ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬ ಸೈನಿಕನಿಗಾಗಿ 1,027 ಕೈದಿಗಳ ಬಿಡುಗಡೆ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಜೆರುಸಲೇಂ (ಪಿಟಿಐ): ಇಸ್ರೇಲ್ ಈಗ ತನ್ನ ಸೈನಿಕ ಗಿಲದ್ ಶಲಿತ್‌ನ ಬರುವಿಕೆಗಾಗಿ ಕಾತರದಿಂದ ಕಾಯುತ್ತಿದೆ.

1,935 ದಿನಗಳಿಂದ ಹಮಾಸ್ ಉಗ್ರರ ಒತ್ತೆಯಲ್ಲಿರುವ ಶಲಿತ್‌ನನ್ನು ಬಿಡುಗಡೆಗೊಳಿಸುವುದಕ್ಕಾಗಿ ಜೈಲಿನಲ್ಲಿರುವ 1,027 ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆಗೊಳಿಸಲು ಇಸ್ರೇಲ್ ಸಮ್ಮತಿಸಿದೆ. ಈ ಸಂಬಂಧ ಇಸ್ರೇಲ್ ಹಾಗೂ ಉಗ್ರ ಸಂಘಟನೆ ನಡುವೆ ಒಪ್ಪಂದ ನಡೆದಿದೆ.

ಸೈನಿಕನ ಬಿಡುಗಡೆಗಾಗಿ ಐದು ವರ್ಷಗಳಿಂದ ನಡೆದ ಮಾತುಕತೆ ಹಲವು ಬಾರಿ ಮುರಿದು ಬಿದ್ದಿತ್ತು. ಆದರೆ ಈಗ ಇಸ್ರೇಲ್ ಸಚಿವ ಸಂಪುಟ ಈ ಒಪ್ಪಂದಕ್ಕೆ ಸಹಿ ಹಾಕಲು ಸಮ್ಮತಿ ಸೂಚಿಸಿದೆ. ಮಂಗಳವಾರ ಸಂಜೆ ತುರ್ತಾಗಿ ನಡೆದ ಮತದಾನದಲ್ಲಿ 26 ಸಚಿವರು ಒಪ್ಪಂದದ ಪರ ಮತ ಹಾಕಿದ್ದರೆ, ಮೂವರು ವಿರುದ್ಧ ಮತ ಹಾಕಿದರು.

`ಗಿಲದ್ ಶಲಿತ್ ಬಿಡುಗಡೆಗಾಗಿ ಹಮಾಸ್ ಸಂಘಟನೆಯೊಂದಿಗಿನ ಮಾತುಕತೆಯನ್ನು ನಾವು ಪೂರ್ಣಗೊಳಿಸಿದ್ದೇವೆ. ಶೀಘ್ರದಲ್ಲಿ ಅವರು ಸ್ವದೇಶಕ್ಕೆ ಮರಳಲಿದ್ದಾರೆ~ ಎಂದು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪ್ರಧಾನಿ  ಬೆಂಜಮಿನ್ ನೆತಾನ್ಯಹು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT