದ್ದಿ:)

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಒಬಾಮ ಪ್ರಚಾರ ಕಚೇರಿಗೆ ಗುಂಡು

ವಾಷಿಂಗ್ಟನ್ (ಪಿಟಿಐ):  ಅಪರಿಚಿತರು ಹಾರಿಸಿದ ಗುಂಡೊಂದು ಅಮೆರಿಕದ ಕೊಲೆರೆಡೊ ರಾಜ್ಯದ ಡೆನ್ವರ್‌ನಲ್ಲಿರುವ ಅಧ್ಯಕ್ಷ ಒಬಾಮ ಅವರ ಚುನಾವಣಾ ಪ್ರಚಾರ ಕಚೇರಿಯ ಕಿಟಕಿಗೆ ತಗುಲಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ಘಟನೆ ಶುಕ್ರವಾರ ಸಂಭವಿಸಿದೆ ಎಂದಿರುವ ಡೆನ್ವರ್ ಪೊಲೀಸರು ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೊಲೆರೆಡೊದಲ್ಲಿ ಒಬಾಮ ಅವರ ಚುನಾವಣಾ ಪ್ರಚಾರಕ್ಕಾಗಿ 30 ಕಚೇರಿಗಳಿವೆ.

ಹೆಲಿಕಾಪ್ಟರ್ ದುರಂತ: 3 ಬಲಿ


ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕದ ಟೆಕ್ಸಾಸ್ ರಾಜ್ಯದ ವಾಯುವ್ಯ ಭಾಗದಲ್ಲಿರುವ ಕೆಂಡಲ್ ಪ್ರಾಂತ್ಯದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತ: ಮೂವರ ಸಾವು


ಮಾಸ್ಕೊ (ಎಪಿ): ಉಕ್ರೇನ್‌ನ ಕಪ್ಪು ಸಮುದ್ರದ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೂರು ಮಂದಿ ನೌಕಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಶನಿವಾರ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.ರಷ್ಯಾದ ನೌಕಾಪಡೆಗೆ ಸೇರಿದ ಬೆರಿಹೇವ್ ಬಿಇ-12 ದ್ವಿ ಎಂಜಿನ್ ಟರ್ಬೊಪ್ರಾಪ್ ವಿಮಾನ ಉಕ್ರೇನ್‌ನ ಕ್ರಿಮೀನ್ ಪೆನ್ನಿಸ್ಯುಲ ನೆಲೆಯ ಬಳಿ ಅಪಫಾತಕ್ಕೊಳಗಾಗಿದೆ.
 
ವಿಮಾನದಲ್ಲಿದ್ದ ನಾಲ್ವರು ನೌಕಾ ಸಿಬ್ಬಂದಿ ಪೈಕಿ ಮೂವರು ಮೃತಪಟ್ಟಿದ್ದು, ಬದುಕುಳಿದಿರುವವನ ಸ್ಥಿತಿ ಗಂಭೀರವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT